ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ವಿಶೇಷವಾಗಿ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ..
ರುದ್ರಪ್ಪ ಸಿ ಬೋಗೂರ್ ಹೇಳಿಕೆ..
ಬೆಳಗಾವಿ : ಇಡೀ ರಾಜ್ಯದಲ್ಲಿಯೇ ಅತ್ಯಂತ ಅದ್ದೂರಿ ಹಾಗೂ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಬೆಳಗಾವಿಯಲ್ಲಿ ಆಚರಣೆ ಮಾಡುತ್ತಿದ್ದು, ಗಡಿ ಭಾಗವಾಗಿರುವ ಕಾರಣ ಇಲ್ಲಿಯ ಆಚರಣೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದೆ, ರಾಜ್ಯದ ಮೂಲೆಮೂಲೆಯಿಂದ ಕನ್ನಡ ಪ್ರೇಮದ ಮನಸ್ಸುಗಳು ಬೆಳಗಾವಿಗೆ ಆಗಮಿಸಿ ಕನ್ನಡ ಹಬ್ಬದಲ್ಲಿ ಭಾಗಿಯಾಗುವರು..

ಪ್ರತಿ ವರ್ಷದಂತೆ ಈ ವರ್ಷವೂ ಅತ್ಯಂತ ಅದ್ದೂರಿಯಾಗಿ, ಎಲ್ಲಾ ವಯೋಮಾನದ ಕನ್ನಡಿಗರು ಸೇರಿ ಆಚರಣೆ ಮಾಡುವ ಈ ಕನ್ನಡ ಹಬ್ಬಕ್ಕೆ, ಬೆಳಗಾವಿಯ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ವಿಶೇಷವಾದ ವೇದಿಕೆಯೊಂದಿಗೆ, ವಿಶೇಷ ಗಣ್ಯರನ್ನು ಕರೆತಂದು ಕನ್ನಡದ ಹಬ್ಬವನ್ನು ಮತ್ತಷ್ಟು ಚೆಂದಗೊಳಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ..

ಬೆಳಗಾವಿ ಅಪ್ಪು ಯೂತ್ ಬ್ರಿಗೇಡಿನ ಜಿಲ್ಲಾ ಅಧ್ಯಕ್ಷರಾದ ರುದ್ರಪ್ಪ ಸಿ ಬೋಗುರ ಅವರು ಮಾತನಾಡಿ, ಈ ಸಲದ ರಾಜ್ಯೋತ್ಸವಕ್ಕೆ ನಮ್ಮ ಬ್ರಿಗೇಡ್ ದಿಂದ ಸುಂದರವಾದ ವೇದಿಕೆ ನಿರ್ಮಾಣ ಮಾಡಿದ್ದು, ರಾಜ್ಯೋತ್ಸವಕ್ಕೆ ಬಂದ ಕನ್ನಡಿಗರಿಗೆ ಸಿಹಿ, ಕುಡಿಯುವ ನೀರಿನ ವ್ಯವಸ್ಥೆ ಕೂಡಾ ಮಾಡಿದ್ದು, ಬೆಳಗಾವಿಯ ಸುಪ್ರಸಿದ್ದ ಉದ್ದಿಮೆದಾರರು, ಕನ್ನಡಪರ ವಿಚಾರದ ಮಹನೀಯರು, ರಾಜರತ್ನಂ ಅಪ್ಪು ಅವರ ಅಭಿಮಾನಿಗಳು ಭಾಗಿಯಾಗುತ್ತಾರೆ..

ಮುಖ್ಯವಾಗಿ ನಮ್ಮ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಉದಯೋನ್ಮುಖ, ಪ್ರತಿಭಾವಂತ ನಟರಾದ ನವೀನ ಶಂಕರ ಅವರು ಭಾಗಿಯಾಗುತ್ತಿದ್ದು, ಕನ್ನಡ ಕಲಾಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ, ನವೀನ ಶಂಕರ ಅವರು ಕನ್ನಡದ ಗಲ್ಟು, ಹೊಂದಿಸಿ ಬರೆಯಿರಿ, ಹೊಯ್ಸಳ, ಕ್ಷೇತ್ರಪತಿ ಎಂಬ ಯಶಸ್ವಿ ಚಿತ್ರಗಳಿಂದ ಕನ್ನಡಿಗರಿಗೆ ಚಿರಪರಿಚಿತರಾದ ಚತುರ ನಟ, ರಾಜ್ಯೋತ್ಸವದ ದಿನ ಅಪ್ಪು ಯೂತ್ ಬ್ರಿಗೇಡ್ ವೇದಿಕೆಯಲ್ಲಿ ಈ ಯುವ ನಟರು ಭಾಗಿಯಾಗಿ ಕನ್ನಡಿಗರ ಜೊತೆ ಬೇರೆಯಲ್ಲಿದ್ದರೆ ಎಂಬ ಮಾಹಿತಿ ನೀಡಿದ್ದಾರೆ..

ಬೆಳಗಾವಿಯ ಸುಪ್ರಸಿದ್ದ ಬಟ್ಟೆ ವ್ಯಾಪಾರದ ಸಂಸ್ಥೆಯಾದ ಬಿಎಸ್ಸಿ (BSC) ಅವರ ಸಹಯೋಗದಲ್ಲಿ ಈ ವಿಶೇಷ ವೇದಿಕೆಯ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಈ ಸಲದ ಗಡಿನಾಡು ಬೆಳಗಾವಿಯ ರಾಜ್ಯೋತ್ಸವ ಅತೀ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ನಡೆಯುವದು ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ..
ವರದಿ ಪ್ರಕಾಶ ಕುರಗುಂದ..