ತ್ರಿಪದಿ ಕವಿ ಸರ್ವಜ್ಞ ಜಯಂತ್ಯೋತ್ಸವ 2025..
ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿ..
ಕುಂಬಾರ ಸಮುದಾಯದ ಮುಖಂಡರ ಮನವಿ..
ಬೆಳಗಾವಿ : ದಿನಾಂಕ 20/02/2025 ರಂದು ನಡೆಯುವ ತ್ರಿಪದಿ ಕವಿ ಸರ್ವಜ್ಞ ಜಯಂತಿಯ ಕುರಿತು ಪೂರ್ವಭಾವಿ ಸಭೆ ಹಾಗೂ ಸುದ್ದಿಗೋಷ್ಠಿ ನಡೆಸಲಾಗಿದ್ದು ಜಯಂತಿಯ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಕುಂಬಾರರ ಸಮುದಾಯದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಯಂತಿಯನ್ನು ಯಶಸ್ವಿ ಗೊಳಿಸಬೇಕೆಂದು ಸುರೇಶ್ ವೈದ್ಯ (ಕುಂಬಾರ) ಹಾಗೂ ನಿಂಗಪ್ಪ ಕುಂಬಾರ ಅವರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೋಮವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇದೇ ಇಪ್ಪತ್ತನೆಯ ತಾರೀಕಿನಂದು ತ್ರಿಪದಿ ಕವಿ ಸರ್ವಜ್ಞ ಅವರ ಜಯಂತಿ ಉತ್ಸವ – 2025ನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದು ಸರ್ವರೂ ಇದರಲ್ಲಿ ಭಾಗಿಯಾಗಿ ಕಾರ್ಯಕ್ರಮಕ್ಕೆ ಶೋಭೆ ತರಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಜಯಂತಿ ಆಚರಣೆಯ ವೇದಿಕೆ ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸನ್ಮಾನ ಅದೇರೀತಿ ವಿಧ್ಯಾರ್ಥಿ ಸಮೂಹದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತಿದ್ದು, ಪ್ರಸ್ತುತ ಸಮಾಜಕ್ಕೆ ಸರ್ವಜ್ಞ ಅವರ ವಚನಗಳು ಎಷ್ಟು ಅವಶ್ಯಕ ಮತ್ತು ಅನುಕೂಲ ಎಂಬ ವಿಷಯದ ಕುರಿತಾದ ಮಹತ್ವದ ಉಪನ್ಯಾಸವಿರುತ್ತದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುಂಬಾರ ಸಂಘ ಬೆಳಗಾವಿಯ ಜಿಲ್ಲಾಧ್ಯಕ್ಷರಾದ ಸುರೇಶ ವೈದ್ಯ (ಕುಂಬಾರ), ಕರ್ನಾಟಕ ಕುಂಬಾರರ ಯುವ ಸೈನ್ಯ ಬೆಳಗಾವಿಯ ಜಿಲ್ಲಾಧ್ಯಕ್ಷರಾದ ನಿಂಗಪ್ಪಾ ಕುಂಬಾರ, ಯುವ ಸೈನ್ಯ ಜಿಲ್ಲಾ ಉಸ್ತುವಾರಿಗಳಾದ ರಮೇಶ್ ಕುಂಬಾರ್, ನಿಂಗಪ್ಪಾ ಕುಂಬಾರ (ರಾಯಬಾಗ) ಸಿ ಬಿ ಯುಡೋರ, ಆಯ್ ಎಸ್ ಕುಂಬಾರ್, ಬಸವರಾಜ ಕುಂಬಾರ್, ಶಿವರುದ್ರಪ್ಪ ಕುಂಬಾರ ಹಾಗೂ ಅಣ್ಣಪ್ಪ ಕುಂಬಾರ ಸಮಾಜದ ಮುಖಂಡರ ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ.