ಅಂಬೇಡ್ಕರ ಜಯಂತಿಯ ಅಂಗವಾಗಿ ಪಾಲಿಕೆಯಿಂದ ವಿಶೇಷ ಕಾರ್ಯಕ್ರಮ..
ಲ್ಯಾಪಟ್ಯಾಪ್, ಗಾಲಿ ಕುರ್ಚಿಗಳು, ಉಪಹಾರ ಕಿಟ್, ಸುರಕ್ಷಾ ದಿರಿಸುಗಳ ವಿತರಣೆ..
ಬೆಳಗಾವಿ : ಕಳೆದ ಸೋಮವಾರ ದಿನಾಂಕ 14/04/2025 ರಂದು ಭಾರತರತ್ನ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತಿಯ ಅಂಗವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಪಾಲಿಕೆಯ ಕಚೇರಿಯಲ್ಲಿ ಹಾಗೂ ಅಂಬೇಡ್ಕರ ಉದ್ಯಾನವನದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪಾಲಿಕೆಯಿಂದ ದೊರೆಯುವ ಕೆಲ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಸಾರ್ಥಕ ಕಾರ್ಯವಾಗಿದೆ.

ಪಾಲಿಕೆಯ ಮಹಾಪೌರರಾದ ಮಂಗೇಶ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ/ ಪಂಗಡ ಹಾಗೂ ಇತರೆ ಬಡವರ್ಗಗಳಿಗೆ ಸೇರಿದ ಬಿಇ ಹಾಗೂ ಎಂಬಿಬಿಎಸ್ ಅಧ್ಯಯನ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಪೌರ ಕಾರ್ಮಿಕರಿಗೆ ಸುರಕ್ಷಾ ಧಿರಿಸು ಮತ್ತು ಉಪಹಾರ ಸೇವಿಸುವ ಸಾಮಗ್ರಿಗಳ ಕಿಟ್, ವಿಕಲಚೇತನರಿಗೆ ಯಂತ್ರಚಾಲಿತ ಗಾಲಿ ಕುರ್ಚಿಗಳನ್ನು ವಿತರಿಸಲಾಗಿದೆ.

ಏಪ್ರಿಲ್ ಹದಿನಾಲ್ಕರಂದು ಎರಡು ಕಡೆಗಳಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲಿಕೆಯ ಮಹಾಪೌರರಾದ ಮಂಗೇಶ್ ಪವಾರ, ಉಪಮಹಾಪೌರರಾದ ವಾಣಿ ವಿಲಾಸ ಜೋಶಿ, ಜಿಲ್ಲಾಧಿಕಾರಿಗಳಾದ ಮಹಮ್ಮದ ರೋಷನ್, ಪೊಲೀಸ್ ಆಯುಕ್ತರಾದ ಈಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ ಭೀಮಾಶಂಕರ ಗುಳೇದ, ಪಾಲಿಕೆಯ ಆಯುಕ್ತರಾದ ಶುಭ ಬಿ, ಉಪ ಆಯುಕ್ತರಾದ (ಆಡಳಿತ) ಉದಯಕುಮಾರ ಬಿ ಟಿ, ಪಾಲಿಕೆಯ ಆಡಳಿತ ಪಕ್ಷದ ನಾಯಕರಾದ ಗಿರೀಶ್ ದೊಂಗಡಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ಶ್ರೀಶೈಲ ಕಾಂಬಳೆ ಹಾಗೂ ಪಾಲಿಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..