ಅಥಿತಿಗಳನ್ನು ದೇವರೆಂದು ಕಾಣುವ ಶ್ರಮ ಜೀವಿಗಳ ಸಮುದಾಯವೇ ಬಂಟ ಸಮುದಾಯ..
ತಾವು ಬೆಳೆದು, ಬೇರೆಯವರನ್ನು ಬೆಳೆಸಿ ಖುಷಿಪಡುವವರು ಬಂಟರು.
ಸಚಿವೆ ಲಕ್ಷ್ಮಿ ಹೆಬ್ಬಾಳಕರ..
ಬೆಳಗಾವಿ : ಬಂಟ ಸಮುದಾಯವು ಅಥಿತ್ಯಕ್ಕೆ ತುಂಬಾ ಹೆಸರುವಾಸಿ, ಅತಿಥಿಗಳನ್ನು ದೇವರೆಂದು ಭಾವಿಸುವ ಗುಣ ಅವರದ್ದು, ವ್ಯಾಪಾರವನ್ನು ವ್ಯಾಪಾರವೆಂದು ನೋಡದೆ, ಅತಿಥಿಗಳನ್ನು ನಿಜವಾಗಿ ದೇವರೆಂದು ನೋಡುವರು ಬಂಟರು ಅದಕ್ಕೆ ಉತ್ತಮ ಸಾಕ್ಷಿಯೆಂದರೆ ನಮ್ಮೆದುರಿರುವ ವಿಠ್ಠಲ ಹೆಗಡೆ ಅವರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾದ ಲಕ್ಷ್ಮಿ ಹೆಬ್ಬಾಳಕರ ಹೇಳಿದ್ದಾರೆ.
ರವಿವಾರ ದಿನಾಂಕ 15/06/2025ರಂದು ನಗರದ ಬಂಟರ ಭವನದಲ್ಲಿ ನಡೆದ ಬಂಟರ ಭವನ ಕಟ್ಟಡದ ನವೀಕರಣ ಹಾಗೂ 40ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಚಿವರು, ಬಂಟ ಸಮುದಾಯದವರು ಶ್ರಮ ಜೀವಿಗಳು, ಯಾರ ಮೇಲೂ ಅವಲಂಬಿತರಲ್ಲ, ದೇಶದ ಯಾವ ಭಾಗಕ್ಕೆ ಹೋದರೂ ಅಲ್ಲಿಯವರಾಗಿ, ಅಲ್ಲಿಯ ಜನರೊಂದಿಗೆ ಬೆರೆಯುತ್ತಾರೆ, ಹೊಂದಿಕೊಳ್ಳುತ್ತಾರೆ, ತಾವು ಬೆಳೆದು ಅಲ್ಲಿಯವರನ್ನೂ ಬೆಳೆಸುತ್ತಾರೆ, ಬೇರೆಯವರ ಬೆಳವಣಿಗೆಯಲ್ಲಿ ಖುಷಿ ಕಾಣುತ್ತಾರೆ ಎಂದಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಚಿಕ್ಕೋಡಿ ಲೋಕಸಭಾ ಸಂಸದೆಯಾದ ಪ್ರಿಯಾಂಕಾ ಜಾರಕಿಹೊಳಿ ಅವರು ಮಾತನಾಡಿ, ನಾನು ಮೊದಲ ಬಾರಿಗೆ ತಮ್ಮ ಸಮಾಜದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ, ಇಂತಹ ಅದ್ಬುತ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲು ಕಾರಣರಾದ ತಮ್ಮೆಲ್ಲರಿಗೆ ನಾನು ಋಣಿಯಾಗಿದ್ದೇನೆ, ತಂದೆಯವರು ಮೊದಲಿನಿಂದಲೂ ಹೇಳುತ್ತಿರುವ ಮಾತೆಂದರೆ ನಾವು ಬೇರೆ ಬೇರೆ ಸಮುದಾಯದ ಜನರ ಬಳಿ ಹೋಗಬೇಕು, ಅವರ ಜೀವನಶೈಲಿ, ಸಂಸ್ಕೃತಿ ಹಾಗೂ ಸಮಸ್ಯೆಗಳ ಬಗ್ಗೆ ತಿಳಿಯಬೇಕು ಎನ್ನುತ್ತಿದ್ದರು. ತಮ್ಮ ಸಮುದಾಯ ತುಂಬಾ ಬೆಳವಣಿಗೆ ಆಗಿರುವ ಸಮುದಾಯ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಸಮುದಾಯದ ಸಾಧನೆ ಇದೆ, ಬರುವ ದಿನಗಳಲ್ಲಿ ಈ ಸಮುದಾಯದ ಜನರು ಮತ್ತಷ್ಟು ಮೇಲುಗೈ ಸಾಧಿಸಲಿ ಎಂದರು.

ಇನ್ನು ಬಂಟರ ಸಮುದಾಯದ ಸೆಲೆಬ್ರಿಟಿಯಾದಂತ ಸಂಗೀತ ಮಾಂತ್ರಿಕ ಹಾಗೂ ನಟ ಗುರುಕಿರಣ್ ಅವರು ಮಾತನಾಡಿ, 2002ರಲ್ಲಿ ಐಶ್ವರ್ಯ ರೈ ಇದ್ದ ಒಂದು ಸಭೆಯಲ್ಲಿ ಒಬ್ಬ ವ್ಯಕ್ತಿ ಮಾತನಾಡುತ್ತಾ, ಅಂಡರ್ ವರ್ಡನಿಂದ ಹಿಡಿದು ಮಿಸವರ್ಡ್ ವರೆಗೂ ಎಲ್ಲೆಲ್ಲೂ ಬಂಟರೇನಾ ಎಂದಿದ್ದರು, ಅಂದರೆ ಎಲ್ಲಾ ರಂಗದಲ್ಲಿ ಬಂಟರ ಸಮುದಾಯ ಸಾಧನೆ ಮಾಡಿದೆ, ಗುರು, ಮಠ ಇಲ್ಲದ ಸಮುದಾಯ ಬಂಟ ಸಮುದಾಯ, ಯಾಕೆಂದರೆ ಇಲ್ಲಿ ಎಲ್ಲರೂ ನಾಯಕರೇ ಇಲ್ಲಿ ಯಾರೂ ಇನ್ನೊಬ್ಬರ ಮಾತು ಕೀಳುವದಿಲ್ಲ ಎಂದು ಮಾರ್ಮಿಕವಾಗಿ ತಮ್ಮ ಸಮುದಾಯದ ಸ್ವಾಭಿಮಾನದ ಗುಣವನ್ನು ಹೇಳಿದರು.

ಇನ್ನು ಸಮುದಾಯದ ಪ್ರಮುಖರಾಗಿ ಕಾರ್ಯಕ್ರಮದ ಸಭಾಧ್ಯಕ್ಷರಾಗಿ ಆಗಮಿಸಿದ ಡಾ ಕೆ ಪ್ರಕಾಶ ಶೆಟ್ಟಿ ಅವರು ಮಾತನಾಡಿ, ಬೆಳಗಾವಿ ಬಂಟರ ಸಂಘಟನೆ ಹಾಗೂ ಈ ಭವನವನ್ನು ನವೀಕರಣದ ಉದ್ಘಾಟನೆ ಕಾರ್ಯಕ್ರಮ ನೋಡಿ ತುಂಬಾ ಖುಷಿಯಾಗಿದೆ, ನಾವು ಎಲ್ಲಾ ಕಡೆಗೆ ಸಂಘಟನೆ ಹಾಗೂ ಭವವನಗಳನ್ನು ನೋಡಿದ್ದೇವೆ, ಬೇರೆ ಕಡೆಗೆ ದೊಡ್ಡ ದೊಡ್ಡ ಭವನಗಳು ಇರುತ್ತವೆ ಆದರೆ ಜನರೇ ಇರುವದಿಲ್ಲ ಆದರೆ ಇಲ್ಲಿ ಸೇರಿರುವ ಜನರಿಗೆ ಭವನವೇ ಸಾಲುತ್ತಿಲ್ಲ, ಬೆಳಗಾವಿಯ ಸಂಘದೊಂದಿಗೆ ನಾವು ಮುಂದೆ ಯಾವತ್ತೂ ಇರುತ್ತೇವೆ ಎಂಬ ಭರವಸೆಯನ್ನು ನೀಡಿದರು.

ಬೆಳಗಾವಿ ನಗರದ ಬಂಟರ ಯಾನೆ ನಾಡವರ ಸಂಘದಿಂದ ಏರ್ಪಡಿಸಿದ 40 ನೇ ವಾರ್ಷಿಕೋತ್ಸವ “ಮಾಣಿಕ್ಯ ಸಂಭ್ರಮ 2025” ಹಾಗೂ ನವೀಕರಣ ಭವನದ ಉದ್ಘಾಟನೆಯ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕ ಆಸೀಫ್ (ರಾಜು) ಸೇಠ್, ಡಾ ಕೆ ಪ್ರಕಾಶ್ ಶೆಟ್ಟಿ, ಉದ್ಯಮಿ ಜಯಶೀಲ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ್ ಶೆಟ್ಟಿ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಸತೀಶ ಶೆಟ್ಟಿ, ಹಸ್ತ ಶೆಟ್ಟಿ, ಡಾ ಮಹಾಬಲೇಶ ಶೆಟ್ಟಿ, ವಿಠ್ಠಲ್ ಹೆಗಡೆ, ವಿಜಯ ಶೆಟ್ಟಿ, ಚೇತನ ಶೆಟ್ಟಿ, ರವೀಂದ್ರ ಶೆಟ್ಟಿ, ಶ್ರೀಧರ ಶೆಟ್ಟಿ, ಪ್ರಸನ್ ಶೆಟ್ಟಿ, ಕರುಣಾಕರ ಶೆಟ್ಟಿ, ಪ್ರಣಯ ಶೆಟ್ಟಿ, ಪ್ರಭಾಕರ ಶೆಟ್ಟಿ, ಉದಯ ಕುಮಾರ ಶೆಟ್ಟಿ ಮತ್ತಿತರ ಗಣ್ಯರು ಹಾಗೂ ಸಮುದಾಯದ ಸದಸ್ಯರು ಭಾಗಿಯಾಗಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..