ಅಥಣಿ ತಾಲೂಕಿಗೆ ಬೇಟಿ ನೀಡಿದ ಜಿಪಂ ಮುಖ್ಯ ಲೆಕ್ಕಾಧಿಕಾರಿಗಳು…

ಅಥಣಿ ತಾಲೂಕಿಗೆ ಬೇಟಿ ನೀಡಿದ ಜಿಪಂ ಮುಖ್ಯ ಲೆಕ್ಕಾಧಿಕಾರಿಗಳು..

ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಕಾರ್ಯ ಪರಿಶೀಲನೆ..

ತಾಪಂ ಕೆಲ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಸೂಚನೆ..

ಸರ್ಕಾರದ ಕೆಲಸವನ್ನು ಶ್ರದ್ದೆ ಹಾಗೂ ಶಿಸ್ತಿನಿಂದ ನಿರ್ವಹಿಸಲು ಎಚ್ಚರಿಕೆ ನೀಡಿದ ಅಧಿಕಾರಿ..

ಬೆಳಗಾವಿ : ಬುಧವಾರ ದಿನಾಂಕ 28/08/2024ರಂದು ಬೆಳಗಾವಿ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ ಅವರು ತಮ್ಮ ಕಚೇರಿ ಸಿಬ್ಬಂದಿಯೊಂದಿಗೆ ತಾಲೂಕು ಮಟ್ಟದದಲ್ಲಿಯ ಕಾರ್ಯ ಪರಿಶೀಲನೆಗಾಗಿ ಬೇಟಿ ನೀಡುವ ಕಾರ್ಯವನ್ನು ಮುಂದುವರೆಸಿದ್ದಾರೆ.

ಬುಧವಾರ ಅಥಣಿ ತಾಲೂಕಿಗೆ ಬೇಟಿ ನೀಡಿದ ಅಧಿಕಾರಿಗಳ ತಂಡ, ಮೊದಲಿಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿ, ಅಲ್ಲಿಯ ರೋಗಿಗಳ ಜೊತೆ ಮಾತನಾಡಿ, ಅಲ್ಲಿ ನೀಡುವಂತಹ ಸೇವೆಗಳು, ಇರುವಂತ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದು, ಔಷಧಗಳ ದಾಸ್ತಾನು ಪರೀಕ್ಷಿಸಿ, ರೋಗಿಗಳಿಗೆ ಸಮರ್ಪಕವಾಗಿ ಔಷಧಗಳು ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು,

ಔಷಧ ವಿತರಣಾ ಕೌಂಟರ್ ಗಳನ್ನು ಹೆಚ್ಚಿಸಿ, ಬಂದ ಆಗಿದೆ, ಈ ಔಷಧಿಗಳು ಇಲ್ಲಾ ಎಂಬ ನೆಪ ಹೇಳದೆ ಸರಿಯಾಗಿ ಔಷಧ ವಿತರಣೆ ಮಾಡಬೇಕು ಎಂಬ ಸಲಹೆ ನೀಡಿದರು, ಇದೆ ವೇಳೆ ಆಸ್ಪತ್ರೆಯಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಶೌಚಾಲಯ, ಒಪಿಡಿ, ವಾರ್ಡುಗಳು ಸ್ವಚ್ಛವಾಗಿ ನೋಡಿಕೊಳ್ಳಿ ಎಂದರು..

ನಂತರ ಅಥಣಿಯ ತಾಲೂಕು ಪಂಚಾಯತಿಗೆ ಭೇಟಿ ನೀಡಿದ ಅಧಿಕಾರಿಗಳು, ಅಲ್ಲಿನ ಲೆಕ್ಕಪತ್ರ ಕಡತಗಳು, ಕಾಮಗಾರಿ ಕಡತಗಳನ್ನು ತರೆಸಿ ಪರಿಶೀಲನೆ ಮಾಡಿದರು, ಲೆಕ್ಕಪತ್ರ ನಿರ್ವಹಣೆಯಲ್ಲಿ ಕೆಲ ಮಾರ್ಗದರ್ಶನ ನೀಡಿ, ವ್ಯವಸ್ಥಿತವಾಗಿ ನೋಡಿಕೊಳ್ಳಲು ಸೂಚನೆ ನೀಡಿದ ಅಧಿಕಾರಿಗಳು.

ಕೆಲ ಕಡತಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ, ಅಧಿಕಾರಿಗಳು ಕೇಳಿದ ಕೆಲ ಪ್ರಶ್ನೆಗಳಿಗೆ ತಾಲೂಕು ಪಂಚಾಯತಿ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡಿದ್ದು, ಅಸಂಭಂದ ದಾಖಲೆಗಳನ್ನು ತೋರಿಸಿದ್ದಕ್ಕೆ, ಕಿಡಿಕಾರಿದ ಅಧಿಕಾರಿ ಪರಶುರಾಮ ದುಡಗುಂಟಿ ಅವರು ಸ್ಥಳದಲ್ಲಿಯೇ ಬೇಜವಾಬ್ದಾರಿ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಸೂಚನೆ ನೀಡಿದರು..

ತಾಲೂಕಿನ ಶಂಕ್ರಟ್ಟಿ ಗ್ರಾಮಪಂಚಾಯತಿಗೆ ಬೇಟಿ ನೀಡಿ, ಅಲ್ಲಿಯ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ವಿಚಾರಿಸಿ, ಅವರ ಅನೇಕ ಮನವಿಗಳನ್ನು ತೆಗೆದುಕೊಳ್ಳಲಾಯಿತು, ಗ್ರಾಮ ಪಂಚಾಯತಿ ಆವರಣದಲ್ಲಿ ನೆರೆದ ಗ್ರಾಮಸ್ಥರು ಮೂಲಭೂತ ಸಮಸ್ಯೆಗಳ ಬಗ್ಗೆ ಹೆಚ್ಚಿಗೆ ಮನವಿ ನೀಡಿದ್ದು, ಕೆಲ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕೆಂದು ಸಮಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದು, ಉಳಿದ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹಾರ ಮಾಡುತ್ತೇವೆ ಎಂದು ಹೇಳಿದರು..

ಇದಾದ ನಂತರ ಶಂಕರ್ತಿ ಪಶುಚಿಕಿತ್ಸಾಲಯಕ್ಕೆ ಬೇಟಿ ನೀಡಿದ ಅಧಿಕಾರಿಗಳು, ಸರಿಯಾದ ರೀತಿಯಲ್ಲಿ ಔಷಧೋಪಚಾರ ನಡೆಯಬೇಕು, ಜಾನುವಾರುಗಳಿಗೆ ರೋಗ ಹರಡದಂತೆ ಮುಂಜಾಗ್ರತಾ ಮಾರ್ಗಗಳನ್ನು ರೈತರಿಗೆ ತಿಳಿಸಿ ಹೇಳಬೇಕು, ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿಕೊಂಡು ಹೋಗಬೇಕು ಎಂಬ ಸಲಹೆ ನೀಡಿದರು.

ಈ ತಾಲೂಕು ಕಾರ್ಯ ಪರಿಶೀಲನಾ ಬೇಟಿಯ ಸಂದರ್ಭದಲ್ಲಿ ಜಿಪಂ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ ಅವರೊಂದಿಗೆ, ಜಿಲ್ಲಾ ಪಂಚಾಯತ ಸಿಬ್ಬಂದಿಗಳಾದ ಶಶಿಕಾಂತ ನೇಸರಗಿ, ಸುವರ್ಣ ಮಹೇಂದ್ರಕರ ಹಾಜರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..