ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಆಚರಣೆ..

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಆಚರಣೆ..

ಶಿಂದೊಳಿಯಿಂದ – ಸುವರ್ಣ ಸೌಧದವರೆಗೆ 12ಕಿಮೀ ಮಾನವ ಸರಪಳಿ..

ಸಕಲ ಸಿದ್ಧತೆಯಲ್ಲಿರುವ ಪಾಲಿಕೆಯ ನಾಲ್ಕು ತಂಡಗಳು..

ಬೆಳಗಾವಿ : ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಇದೇ ತಿಂಗಳು, ದಿನಾಂಕ 15ರಂದು, ಆಚರಿಸಲ್ಪಡುವ, “ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚಣೆಯ” ಪೂರ್ವಭಾವಿ ಸಭೆಯನ್ನು ಇಂದು ಮಂಗಳವಾರ ಮಹಾನಗರ ಪಾಲಿಕೆಯ ಪರಿಷತ್ ಸಭಾ ಭವನದಲ್ಲಿ ನಡೆಸಲಾಗಿದೆ..

ಉದಯಕುಮಾರ ತಳವಾರ, ಉಪ ಆಯುಕ್ತರು ಆಡಳಿತ ಹಾಗೂ ರೇಷ್ಮಾ ತಾಳಿಕೋಟೆ, ಉಪ ಆಯುಕ್ತರು ಕಂದಾಯ ಇವರ ನೇತೃತ್ವದಲ್ಲಿ ನಡೆದ ಈ ಪೂರ್ವಭಾವಿ ಸಭೆಯಲ್ಲಿ, ಪಾಲಿಕೆಯ ಆರೋಗ್ಯ, ಕಂದಾಯ, ಅಭಿವೃದ್ಧಿ, ಹಾಗೂ ವಿದ್ಯುತ್ ವಿಭಾಗದ ಸಿಬ್ಬಂದಿಗಳು ಹಾಜರಿದ್ದು, ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ..

ಈ ವಿಶೇಷವಾದ “ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ” ಅಂಗವಾಗಿ, ಮಾನವ ಸರಪಳಿ ನಿರ್ಮಿಸುವ ಮಹತ್ತರ ಮತ್ತು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಾಕಿಕೊಂಡಿದ್ದು,
ಈ ವಿಶೇಷ ಪ್ರಯತ್ನಕ್ಕೆ ಕೈ ಜೋಡಿಸಿರುವ ಮಹಾನಗರ ಪಾಲಿಕೆಯು, ಈ ಆಚರಣೆಯಲ್ಲಿ ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯದ ಕುರಿತಾಗಿ ಸವಿಸ್ತಾರವಾಗಿ ಚರ್ಚಿಸಿ, ಒಮ್ಮತದ ನಿರ್ಧಾರಕ್ಕೆ ಬಂದಿರುವ ಮಾಹಿತಿಯಿದೆ..

ಶಿಂದೊಳಿ ಗ್ರಾಮದಿಂದ ಸುವರ್ಣ ಸೌಧದವರೆಗೆ ಸುಮಾರು 12 ಕಿಮೀ, ಮಾನವ ಸರಪಳಿ ನಿರ್ಮಿಸುವ ಯೋಜನೆಯಿದ್ದು, ಇಲ್ಲಿ ನಾಲ್ಕು ತಂಡಗಳಾಗಿ ವಿಂಗಡಿಸಿ, ಒಂದೊಂದು ತಂಡದವರು 3 ಕಿಮೀಗಳನ್ನು ತಮ್ಮ ತಂಡಕ್ಕೆ ಅಂತಾ ಹಂಚಿಕೊಂಡಿದ್ದಾರೆ..

ಮೊದಲನೇ ತಂಡದ ನೇತೃತ್ವವನ್ನು ಆರೋಗ್ಯ ಅಧಿಕಾರಿಗಳು ಪಡೆದಿದ್ದು, ಇದರಲ್ಲಿ ಆರೋಗ್ಯ ವಿಭಾಗದ ಸಿಬ್ಬಂದಿಗಳು ಭಾಗಿಯಾಗುತ್ತಿದ್ದು, ಇದರಲ್ಲಿ ಮತ್ತೆ ಮೂರು ಗುಂಪುಗಳನ್ನು ಮಾಡಿ, ಒಂದು ಗುಂಪಿಗೆ 1ಕಿಮೀ ನಂತೆ, ಮೂರು ಗುಂಪಿಗೆ 3ಕಿಮೀ, ಮಾನವ ಸರಪಳಿ ಯಲ್ಲಿ ಭಾಗಿಯಾಗುವ ಜವಾಬ್ದಾರಿ ನೀಡಿದ್ದಾರೆ..

ಇನ್ನು ಎರಡನೇ ತಂಡವನ್ನು ಉಪ ಆಯುಕ್ತರು ಕಂದಾಯ, ಇವರು ಮುನ್ನಡೆಸುತ್ತಿದ್ದು, ಇದರಲ್ಲಿ ಕಂದಾಯ ವಿಭಾಗದ ಸಿಬ್ಬಂದಿಗಳು ಭಾಗಿಯಾಗುತ್ತಿದ್ದು, ಇದರಲ್ಲಿ ಕೂಡಾ ಮೂರು ಗುಂಪು ಮಾಡಿ, ಮೂರು ಕಿಮೀ ಅಂದರೆ 3 ರಿಂದ 6ವರೆಗೆ ಮಾನವ ಸರಪಳಿಯಲ್ಲಿ ಭಾಗಿಯಾಗಲಿದ್ದಾರೆ..

ಇನ್ನು ಮೂರನೇ ತಂಡವನ್ನು ನಗರ ಯೋಜನಾಧಿಕಾರಿಗಳು ಮುನ್ನಡೆಸುತ್ತಿದ್ದು, ಇವರು ಕೂಡಾ ಮೂರು ಗುಂಪು ಮಾಡಿ, ಮೂರು ಕಿಮೀ ಅಂದರೆ 6 ರಿಂದ 9ಕಿಮೀ ವರೆಗೆ ಭಾಗಿಯಾಗುವರು..

ಇನ್ನು ನಾಲ್ಕನೇ ತಂಡಕ್ಕೆ ಉಪಆಯುಕ್ತರು ಅಭಿವೃದ್ಧಿ ಅವರ ಮುಂದಾಳತ್ವವಿದ್ದು, ಇದರಲ್ಲಿಯೂ ಮೂರು ಗುಂಪುಗಳಾಗಿ, 9 ರಿಂದ 12 ಕಿಮೀ ಮಾನವ ಸರಪಳಿಯಲ್ಲಿ ಭಾಗಿಯಾಗುವರೆಂಬ ನಿರ್ಣಯವಾಗಿದ್ದು ಸೆಪ್ಟೆಂಬರ್ 15ರಂದು ನಡೆಯುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅತೀ ಯಶಸ್ವಿಯಾಗಿ ಆಚರಣೆ ಮಾಡಲು ಬೆಳಗಾವಿ ಪಾಲಿಕೆ ಸಿಬ್ಬಂದಿಗಳು ಸಕಲ ಸಿದ್ದವಾಗಿದ್ದರೆಂಬ ಸೂಚನೆ ನೀಡಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..