ಅಂಬೇಡ್ಕರ ಶಕ್ತಿ ಸಂಘಟನೆಯಿಂದ ಪಿಡಿಒಗಳ ಮೇಲೆ ಭ್ರಷ್ಠಾಚಾರದ ಆರೋಪ.
ಆರೋಪ ಪರಿಶೀಲಿಸಿ ವರದಿ ನೀಡಲು ತನಿಖಾ ಸಮಿತಿಯ ರಚನೆ..
ತಪ್ಪಿತಸ್ಥ ಪಿಡಿಒಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ..
ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಬೆಳಗಾವಿ..
ಬೆಳಗಾವಿ : ಡಾ ಬಿ ಆರ್ ಅಂಬೇಡ್ಕರ ಶಕ್ತಿ ಸಂಘಟನೆ ವತಿಯಿಂದ 2024 ರ ಏಪ್ರಿಲ್ ನಲ್ಲಿ ತಾಲೂಕಿನ ಕೆಲ ಪಿಡಿಒ ವಿರುದ್ದ ಭ್ರಷ್ಟಾಚಾರದ ಆರೋಪವಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ಅರ್ಜಿ ನೀಡಿದ್ದು, ಕಾರಣಾಂತರಗಳಿಂದ ಅದು ನಿಧಾನವಾಗಿದ್ದು, ಈಗ ತನಿಖಾ ತಂಡ ರಚಿಸಿ, ಇನ್ನು ಹದಿನೈದು ದಿನಗಳ ಒಳಗಾಗಿ ಸೂಕ್ತ ವರದಿ ನೀಡಲು ಅದೇಶಿಸಿದ್ದೇನೆ ಎಂದು ಬೆಳಗಾವಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ..

ಶುಕ್ರವಾರ ದಿನಾಂಕ 07/03/2025 ರಂದು ನಗರದ ಡಾ ಬಿ ಆರ್ ಅಂಬೇಡ್ಕರ ಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಲಕ್ಷಣ ಕೋಲಕಾರ ಅವರ ನೇತೃತ್ವದಲ್ಲಿ ಸಂಘಟನೆಯ ಸದಸ್ಯರು ತಮಟೆ ಬಾರಿಸುವ ಮೂಲಕ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದು, ತಾಲೂಕಿನ ವಿವಿಧ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒಗಳಾದ ಬರ್ಗಿ, ರಾನಮ್ಮ ಮಾದರ ಹಾಗೂ ಉಷಾ ಅವರ ಮೇಲೆ ಭ್ರಷ್ಟಾಚಾರದ ಆರೋಪ ಇದ್ದು ಇನ್ನೂವರೆಗೂ ಕ್ರಮ ಆಗಿಲ್ಲವೆಂದು ತಾಪಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ ತಮಟೆ ಪ್ರತಿಭಟನೆಕಾರರ ಮನವಿ ಸ್ವೀಕರಿಸಿ, ಮೇಲಿನಂತೆ ತಿಳಿಸಿದ್ದಾರೆ.

ಇನ್ನು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ದಶರಥ ಕೋಲಕಾರ ಅವರು ಮಾತನಾಡಿ, ತಾಲೂಕು ಪಂಚಾಯತಿ ಅಧಿಕಾರಿಗಳಿಂದ ನಮಗೆ ಇಲ್ಲಿವರೆಗೆ ಸರಿಯಾದ ಸ್ಪಂದನೆ ದೊರೆತಿರಲಿಲ್ಲ, ಇಂದು ಜಿಲ್ಲಾ ಪಂಚಾಯತಿ ಅಧಿಕಾರಿಗಳು ಇಲ್ಲಿಗೆ ಬಂದು ನಮಗೆ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ನಾವು ಪ್ರತಿಭಟನೆಗೆ ಇಳಿದಿದ್ದು, ಈಗ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹದಿನೈದು ದಿನಗಳ ಒಳಗಾಗಿ ತನಿಖೆ ಮಾಡಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಆದೇಶ ಹೊರಡಿಸಿದ್ದು, ನಾವು ಹದಿನೈದು ದಿನ ಕಾಯುತ್ತೇವೆ, ಮತ್ತೆ ನಿಧಾನತೆ ಕಂಡುಬಂದರೆ ಜಿಪಂ ಎದುರಿಗೆ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ ಎಂದಿದ್ದಾರೆ..
ವರದಿ ಪ್ರಕಾಶ ಬಸಪ್ಪ ಕುರಗುಂದ.