ಅರಭಾವಿ ಶಾಸಕರಿಂದ ಸಾರ್ವಜನಿಕ ಸಂಪರ್ಕ ಸಭೆ..
ಜನರ ಕುಂದುಕೊರತೆ ವಿಚಾರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ..
ಬೆಳಗಾವಿ : ತಮ್ಮ ಕ್ಷೇತ್ರದ ಹಾಗೂ ಜಿಲ್ಲೆಯ ಹಲವಾರು ಕಡೆಗಳಿಂದ ಆಗಮಿಸಿದ ಜನರನ್ನು ಬೇಟಿ ಮಾಡಿ ಸಮಸ್ಯೆ ಆಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜನರ ಸಮಸ್ಯೆಗಳಿಗೆ ಪರಿಹಾರೋಪಾಯದ ಮಾರ್ಗಗಳ ಬಗ್ಗೆ ಚರ್ಚೆ ನಡೆಸಿದರು.
ಸೋಮವಾರ ದಿನಾಂಕ 02/06/2025 ರಂದು ಆಂಜನೇಯ ನಗರದ ಕೆಎಂಎಫ್ ಕಚೇರಿಯಲ್ಲಿ ಸಾರ್ವಜನಿಕರ ಬೇಟಿ ಹಾಗೂ ಅವರ ಕುಂದುಕೊರತೆಗಳನ್ನು ವಿಚಾರ ಮಾಡಿದ ಶಾಸಕರು, ಜನರೊಂದಿಗೆ ಚರ್ಚೆ ನಡೆಸಿ, ಕುಂದುಕೊರತೆಗಳ ಪರಿಹಾರಕ್ಕೆ ಮಾರ್ಗಸೂಚಿಗಳನ್ನು ಸೂಚಿಸಿದ್ದಾರೆ.

ಇದೇ ವೇಳೆ ಆಗಮಿಸಿದ ಶಾಸಕರ ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರ ಜನ್ಮದಿನ ನಿನ್ನೆ ಆಗಿದ್ದರೂ, ಇಂದು ಗೌರವದಿಂದ ಸತ್ಕರಿಸಿ ತಮ್ಮ ಅಭಿಮಾನದ ಶುಭಾಶಯಗಳನ್ನು ತಿಳಿಸಿದ್ದು, ತಮ್ಮ ಅಕ್ಕರೆಯ ಅಧಿಪತಿಗೆ ಆ ದೇವರು ಆಯಸ್ಸು ಆರೋಗ್ಯ ಯಶಸ್ಸು ಕೀರ್ತಿ ನೀಡಿ ಹರಸಲಿ ಎಂದು ಬೇಡಿಕೊಂಡಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..