ಅಧಿವೇಶನದ ವೇಳೆ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘದ ಧರಣಿ..
ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುವ ಭರವಸೆ ಇದೆ..
ಬಸವರಾಜ ಕಡ್ಲಿ ವಿಶ್ವಾಸ..
ಬೆಳಗಾವಿ : ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷರು ಹಾಗೂ ಬೆಳಗಾವಿ ವಿಭಾಗದ ಮೋಟಾರ್ ಮಾಲೀಕರ ಸಂಘದ ಉಸ್ತುವಾರಿಗಳಾದ ಬಸವರಾಜ್ ಕಡ್ಲಿ ಅವರು ನಾವು ಕಳೆದ ಮೂರು ವರ್ಷಗಳಿಂದ ನಮ್ಮ ಬೇಡಿಕೆಗಾಗಿ ಹೋರಾಟ ಮಾಡುತ್ತಿದ್ದು, ಸರ್ಕಾರ ಈ ಸಲದ ಅಧಿವೇಶನದಲ್ಲಿ ನಮ್ಮ ಬೇಡಿಕೆ ಈಡೇರಿಸುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ..
ಬೇಡಿಕೆಗಾಗಿ ನಡೆಯುವ ನಮ್ಮ ಧರಣಿ ಶಾಂತ ರೀತಿಯಲ್ಲಿ ನಡೆಯುತ್ತಿದ್ದು, ಶುಕ್ರವಾರ ದಿನಾಂಕ 08/12/2023 ರಂದು, ಬೆಳಗಾವಿಯ ಚನ್ನಮ್ಮ ವೃತ್ತದಿಂದ ಸುವರ್ಣ ವಿಧಾನ ಸೌಧದವರೆಗೆ ಸುಮಾರು ಒಂದು ಸಾವಿರ ತರಭೇತಿ ವಾಹನಗಳು ರ್ಯಾಲಿ ಮಾಡುವ ಮೂಲಕ ಧರಣಿ ಮಾಡಲಾಗುತ್ತಿದ್ದು, ಇದಕ್ಕೂ ಮೊದಲು ಈ ಸಾವಿರ ವಾಹನಗಳು ಹುಬ್ಬಳ್ಳಿಯಿಂದ ಬೆಳಗಾವಿಗೆ ರ್ಯಾಲಿ ಬರಲಿವೆ ಎಂಬ ಮಾಹಿತಿ ನೀಡಿದ್ದಾರೆ..

ತಮ್ಮ ಧರಣಿಯ ಮೂಲಕ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಿಗೆ ತಮ್ಮ ಕೆಲವು ಮುಖ್ಯ ಬೇಡಿಕೆಗಳನ್ನು ಸಲ್ಲಿಸುವರಿದ್ದು, ಪ್ರಮುಖ ಬೇಡಿಕೆಗಳು ಇಂತಿವೆ,,
- ರಸ್ತೆ ಸರ್ ದೃಷ್ಟಿಯಿಂದ ವಾಹನ ಚಾಲಕರಿಗೆ ಕಲಿಕಾ ಲೈಸೆನ್ಸ್ ಪರೀಕ್ಷೆಯನ್ನು ಕಡ್ಡಾಯವಾಗಿ ವಾಹನ ಚಾಲನಾ ತರಭೇತಿ ಶಾಲೆಯಲ್ಲಿಯೇ ನಡೆಸಲು ಸರ್ಕಾರ ಅನುಮತಿ ನೀಡಬೇಕು…
- ವಾಹನ ಚಾಲನಾ ತರಭೇತಿ ಶಾಲೆಗಳಿಂದಲೆ ನಮೂನೆ 14 ಪ್ರಮಾಣ ಪತ್ರ ಕಡ್ಡಾಯಗೊಳಿಸಬೇಕು,
- ರಾಜ್ಯದಲ್ಲಿ ತರಬೇತಿ ಶಾಲೆಗಳಲ್ಲಿ ವಾಹನ ತರಬೇತಿ ಶುಲ್ಕವನ್ನು (ದರಪಟ್ಟಿ) ಹೆಚ್ಚಳ ಮಾಡಬೇಕು..
- ಖಾಸಗಿ ಶಾಲೆಗಳಿಗೆ ಅನುದಾನ ನೀಡುವ ಹಾಗೆ ನಮ್ಮ ತರಬೇತಿ ಶಾಲೆಗಳಿಗೂ ಅನುದಾನಿತ ಶಾಲೆಗಳು ಎಂದು ಘೋಷಣೆ ಮಾಡಿ, ಸರ್ಕಾರದಿಂದ ಅನುದಾನ ನೀಡಲು ಸಹಕರಿಸಬೇಕು.
ಇವುಗಳ ಜೊತೆಗೆ ಇನ್ನೂ ಹತ್ತು ಹಲವಾರು ಬೇಡಿಕೆಗಳೊಂದಿಗೆ, ರಾಜ್ಯ ಮೋಟಾರ್ ವಾಹನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಒಕ್ಕೂಟ ಅಧಿವೇಶನದ ಅವಧಿಯಲ್ಲಿ ಧರಣಿ ಮಾಡುತ್ತಿದೆ ಎಂದು ಬಸವರಾಜ್ ಕಡ್ಲಿ ಅವರು ಸ್ಪಷ್ಟಪಡಿಸಿದ್ದಾರೆ..
ಈ ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಕಾರ್ಯದರ್ಶಿ ಮೂರ್ತುಜಾ ಶೇರಾಖಾನ, ಜಿಲ್ಲಾ ಉಪಾಧ್ಯಕ್ಷ ಇಜಾಜ್ ಅಹ್ಮದ, ಬೆಳಗಾವಿ ಖಜಾಂಚಿ ಎಸ್ ಎಸ್ ಠಕ್ಕನ್ನವರ, ಅಥಣಿ, ಗೋಕಾಕ, ಹಾಗೂ ಬೈಲಹೊಂಗಲ ತಾಲೂಕಾ ಅಧ್ಯಕ್ಷರು, ಹತ್ತಾರು ತರಬೇತಿ ಶಾಲೆಯ ಮಾಲೀಕರು ಭಾಗಿಯಾಗಿದ್ದರು..
ವರದಿ ಪ್ರಕಾಶ ಕುರಗುಂದ..