ಅಂಬೇಡ್ಕರ ಶಕ್ತಿ ಸಂಘಟನೆಯ ನೂತನ ಶಾಖೆಯ ಉದ್ಘಾಟನೆ..

ಅಂಬೇಡ್ಕರ ಶಕ್ತಿ ಸಂಘಟನೆಯ ನೂತನ ಶಾಖೆಯ ಉದ್ಘಾಟನೆ..

ಶಿಕ್ಷಣ ಸಂಘಟನೆ ಹೋರಾಟ ಸರ್ವಕಾಲಕ್ಕೂ ಪ್ರಸ್ತುತ..

ನ್ಯಾಯ ಸಿಗಬೇಕಾದರೆ ಹೋರಾಟಗಳು ಅಗತ್ಯವಾಗಿವೆ.

ಲಕ್ಷ್ಮಣ ಕೋಲಕಾರ, ರಾಜ್ಯಾಧ್ಯಕ್ಷರು ಅಂಬೇಡ್ಕರ ಶಕ್ತಿ ಸಂಘಟನೆ ಬೆಳಗಾವಿ.

ಬೆಳಗಾವಿ : ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಬಡವ, ಹಿಂದುಳಿದ, ದೀನ ದಲಿತರಿಗೆ, ಶೋಷಿತರಿಗೆ, ಅಮಾಯಕರಿಗೆ ನ್ಯಾಯ ಸಿಗಬೇಕಾದರೆ ಹೋರಾಟ ಅನಿವಾರ್ಯವಾಗಿದೆ, ಡಾ ಬಾಬಾಸಾಹೇಬ ಅಂಬೇಡ್ಕರ ಅವರು ತಿಳಿಸಿದ ಹಾಗೂ ಶಿಕ್ಷಣ ಸಂಘಟನೆ ಹೋರಾಟಗಳು ಎಲ್ಲಾ ಕಾಲಕ್ಕೂ ಸಲ್ಲುವ ಅಸ್ತ್ರಗಳಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗುತ್ತಾ, ಬಡ ಹಿಂದುಳಿದ ದೀನ ದಲಿತ ಶೋಷಿತ ಜನರ ಕಲ್ಯಾಣಕ್ಕಾಗಿ ನಾವು ಕಾರ್ಯ ಮಾಡಬೇಕಾಗಿದೆ ಎಂದು ಅಂಬೇಡ್ಕರ ಶಕ್ತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ಕೋಲಕಾರ ಅವರು ಹೇಳಿದ್ದಾರೆ.

ರವಿವಾರ ದಿನಾಂಕ 08/06/2025 ರಂದು ಬೆಳಗಾವಿ ಜಿಲ್ಲೆ ಹಾಗೂ ತಾಲೂಕಿನ ಮುತ್ನಾಳ ಗ್ರಾಮದಲ್ಲಿ ಅಂಬೇಡ್ಕರ ಶಕ್ತಿ ಸಂಘದ ನೂತನ ಶಾಖೆಯನ್ನು ಉದ್ಘಾಟನೆ ಮಾಡಿ, ಮಾತನಾಡಿದ ಅವರು, ಸಂಘಟನೆ ಎಂಬುದು ಜನರ ಸೇವೆಗಾಗಿ ಇರುವ ಸಂಸ್ಥೆ, ನೊಂದ ಜನತೆಗೆ ನ್ಯಾಯ ಕೊಡಿಸುವದು ನಮ್ಮ ದ್ಯೆಯವಾಗಿರಬೇಕು ಅದರ ಜೊತೆಗೆ ಸಮಾಜದಲ್ಲಿ ಆಗುವ ಅನ್ಯಾಯದ ವಿರುದ್ಧ ದ್ವನಿ ಎತ್ತಬೇಕು, ಸರ್ಕಾರದಿಂದ ಎಲ್ಲಾ ಸಮುದಾಯಕ್ಕೆ ಸಿಗುವ ಹಕ್ಕಿಗಾಗಿ ಹೋರಾಟ ಮಾಡಬೇಕು, ಅದರಿಂದ ಸಮಾನತೆಯ ಸಮಾಜವನ್ನು ನಿರ್ಮಿಸುವತ್ತ ಹೆಜ್ಜೆ ಹಾಕಬೇಕು ಎಂದು ತಮ್ಮ ಸಂಘಟನೆಯ ಹೊಸ ಶಾಖೆಯ ಉದ್ಘಾಟನಾ ಸಭೆಯಲ್ಲಿ ತಿಳಿಸಿದ್ದಾರೆ.

ಈ ಸಭೆಯಲ್ಲಿ ಅಂಬೇಡ್ಕರ ಸಂಘಟನೆಯ ಪದಾಧಿಕಾರಿಗಳು, ಮುತ್ನಾಳ ಗ್ರಾಮದ ಹೊಸ ಶಾಖೆಯ ಪದಾಧಿಕಾರಿಗಳು, ಗ್ರಾಮದ ಪ್ರಮುಖರು ಹಾಗೂ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..