ಅಖಿಲ ಕರ್ನಾಟಕ ವಾಲ್ಮೀಕಿ ಸೋಶಿಯಲ್ ಪೌoಡೇಶನನಿಂದ ವಾಲ್ಮೀಕಿ ಜಯಂತಿ ಆಚರಣೆ..
ಸಮಸ್ತ ನಾಡಿನ ಜನತೆಗೆ ಶುಭಾಶಯ ತಿಳಿಸಿದ ಯುವ ನಾಯಕ ರಾಹುಲ ಜಾರಕಿಹೊಳಿ..
ಬೆಳಗಾವಿ : ಅಖಿಲ ಕರ್ನಾಟಕ ವಾಲ್ಮೀಕಿ ಸೋಶಿಯಲ್ ಫೌಂಡೇಶನ್ ವತಿಯಿಂದ ಗುರುವಾರ ದಿನಾಂಕ 17/10/2024ರಂದು ಶೃದ್ಧಾ ಭಕ್ತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಗಿದೆ..
ಪೌoಡೆಷನ್ನಿನ ರಾಜ್ಯದ್ಯಕ್ಷರಾದ ರೇಣುಕಾ ಅಡವೆಪ್ಪ ಕುಂಡೆದ ಹಾಗೂ ರೇಣುಕಾ ಫೌಂಡೇಶನ್ ನ್ಯೂ ವೈಭವ ನಗರ ಅಧ್ಯಕ್ಷರಾದ ಕುಮಾರಿ ಪೂಜಾ ಕುಂಡೆದ ಇವರ ಸಂಯುಕ್ತ ಆಶ್ರಯದಲ್ಲಿ, ಸತತ 17 ವರ್ಷದ ಪರಿಶ್ರಮದಿಂದ ಸಾಕಾರಗೋಳ್ಳುತ್ತಿರುವ ಶ್ರೀ ವಾಲ್ಮೀಕಿ ಸರ್ಕಲ್ ಬಾಕ್ಸೈಟ್ ರೋಡಿನಲ್ಲಿ ಹಮ್ಮಿಕೊಂಡಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ..

ಸುಮಾರು 250 ಮಹಿಳೆಯರ ಕುಂಭಮೇಳದೊಂದಿಗೆ ಅತೀ ವಿಶೇಷವಾಗಿ ವಿಜೃಂಭಣೆಯಿಂದ ಸಮುದಾಯದ ಸದಸ್ಯರೆಲ್ಲರೂ ಸೇರಿಕೊಂಡು ಆಚರಣೆ ಮಾಡಲಾಗಿದೆ..
ಜಯಂತಿಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಾಲ್ಮೀಕಿ ಸಮುದಾಯದ ಯುವ ನಾಯಕ, ಕ್ಷೇತ್ರದ ಕಣ್ಮಣಿ ಹಾಗೂ ಸಮಾಜದ ನವ ದ್ರುವತಾರೆ ಎಂದೆನಿಸಿದ ರಾಹುಲ್ ಜಾರಕಿಹೊಳಿಯವರು ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದು, ಸಮಸ್ತ ವಾಲ್ಮೀಕಿ ಸಮುದಾಯದ ಸದಸ್ಯರಿಗೆ ಹಾಗೂ ಸರ್ವರಿಗೆ ವಾಲ್ಮೀಕಿ ಜಯಂತಿಯ ಶುಭಾಶಯ ತಿಳಿಸಿದ್ದಾರೆ..
ಈ ಜಯಂತಿಯ ವಿಶೇಷ ಸಂಧರ್ಭದಲ್ಲಿ ರಾಜೀವ್ ಕಾಳೇನಟ್ಟಿ, ಕಲ್ಲಪ್ಪ ನಾಯಕ್, ಸಂತಮ್ಮಣ್ಣ ಮೂಕನವರ್, ಸುಭಾಷ್ ಹಟ್ಟಿಹೊಳಿ, ಸುವರ್ಣ ಲಂಕೆನ್ನವರ್, ಗಂಗವ್ವ ಬುಡರಿ ಹಾಗೂ ಸಮುದಾಯ ಪ್ರಮುಖರು ಹಾಗೂ ಯುವಕ ಯುವತಿಯರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..