ಅಕ್ರಮ ಮಧ್ಯ ಮಾರಾಟವನ್ನು ಮಟ್ಟಹಾಕಿದ ಬೆಳಗಾವಿ ಅಬಕಾರಿ ಸಿಬ್ಬಂದಿ.

ಅಕ್ರಮ ಮಧ್ಯ ಮಾರಾಟವನ್ನು ಮಟ್ಟಹಾಕಿದ ಬೆಳಗಾವಿ ಅಬಕಾರಿ ಸಿಬ್ಬಂದಿ.

ದುಷ್ಕರ್ಮಿಗಳಿಂದ ನಿಷೇದಿತ ಗೋವಾದ ಮಧ್ಯ ಮಾರಾಟ..

2.5 ಲಕ್ಷ ಮೌಲ್ಯದ ವಸ್ತು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ ಸಿಬ್ಬಂದಿ..

ಬೆಳಗಾವಿ : ಮಾನ್ಯ ಅಪರ ಆಯುಕ್ತರು ಅಬಕಾರಿ ಬೆಳಗಾವಿ ಹಾಗೂ ಮಾನ್ಯ ಅಬಕಾರಿ ಜಂಟಿ ಆಯುಕ್ತರು ಬೆಳಗಾವಿ ವಿಭಾಗ ಇವರ ಸೂಚನೆಯ ಮೇರೆಗೆ ಗಣೇಶ ಹಬ್ಬದ ಪ್ರಯುಕ್ತ ಸಂಗ್ರಹಿಸಿದ ಅಕ್ರಮ ಮಧ್ಯವನ್ನು ಖಚಿತ ಮಾಹಿತಿಯಂತೆ ವಶಪಡಿಸಿಕೊಳ್ಳಲಾಗಿದೆ.

ದಿನಾಂಕ 10.09.2024 ರ ಸಂಜೆ 8 ಗಂಟೆಯ ಸಮಯದಲ್ಲಿ ಬೆಳಗಾವಿ ನಗರದ ಹಳೆಯ ಪಿಬಿ ರಸ್ತೆಯ ರೈಲ್ವೆ ಓವರ್ ಬ್ರಿಡ್ಜ್ ಕೆಳಗಡೆ ಅಕ್ರಮವಾಗಿ ಗೋವಾ ರಾಜ್ಯದ ಮಧ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ದುಷ್ಕರ್ಮಿಗಳು ಒಂದು ಟಾಟಾ ಇಂಡಿಕಾ ವಾಹನ ನೋಂದಣಿ ಸಂಖ್ಯೆ GA 07 K 2046 ರಲ್ಲಿ ಸಂಗ್ರಹಿಸಿ, ಹೋಂಡಾ ಆಕ್ಟಿವಾ ವಾಹನ ನೋಂದಣಿ ಸಂಖ್ಯೆ KA 22 EL 9524 ರಲ್ಲಿ ಬೆಳಗಾವಿ ನಗರದಾದ್ಯಂತ ಸರಬರಾಜು ಮಾಡುತ್ತಿದ್ದರು.

ಕಾರಣ ಒಟ್ಟು 750 ಮಿಲಿಯ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕೆಂದು ನಮೂದಾಗಿದ್ದ 87 ಬಾಟಲಿಗಳನ್ನು (65.250 ಲೀ) ಜಪ್ತಪಡಿಸಿ ಸುಭಾಷ್ ಸುಧೀರ್ ಡೇ ಎಂಬ ರೂಢಿಗತ ಆರೋಪಿತನ ವಿರುದ್ಧ ಈ ಕಚೇರಿಯಿಂದ ಪ್ರಕರಣ ದಾಖಲಿಸಲಾಗಿದೆ…

ರೂ 1,00,000 ಮೌಲ್ಯದ ಮದ್ಯ ಹಾಗೂ 1,50,000 ಮೌಲ್ಯದ ವಾಹನವನ್ನು ಜಪ್ತಪಡಿಸಿದ್ದು ಒಟ್ಟು 2,50,000 ಮೌಲ್ಯದ ವಸ್ತುಗಳನ್ನು ಜಪ್ತಿಪಡಿಸಲಾಗಿದೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..