ಅಪಾರ ಮೆಚ್ಚುಗೆ ಪಡೆದ ಸಂಗೊಳ್ಳಿ ರಾಯಣ್ಣ ನೃತ್ಯ ರೂಪಕ..

ಅಪಾರ ಮೆಚ್ಚುಗೆ ಪಡೆದ ಸಂಗೊಳ್ಳಿ ರಾಯಣ್ಣ ನೃತ್ಯ ರೂಪಕ..

ಎನ್ಎಸ್ ಪೈ ಪ್ರಾಥಮಿಕ ಶಾಲಾ ಮಕ್ಕಳ ಪ್ರದರ್ಶನಕ್ಕೆ ಮೂಕ
ವಿಸ್ಮಿತವಾದ ಕುಮಾರ ಗಂಧರ್ವ ಸಭಾಂಗಣ..

ಬೆಳಗಾವಿ : ನಗರದ ಎನ್ಎಸ್ ಪೈ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶನ ನೀಡಿದ ಸಂಗೊಳ್ಳಿ ರಾಯಣ್ಣ ನೃತ್ಯ ರೂಪಕ ಕಾರ್ಯಕ್ರಮದಲ್ಲಿ ನೆರೆದ ಸಾವಿರಾರು ಜನರ ಮನಸೂರೆಗೊಂಡಿದ್ದು, ರೋಮಾಂಚನಕಾರಿ ಹಾಗೂ ಭಾವನಾತ್ಮಕವಾದ ದೃಷ್ಯಕಾವ್ಯಕ್ಕೆ ಪ್ರಶಂಸೆಯ ಚಪ್ಪಾಳೆಯ ಸುರಿಮಳೆ ಆದಂತಿದೆ..

ಹೌದು, ರವಿವಾರ ದಿನಾಂಕ 26/01/2025ರಂದು ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ, ಜಿಲ್ಲಾಡಳಿತ ಜಿಲ್ಲಾಪಂಚಾಯತ್, ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಹಯೋಗದಲ್ಲಿ ಜರುಗಿದ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನೃತ್ಯ ರೂಪಕ ಅದ್ಬುತವಾಗಿ ಮೂಡಿ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ನಗರದ ವಿವಿಧ ಶಾಲೆಗಳ ಮಕ್ಕಳು ಈ ಕಾರ್ಯಕ್ರಮದಲ್ಲಿ ಅತೀ ಉತ್ಸಾಹದಿಂದ ಭಾಗಿಯಾಗಿ ದೇಶಭಕ್ತಿಯ ಗೀತೆಗಳು, ನೃತ್ಯಗಳು ಹಾಗೂ ದೃಶ್ಯ ರೂಪಕಗಳನ್ನು ಪ್ರದರ್ಶನ ಮಾಡುತ್ತಾ, ಇತಿಹಾಸದ ಮಹಾಪುರುಷರ ತ್ಯಾಗ ಬಲಿದಾನಗಳನ್ನು ನೆನೆದು, ದೇಶಭಕ್ತಿಯ ಮಹತ್ವ ಸಾರಿ ತೋರಿಸಿದಂತಿತ್ತು.

ಹತ್ತು ಹಲವಾರು ವಿಧಗಳ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಭಿನ್ನ ಪ್ರದರ್ಶನಗಳನ್ನು ತೋರಿದ ವಿಧ್ಯಾರ್ಥಿಗಳಿಗೆ ಜಿಲ್ಲಾ ಶಿಕ್ಷಣ ಇಲಾಖೆಯಿಂದ ಪ್ರಮಾಣ ಪತ್ರ ವಿತರಿಸಲಾಗಿದ್ದು, ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ ಆಯಾ ಶಾಲೆಗಳ ಶಿಕ್ಷಕರಿಗೂ ಕೂಡಾ ಅಭಿನಂದನೆ ಸಲ್ಲಿಸಲಾಗಿದೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..