ಅಗಸಗೆಯಲ್ಲಿ ಮನೆ ಗೋಡೆ ಕುಸಿತ…

ಅಗಸಗೆಯಲ್ಲಿ ಗೋಡೆ ಕುಸಿತ..
ತಪ್ಪಿದ ಭಾರೀ ಅನಾಹುತ..

ಬೆಳಗಾವಿ: ರವಿವಾರ ಸುರಿದ ಭಾರಿ‌ ಮಳೆಗೆ ಮನೆಯ ಗೋಡೆ‌ ಕುಸಿದು ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ತಾಲೂಕಿನ ಅಗಸಗೆ ಗ್ರಾಮದ ಅಂಬೇಡ್ಕರ್ ಗಲ್ಲಿಯ ವೈಜು ಸಿದ್ದಪ್ಪ ಮೇತ್ರಿ ಹಾಗೂ ಯಲ್ಲಪ್ಪ ಸಿದ್ದಪ್ಪ ಮೇತ್ರಿ ಸೇರಿ‌ 18 ಜನ ವಾಸಿಸುವ ಮನೆ ರವಿವಾರ ರಾತ್ರಿ 10 ಗಂಟೆ ಸುಮಾರಿಗೆ ಮನೆ ಗೋಡೆ ಕುಸಿದಿದೆ.

ರವಿವಾರ ರಾತ್ರಿ ಊಟ ಮಾಡಿ ಕುಳಿತಾಗ ಮೇಲಿಂದ ಹೆಂಡೆ ಬಿದ್ದ ಸಪ್ಪಳವಾಯಿತು. ಅದೇ ಸಮಯಕ್ಕೆ ಮತ್ತೊಂದು ಹೆಂಡೆ ಬಿದ್ದು ಸಪ್ಪಳವಾಗುವುದನ್ನು ಕಂಡು ಮಕ್ಕಳು ಅಲ್ಲಿಂದ‌ ಹೆದರಿ ಓಡಿ ಹೋಗಿದ್ದಾರೆ. ಅಲ್ಲಿಂದ‌ ಪಕ್ಕಕ್ಕೆ ಸರಿಯುವಷ್ಟರಲ್ಲಿಯೇ ಗೋಡೆ ಕುಸಿದು ಬಿದ್ದಿದೆ.

👉ತಪ್ಪಿದ ಭಾರೀ ಅನಾಹುತ

ಪ್ರತಿ ದಿನ‌ ಬೇಗ ಮಲಗುತ್ತಿದ್ದರು. ಆದರೆ ಹೊಲದಲ್ಲಿ‌ ಭತ್ತದ ನಾಟಿ ಮಾಡಿ ಬಂದು ಬೇಸತ್ತಿದ್ದ ಎರಡೂ ಕುಟುಂಬದ ಸದಸ್ಯರು ಅಡುಗೆ ಮಾಡುವ ಲ್ಲಿ ವಿಳಂಬ ಮಾಡಿವೆ. ಹೀಗಾಗಿ ಊಟ ಮಾಡುವುದಕ್ಕೂ ವಿಳಂಭವಾಗಿದೆ. ಒಂದು ವೇಳೆ ಬೇಗ ಊಟ ಮಾಡಿ ಮಲಗಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಅಂತಹ ಅನಹುತವೊಂದು ತಪ್ಪಿದಂತಾಗಿದೆ.

ಮಣ್ಣಿನಡಿ ಸಿಲುಕಿದ ಮಕ್ಕಳ ಪುಸ್ತಕ ಬಟ್ಟೆ, ಇತರ ವಸ್ತುಗಳು

ಗೋಡೆ ಕುಸಿದು ಬಿದ್ದ ರಭಸಕ್ಕೆ ಮನೆಯ ಅಟ್ಟಣಿಕೆ ಕೂಡ ಕುಸಿದು ಬ್ಯೂರೋ (ಟ್ರೇಜುರಿ) ಮೇಲೆ‌ಬಿದ್ದಿದೆ. ಬ್ಯೂರೋ ಕೂಡ ನಜ್ಜು ಗುಜ್ಜಾಗಿದೆ. ಮಕ್ಕಳ ಬಟ್ಟೆ, ಪುಸ್ತಕ, ಅಕ್ಕಿಯ ಮೂಟೆ, ಇತರ ವಸ್ತುಗಳು ಮಣ್ಣಿನಡಿ ಸಿಲುಕಿವೆ. ಸಂಬಂಧ ಪಟ್ಟ ಇಲಾಖೆ ಈ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಗಂಜಿ ಕೇಂದ್ರದ ವ್ಯವಸ್ಥೆ ಮಾಡಬೇಕೆಂದು ಕುಟುಂಬಸ್ಥರ ಮನವಿಯಾಗಿದೆ.

ವರದಿ ಸಂತೋಷ ಮೇತ್ರಿ, ಅಗಸಗಿ.