ಅಧಿಕಾರಿಗಳ ಕರ್ತವ್ಯಲೋಪಕ್ಕೆ ಚಾಟಿ ಬೀಸಿದ ನಗರ ಸೇವಕ ರವಿ ದೋತ್ರೆ..

ಅಧಿಕಾರಿಗಳ ಕರ್ತವ್ಯಲೋಪಕ್ಕೆ ಚಾಟಿ ಬೀಸಿದ ನಗರ ಸೇವಕ ರವಿ ದೋತ್ರೆ..

ನಗರ ಸೇವಕರೇ ಎಲ್ಲಾ ಮಾಡುವುದಾದರೆ, ಸಂಬಳ ಪಡೆದು ನೀವೇಕೆ ಇರೋದು..?

ಪಾಲಿಕೆ ನಗರ ಸೇವಕರ ಸ್ಪಷ್ಟನೆ..

ಬೆಳಗಾವಿ : ಶುಕ್ರವಾರ ನಗರದ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಗೃಹದಲ್ಲಿ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ವಿಭಾಗದ ವಿಷಯಗಳ ಕುರಿತಾಗಿ ಅತ್ಯಂತ ಮಹತ್ವದ ಚರ್ಚೆಗಳು ನಡೆದಿದ್ದು, ನಗರದ ಸಾರ್ವಜನಿಕರಿಗೆ ಉಪಯೋಗ ಆಗುವ ಹಲವು ತೀರ್ಮಾನಗಳನ್ನು ತಗೆದುಕೊಳ್ಳಲಾಯಿತು..

ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನಗರ ಸೇವಕ ರವಿ ದೊತ್ರೆ ಅವರು ಸಭೆಯ ಅಧ್ಯಕ್ಷೆ ವಹಿಸಿದ್ದು, ಪಾಲಿಕೆಯ ಸಾರ್ವಜನಿಕ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು..

ಮೊದಲಿಗೆ ಪಾಲಿಕೆಯ ಒಡೆತನದಲ್ಲಿರುವ ನಾಲ್ಕು ಆಯುರ್ವೇದಿಕ ಆಸ್ಪತ್ರೆಗಳನ್ನು ಕಟ್ಟಡ ಸಮೇತವಾಗಿ ಆಯುಷ್ ಇಲಾಖೆಯ ವರ್ಗಾಯಿಸುವ ಅನುಮೋದನೆಯನ್ನು ಅಂಗೀಕರಿಸಲಾಯಿತು..

ಇನ್ನು, ಮನೆ ಮನೆ ಕಸ ಸಂಗ್ರಹಿಸುವ, ಸಾಂಕ್ರಾಮಿಕ ರೋಗ ಹಾಗೂ ಕಾಯಿಲೆಗಳು ಹರಡದಂತೆ ವಹಿಸುವ, ಪಾಲಿಕೆಯ ವಿವಿಧ ಶಾಖೆಗಳಿಂದ ಜಾಹೀರಾತು ಪ್ರಕಟಿಸುವ ವಿಷಯವಾಗಿ ಸುದೀರ್ಘ ಚರ್ಚೆ ಆಗಿ, ಅಧ್ಯಕ್ಷರಾದ ರವಿ ದೋತ್ರೆ ಅವರು ಈ ವಿಷಯದಲ್ಲಿ ಅಧಿಕಾರಿಗಳ ನಡೆಯನ್ನು ತೀವ್ರವಾಗಿ ಖಂಡಿಸಿ, ತಪ್ಪು ತಿದ್ದಿಕೊಳ್ಳಲು ಸೂಚನೆ ನೀಡಿದರು..

ಹತ್ತಾರು ವರ್ಷಗಳಿಂದ ಇನ್ ಬೆಳಗಾವಿ ಕೇಬಲ್ ವಾಹಿನಿಗೆ, ಸ್ವಚ್ಛತಾ ಜಾಗೃತಿ ಜಾಹೀರಾತು ಪ್ರಕಟಣೆ ಮಾಡಲು ನೀಡಿದ್ದು, ಅದಕ್ಕಾಗಿ ಪಾಲಿಕೆಯಿಂದ ತಿಂಗಳಿಗೆ 50 ಸಾವಿರ ಕೊಡುತ್ತೀರಿ, ಆದರೆ ನೀವು ಆ ಜಾಹೀರಾತು ನೋಡಿದ್ದೀರಾ? ಎಷ್ಟು ವರ್ಷ ಆಯಿತು?? ಅದೇ ಮೂರು ಫೋಟೋಗಳನ್ನು ದಿನಕ್ಕೆ ಮೂರು ಸಲ ಬರುತ್ತವೆ, ಪಾಲಿಕೆಯಲ್ಲಿ ಈಗ ಸ್ವಚ್ಛತಾ ಅಭಿಯಾನದ ಸಲುವಾಗಿ ಎಸ್ಟೊಂದು ಬದಲಾವಣೆ ಆಗಿವೆ ಅವುಗಳನ್ನು ಜಾಹೀರಾತಿನಲ್ಲಿ ತೋರಿಸುವ ವ್ಯವಸ್ಥೆ ಮಾಡಿ, ಪಾಲಿಕೆಯ ಆಯುಕ್ತರು, ಸಿಬ್ಬಂದಿ, ನಗರ ಸೇವಕರು ಮಾಡುವ ಸ್ವಚ್ಚತಾ ಕಾರ್ಯಗಳು, ಪ್ರತಿ ತಿಂಗಳು ಸಾರ್ವಜನಿಕರಿಗೆ ತಿಳಿಯಬೇಕು, ಆ ರೀತಿಯ ಜಾಹೀರಾತು ಪ್ರಸಾರ ಆಗುವಂತೆ ನೋಡಿಕೊಳ್ಳಿ, ಕೇವಲ ಇನ್ ಬೆಳಗಾವಿಗೆ ಅಷ್ಟೇ ಅಲ್ಲದೇ ಬೇರೆ ಸ್ಥಳೀಯ ಮಾಧ್ಯಮಕ್ಕೂ ಜಾಹೀರಾತು ನೀಡಿ ಎಂದು ಸಲಹೆ ನೀಡಿದರು..

ಇನ್ನು ಮೊನ್ನೆ ಕೆಲ ಮಾಧ್ಯಮಗಳಲ್ಲಿ (ವೆಬ್, ಯೂಟುಬ್ , ದಿನಪತ್ರಿಕೆ) ಪಾಲಿಕೆಯ ಪೌರ ಕಾರ್ಮಿಕರನ್ನು ಮಹಾರಾಷ್ಟ್ರದಿಂದ ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ ಅದರಲ್ಲಿ, ಸ್ಥಳೀಯ ಪ್ರಭಾವಿ ನಗರ ಸೇವಕರ ಪ್ರಭಾವವಿದೆ ಎಂಬ ಅರ್ಥದಲ್ಲಿತ್ತು, ಇದರ ಬಗ್ಗೆ ಆರೋಗ್ಯ ಅಧಿಕಾರಿಗಳನ್ನು ನಗರ ಸೇವಕರು ಪ್ರಶ್ನೆ ಮಾಡಿದಾಗ, ಇದರಲ್ಲಿ ನಗರ ಸೇವಕರ ಪಾತ್ರ ಯಾವದೂ ಇಲ್ಲ, ಹೆಚ್ಚಿನ ಪ್ರಮಾಣದ ಕೆಲಸದಿಂದ ಪಾಲಿಕೆಯ ಮಹಾಪೌರರೇ ದಿನಾಂಕ 20/06/2023ರಂದು ನೋಟಿಸ್ ನೀಡಿ, ಆರೋಗ್ಯ ಸಮಿತಿಯ ತುರ್ತು ಸಭೆ ಕರೆದು, ಟೆಂಡರ್ ಕರೆದು, ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ, ಟೆಂಡರ್ ಮೂಲಕ ಈ ನೇಮಕಾತಿ ಮಾಡಿಕೊಂಡಿದ್ದು, ಇವರು ಗುತ್ತಿಗೆ ನೌಕರರು, ವಿನಃ ಪೌರ ಕಾರ್ಮಿಕರು ಅಲ್ಲಾ ಎಂದು ಪಾಲಿಕೆಯ ಅಧಿಕಾರಿ ಕಲಾದಗಿ ಅವರು ಸ್ಪಷ್ಟೀಕರಣ ನೀಡಿದರು..

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ರವಿ ದೋತ್ರೆ ಅವರು, ಈ 138 ಜನ ಗುತ್ತಿಗೆ ನೌಕರರನ್ನು ನೇಮಕ ಮಾಡಿದ ಆರೋಗ್ಯ ಸುಪರಿಡೆಂಟ್ ಅಧಿಕಾರಿ ಹಾಗೂ ಗುತ್ತಿಗೆದಾರರು, ಇವರು ಮಾಡಿದ ಕಾರ್ಯಕ್ಕೆ, ನಗರ ಸೇವಕರ ಮೇಲೆ ಆರೋಪ ಮಾಡೋದು ತಪ್ಪು, ಈ ನೇಮಕಾತಿಗೂ ನಮಗೂ ಸಂಬಂಧ ಇಲ್ಲದಿದ್ದರೂ, ಒಂದೆರಡು ಮಾಧ್ಯಮದವರು ನಮ್ಮ ಬಗ್ಗೆ ತಪ್ಪು ಬರೆದು, ಹೆಸರು ಕೆಡಸುತ್ತಿದ್ದಾರೆ, ಸತ್ಯ ಅರಿತು ಬರೆಯಬೇಕು ಎಂದರು….

ಆರೋಗ್ಯ ವಿಭಾಗದ ಸಭೆ ನಡೆಯುತ್ತಿದ್ದರೂ ಹಾಜರಾಗದೇ ಇರುವ ಆರೋಗ್ಯ ವಿಭಾಗದ ಸೂಪರಿಡೆಂಟ್ ಅವರಿಗೆ ನೋಟಿಸ್ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು, ಅದೇ ರೀತಿ ಕಂದಾಯ, ಪಿಡಬ್ಲ್ಯೂಡಿ, ಇತರ ವಿಭಾಗದ ಗೈರು ಆದಂತ ಸಿಬ್ಬಂದಿಗಳಿಗೂ ನೋಟಿಸ್ ನೀಡಲು ತೀರ್ಮಾನ ಕೈಗೊಳ್ಳಲಾಯಿತು..

ಅದಕ್ಕೆ ಆಡಳಿತ ಆಯುಕ್ತರಾದ ಹುಗ್ಗಿ ಅವರು, ಒಂದು ಸಲ ಅವಕಾಶ ಕೊಡಿ, ಒಮ್ಮೆಲೆ ನೋಟಿಸ್ ಬೇಡ ಎಂದಾಗ, ನಗರ ಸೇವಕ ಹಣಮಂತ ಕೊಂಗಾಲಿ ಅವರು ನೀವು ಅಧಿಕಾರಿಗಳು ತಪ್ಪುಮಾಡಿದರೆ ಹೇಗೆ ಎಲ್ಲರೂ ಒಗ್ಗಟ್ಟಾಗುವಿರಿ, ಅದೇ ಸಾಮಾನ್ಯ ಜನ ತಪ್ಪು ಮಾಡಿದರೆ, ಇದೆ ರೀತಿ ಹೋಗಲಿ ಬಿಡಿ ಎನ್ನುತ್ತೀರಿ?? ಎಂದು ಪ್ರಶ್ನೆ ಮಾಡಿದರು..

ಆರೋಗ್ಯ ಮತ್ತು ಪಿಡಬ್ಲ್ಯೂಡಿ ವಿಭಾಗದ ಅಧಿಕಾರಿಗಳ ನಡುವೆ ಸಾಮರಸ್ಯದ ಕೊರತೆಯಿಂದ ನಗರದಲ್ಲಿ ಸ್ವಚ್ಛತೆ ಮಾಯವಾಗುತ್ತದೆ ಎಂದು ಕೆಲ ನಗರ ಸೇವಕರು ಆರೋಪ ಮಾಡಿದರು, ಇದೆ ವೇಳೆ,
ನಗರ ಸೇವಕರಿಗೆ ಫೋನಿನಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಒಬ್ಬ ಗುತ್ತಿಗೆ ಆಧಾರದ ಸ್ವಚ್ಛತಾ ಕಾರ್ಮಿಕನನ್ನು ಸೇವೆಯಿಂದ ವಜಾ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ..

ನಗರದ ಸುಮಾರು ನಾಲ್ಕು ಸ್ಥಳಗಳಲ್ಲಿ (ರೆಡಿಮೇಡ್) ಪೇ ಅಂಡ್ ಯೂಜ್ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯನ್ನು ಅಧಿಕಾರಿಗಳು ಪ್ರಸ್ತಾಪಿಸಿದಾಗ, ನಗರ ಸೇವಕರು ಇದಕ್ಕೆ ಸಮ್ಮತಿ ಸೂಚಿಸಿದ್ದು, ಈಗ ಇರುವ ಶೌಚಾಲಯಗಳನ್ನು ಸುವ್ಯವಸ್ಥಿತವಾಗಿ ಇರುವ ಹಾಗೆ ನೋಡಿಕೊಳ್ಳಲಿ, ಪಾಲಿಕೆಯ ಶೌಚಾಲಯದ ಅವ್ಯವಸ್ಥೆ ಉದಾರಿಸಿ ಮೊದಲು ಇದನ್ನು ಸ್ವಚ್ಛ ಮಾಡಿ, ಆಮೇಲೆ ಹೊಸ ನಿರ್ಮಾಣ ಮಾಡಲಿ ಎಂದು ಅಧಿಕಾರಿಗಳ ಕಾರ್ಯವೈಪಲ್ಯ ವಿವರಿಸಿದರು..

ಇನ್ನು ಆರೋಗ್ಯ ಇಲಾಖೆಯ ಪ್ರಮುಖ ವಿಷಯಗಳು ಚರ್ಚೆ ನಡೆಯುವ ಈ ಸಭೆಗೆ ಆರೋಗ್ಯ ಸುಪರಿಟೆಂಡೆಂಟ್ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳು ಗೈರಾಗಿದ್ದು, ನಗರ ಸೇವಕರ ಕಂಗೆನ್ನಿಗೆ ಗುರಿಯಾಗಿ, ಸ್ವತಃ ಆಯುಕ್ತರೇ ಬೆಳಿಗ್ಗೆ ಎದ್ದು ಸ್ವಚ್ಛತಾ ಜಾಗೃತಿ ಮುಡಿಸುವರು, ಎಲ್ಲರೂ ನಗರ ಸ್ವಚ್ಛತೆ ಅಭಿವೃದ್ಧಿಗಾಗಿ ದುಡಿಯುತ್ತೇವೆ, ಇವರೇನು ಎಲ್ಲರಿಗಿಂತ ಹೆಚ್ಚೇನೂ ಎಂದು ತಮ್ಮ ಅಸಮಾಧಾನ ಹೊರಹಾಕಿದರು..

ಸ್ವಚ್ಛತೆ ಸಲುವಾಗಿ ಒಂದು ವರ್ಷದ ಅವಧಿಗೆ ಕ್ರಿಮಿನಾಶಕ ಹಾಗೂ ಸ್ವಚ್ಛತಾ ಸಾಮಗ್ರಿ ಬಗ್ಗೆ , ಸ್ವಚ್ಛತಾ ಕಸ ವಿಲೇವಾರಿ ಅಧ್ಯಯನ ಪ್ರವಾಸದ ಬಗ್ಗೆ, ಪಾಲಿಕೆ ಒಡೆತನದ ವಾಹನಗಳ ದುರಸ್ಥಿ ಕಾರ್ಯಗಳ ಟೆಂಡರ್ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳಲಾಯಿತು..

ಇನ್ನು ಈ ಸಭೆಯಲ್ಲಿ, ಉಪಮಹಾಪೌರರು, ವಿವಿಧ ಸ್ಥಾಯಿ ಸಮಿತಿಯ ಸದಸ್ಯರು, ನಗರ ಸೇವಕರು, ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು..

ವರದಿ ಪ್ರಕಾಶ ಕುರಗುಂದ..