ಅಗಸಗೆ ಅಂಗನವಾಡಿ ಕಾರ್ಯಕರ್ತೆ ಅಮಾನತು…

ಅಗಸಗೆ ಅಂಗನವಾಡಿ ಕಾರ್ಯಕರ್ತೆ ಅಮಾನತು..

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಆದೇಶ..

ಬೆಳಗಾವಿ: ತಾಲೂಕಿನ ಅಗಸಗೆ ಗ್ರಾಮದ ಅಂಬೇಡ್ಕರ್ ಗಲ್ಲಿಯ ಮಹಿಳಾ ಸ್ವಸಹಾಯ ಸಂಘಗಳ ಹಣ ದುರ್ಬಳಕೆ ಮಾಡಿಕೊಂಡು ದಲಿತ ಮಹಿಳೆಯರನ್ನು ವಂಚಿಸಿದ್ದ ಅಂಗನವಾಡಿ ಕಾರ್ಯಕರ್ತೆ ರೇಖಾ ಪಾಟೀಲ ಅವರನ್ನು ಅಮಾನತು ಮಾಡಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ನಾಗರಾಜ್ ಆರ್ ಆದೇಶ ಹೊರಡಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳು ಕಿರು ಉದ್ದಿವೆ ಮಾಡುವ ಸಲುವಾಗಿ ಪ್ರತಿ ಸಂಘಕ್ಕೆ ಒಂದು ಲಕ್ಷ ರೂಪಾಯಿ ಬೀಜದನವೆಂದು (ಸಹಾಯದನ) ನೀಡಲಾಗಿತ್ತು.

ಆದರೆ ಈ ಹಣವನ್ನು ಅಂಗನವಾಡಿ ಕಾರ್ಯಕರ್ತೆ ರೇಖಾ ಪಾಟೀಲ ಅವರು ಸಂಘದ ಸದಸ್ಯೆರ ದಿಕ್ಕು ತಪ್ಪಿಸಿ
ತಾವೇ ಇಟ್ಟುಕೊಂಡು ದುರ್ಬಳಕೆ ಮಾಡಿಕೊಂಡಿದ್ದರು. ಈ ಬಗ್ಗೆ ಕೂಲಂಕುಷ ತನಿಖೆ ಮಾಡಬೇಕೆಂದು ಸಂಘದ ಸದಸ್ಯರು ಕಳೆದ ಮಾರ್ಚ್ ತಿಂಗಳಲ್ಲಿ ಜಿಲ್ಲಾಧಿಕಾರಿ, ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಅವರಿಗೆ ದೂರು ನೀಡಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ನಾಗರಾಜ್ ಆರ್ ತನಿಖಾ ತಂಡ ನೇಮಿಸಿ, ವರದಿ ಪಡೆದಿದ್ದರು. ಅದರಲ್ಲಿ ಅವ್ಯವಹಾರ ಕಂಡು ಬಂದಿತ್ತು. ಹೀಗಾಗಿ ಸ್ವತಃ ಡಿಡಿ ನಾಗರಾಜ್ ಆರ್ ಅವರೇ ಗ್ರಾಮಕ್ಕೆ ಭೇಟಿ ನೀಡಿ ನೊಂದ ಮಹಿಳೆಯರಿಂದ ಮೌಖಿಕ ದೂರು ಆಲಿಸಿದ್ದರು.

ಅದೆಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ಅಂಗನವಾಡಿ ಕಾರ್ಯಕರ್ತೆ ರೇಖಾ ಪಾಟೀಲ ಅವರನ್ನು ಗೌರವಸೇವೆ (ಅಮಾನತು ಮಾಡಿದ್ದಾರೆ) ಯಿಂದ ಕೈಬಿಟ್ಟಿದ್ದಾರೆ. ಅಲ್ಲದೇ ನಾಲ್ಕೂ ಸಂಘದ ಹಣವನ್ನು ಮರಳಿ ಭರಿಸುವಂತೆ ಆದೇಶಿಸಿದ್ದಾರೆ.

ವರದಿ ಪ್ರಕಾಶ್ ಕುರಗುಂದ..