ಅಧಿಕಾರಿಗಳ ಕೆಲಸದೊಂದಿಗೆ ಸಾರ್ವಜನಿಕರಿಗೂ ಜವಾಬ್ದಾರಿ ಇರಬೇಕು…

ಅಧಿಕಾರಿಗಳ ಕೆಲಸದೊಂದಿಗೆ ಸಾರ್ವಜನಿಕರಿಗೂ ಜವಾಬ್ದಾರಿ ಇರಬೇಕು..

ನಗರದಲ್ಲಿ ಮಳೆಯಿಂದಾಗುವ ಸಮಸ್ಯೆಗೆ ಸೂಕ್ತ ಮುಂಜಾಗ್ರತೆ ಕೈಗೊಂಡಿದ್ದೇವೆ..

ಕ್ಷೇತ್ರದಲ್ಲಿ ಸಂಚರಿಸಿ ಸಮಸ್ಯೆ ಆಲಿಸಿದ ಶಾಸಕ ಆಶಿಫ್ (ರಾಜು) ಸೇಠ್..

ಬೆಳಗಾವಿ : ಉತ್ತರ ಮತಕ್ಷೇತ್ರದ ಶಾಸಕ ಆಸಿಫ್ (ರಾಜು) ಸೇಠ್ ಅವರು ಇತ್ತೀಚೆಗೆ ಮಹಾಂತೇಶ ನಗರ ವ್ಯಾಪ್ತಿಯಲ್ಲಿರುವ ಆಶ್ರಯ ಕಾಲೋನಿ ಮತ್ತು ಖುಸ್ರೋ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಸಮಗ್ರ ಪರಿಶೀಲನೆ ನಡೆಸಿದರು. ಈ ಭೇಟಿಯ ಸಂದರ್ಭದಲ್ಲಿ ಗಟಾರಗಳು, ರಸ್ತೆಗಳು ಮತ್ತು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಸ್ಥಿತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ಆ ಪ್ರದೇಶಗಳ ಸುಧಾರಣಾ ಕ್ರಮಗಳ ಯೋಜನೆಗಳ ಮೇಲೆ ಕೇಂದ್ರೀಕೃತವಾಗಿತ್ತು.

ಸ್ಥಳೀಯ ನಿವಾಸಿಗಳು, ಪಾಲಿಕೆ ಅಧಿಕಾರಿಗಳು ಮತ್ತು ಶಾಸಕರ ಪುತ್ರ ಅಮಾನ್ ಸೇಟ್ ಅವರೊಂದಿಗೆ ಶಾಸಕ ಆಸಿಫ್ ಸೇಠ್ ಅವರು ಸ್ಥಳಕ್ಕೆ ಬೇಟಿ ನೀಡಿದ್ದಾರೆ.

ಪರಿಶೀಲನೆಯ ಸಂದರ್ಭದಲ್ಲಿ, ಶಾಸಕ ಆಸಿಫ್ ಸೇಠ್ ಅವರು ನಿವಾಸಿಗಳ ಸಮಸ್ಯೆ ಮತ್ತು ಸವಾಲುಗಳ ಬಗೆಗಿನ ಒಳನೋಟಗಳನ್ನು ತಿಳಿಯಲು ಸಾರ್ವಜನಿಕರೊಂದಿಗೆ ನೇರ ಸಂವಾದ ಮಾಡಿದ್ದು, ಹಲವು ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಮೂಲಸೌಕರ್ಯ ಕೊರತೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರಗಳನ್ನು ಕಾರ್ಯಗತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಗಟಾರುಗಳು, ರಸ್ತೆಗಳು ಮತ್ತು ತ್ಯಾಜ್ಯ ನಿರ್ವಹಣಾ ಸೌಲಭ್ಯಗಳ ಮೌಲ್ಯಮಾಪನವು ತೃಪ್ತಿಕರವಾಗಿದೆ, ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿಗಳನ್ನು ಜವಾಬ್ದಾರಿಯಿಂದ ಭಾಗಿಯಾಗಬೇಕು ಎಂಬ ಸಲಹೆ ನೀಡಿದ್ದಾರೆ..

ಭೇಟಿ ವೇಳೆ ಮಾತನಾಡಿದ ಶಾಸಕ ಸೇಠ್ ಅವರು, “ಬೇಸಿಗೆಯ ಬೇಗೆಯಿಂದ ಮಳೆಯು ತೀವ್ರಗತಿಯಲ್ಲಿ ಆಗಿದ್ದು, ಅನೇಕ ಪ್ರದೇಶಗಳು ನೀರಿನಿಂದ ಜಲಾವೃತಗೊಂಡಿದ್ದು ಶಾಸಕನಾಗಿ ನಾನು ಆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ, ಜನರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇನೆ ಎಂದರು.
ಮಾನ್ಸೂನ್ ಪ್ರಾರಂಭವಾಗುವ ಮೊದಲು ಕ್ಷೇತ್ರದಲ್ಲಿ ಮಳೆಯಿಂದ ಆಗುವ ಕೆಲ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಲು ನಮ್ಮ ತಂಡ ಕಾರ್ಯಪ್ರವೃತ್ತವಾಗಿದೆ ಎಂದರು..

ತ್ಯಾಜ್ಯ ನಿರ್ವಹಣೆಯ ಕುರಿತು ಮಾತನಾಡಿದ ಶಾಸಕರು, ಜನರು ವಿವಿಧ ಸ್ಥಳಗಳಲ್ಲಿ ಕಸ ಹಾಕುವುದು ಸರಿಯಲ್ಲ, ಪಾಲಿಕೆ ನೌಕರರು ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿದ್ದು, ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯಿಂದ ಸ್ವಚ್ಛತೆ ಕಾಪಾಡಬೇಕು ಎಂದರು, ರಸ್ತೆಬದಿ, ಚರಂಡಿಗಳಲ್ಲಿ ಜನರು ಕಸ ಎಸೆಯುವುದನ್ನು ನಿಲ್ಲಿಸಬೇಕು. ಮಹಾನಗರ ಪಾಲಿಕೆಯ ವಾಹನಗಳು ನಿಮ್ಮಲ್ಲಿ ಬಂದು ಕಸ ಸಂಗ್ರಹಿಸುತ್ತವೆ, ಬರದಿದ್ದರೆ ಅಥವಾ ಕಸವನ್ನು ತೆಗೆದುಕೊಳ್ಳಲು ನಿರಾಕರಿಸಿದರೆ, ದಯವಿಟ್ಟು ಸಹಾಯವಾಣಿ ಸಂಖ್ಯೆಗೆ ದೂರು ನೀಡಿ ಎಂದು ಶಾಸಕರು ಹೇಳಿದರು.

ವರದಿ ಪ್ರಕಾಶ ಬಸಪ್ಪ ಕುರಗುಂದ..