ಅರ್ಥಪೂರ್ಣವಾಗಿ ಜರುಗಿದ
ಸರದಾರ ರಾಜಾ ಲಕಮಗೌಡರ 160ನೇ ಜಯಂತಿ ಉತ್ಸವ ಸಮಾರಂಭ…
ಬೆಳಗಾವಿ : ಸೋಮವಾರ ದಿನಾಂಕ 31/07/2023ರಂದು ನಗರದ ಆರ್ ಎಲ್ಎಸ್ ಪದವಿಪೂರ್ವ ಹಾಗೂ ಪದವಿ ವಿಜ್ಞಾನ ಮಹಾವಿದ್ಯಾಲಯದ ಸರ್ ಸಿ, ವಿ, ರಾಮನ್ ಸಭಾಂಗಣದಲ್ಲಿ ಕೆಎಲ್ಇ ಸಂಸ್ಥಾಪಕರಲ್ಲಿ ಒಬ್ಬರಾದ ರಾಜಾ ಲಖಮಗೌಡರ 160ನೇ ಜಯಂತಿಯನ್ನು ನುಡಿನಮನದ ಮೂಲಕ ಅತ್ಯಂತ ವಿಶೇಷವಾಗಿ ಆಚರಣೆ ಮಾಡಲಾಯಿತು..
ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಪದವಿ ವಿಭಾಗದ ಪ್ರಾಚಾರ್ಯರಾದ ಡಾ, ಶ್ರೀಮತಿ, ಜೆ ಎಸ್ ಕವಳೇಕರ ಅವರು ಗಣ್ಯಮಾನ್ಯರನ್ನು ಸ್ವಾಗತಿಸಿದರೆ, ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಹಾದೇವಿ ಹುಣಸಿಬೀಜದ ಅವರು ಅತಿಥಿಗಳ ಪರಿಚಯ ಮಾಡಿಕೊಟ್ಟರು..
ವೇದಿಕೆ ಮೇಲಿನ ಗಣ್ಯರಿಗೆ ಪುಷ್ಪಗುಚ್ಛ ನೀಡಿ ಸ್ವಾಗತ ಕೋರಿದ ನಂತರ ಗಣ್ಯರೆಲ್ಲರೂ ಸೇರಿ, ರಾಜಾ ಲಖಮಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ 160 ನೇ ಜಯಂತಿಯ ಅರ್ಥಪೂರ್ಣವಾದ ಆಚರಣೆಗೆ ಚಾಲನೆ ನೀಡಿದರು..

ಇದಾದ ನಂತರ ವಿದ್ಯಾಲಯದಲ್ಲಿ ಏರ್ಪಡಿಸಿದ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯಮಾನ್ಯರಿಂದ ಪ್ರಶಸ್ತಿ ವಿತರಣೆ ನಡೆದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗಿಯಾದ, ನಿಗದಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಡಾ ಶ್ರೀಧರ ಹೆಗಡೆ ಭದ್ರನ್ ಅವರು ತಮ್ಮ ಅತಿಥಿ ನುಡಿಗಳನ್ನು ಆಡಿದರು..
ಮಾನವನ ಬದುಕಿನಲ್ಲಿ ದಾನ ಎನ್ನುವದು ಅತೀ ಮಹತ್ವದ್ದು, ಸೃಷ್ಟಿಯು ಮಾಡಿದ ದಾನದಿಂದ ನಾವಿಂದು ಸುಖಮಯವಾಗಿ ಬದುಕುತ್ತಿದ್ದೇವೆ, ದಾನಗಳಲ್ಲಿ ಜ್ಞಾನ ದಾನಕ್ಕೆ ತುಂಬಾ ಮೌಲ್ಯವಿದೆ, ಜ್ಞಾನದ ಬಗ್ಗೆ ಡಿವಿಜಿ ಅವರ ಆದಿಯಾಗಿ ಎಂತೆಂಥ ಮಹಾ ಸಾಹಿತಿಗಳು ವರ್ಣನೆ ಮಾಡಿದ್ದಾರೆ, ಮತ್ತು ಈಗಲೂ ಮಾಡುತ್ತಾ ಇದ್ದಾರೆ, ಅಂತಹ ಜ್ಞಾನವನ್ನು ನೀಡುವಂತಹ ಕಾರ್ಯಕ್ಕೆ ಅಡಿಪಾಯ ಹಾಕಿದ, ಈ ಘಣ ಕೆಎಲ್ಇ ಸಂಸ್ಥೆಯ ಸಂಸ್ಥಾಪಕರನ್ನು ಇಂದು ನೆನೆಯುವುದು ನಮ್ಮೆಲ್ಲರ ಸೌ ಎಂದರು..
ರಾಜಾ ಲಖಮಗೌಡರು ಆ ಕಾಲದಲ್ಲಿ ಈ ಕೆಎಲ್ಇ ಸಂಸ್ಥೆಯನ್ನು ಪ್ರಾರಂಭಿಸಲು ಮಾಡಿದ ಸಾಹಸ ಮತ್ತು ಪಟ್ಟಂತ ವ್ಯಥೆ ಯಾವ ಹೋರಾಟಕ್ಕೂ ಕಡಿಮೆ ಇಲ್ಲಾ ಎಂದರು, ಆಗಿನ ಸಪ್ತಶ್ರಿಗಳು ಎಲ್ಲರನ್ನೂ ಕಾಡಿ, ಬೇಡಿ, ಸಂಪನ್ಮೂಲ ಸಂಗ್ರಹಿಸಿ, ಕಷ್ಟಪಟ್ಟು ಕಟ್ಟಿ ಬೆಳೆಸಿದ ಈ ಕೆಎಲ್ಇ ಸಂಸ್ಥೆಯು ಇಂದು ಲಕ್ಷಾಂತರ ಜೀವಗಳಿಗೆ ನೆರಳಾಗಿದೆ ಎಂದರೆ ತಪ್ಪಾಗಲಾರದು ಎಂದರು..

ಇಂದು ದೇಶ ವಿದೇಶಗಳಲ್ಲಿ ಈ ಮಣ್ಣಿನ ಮಕ್ಕಳು ಸಾಧನೆ ಮಾಡುತ್ತಿದ್ದಾರೆ, ನಾಡಿನ ಹೆಸರನ್ನು ವಿಶ್ವಕ್ಕೆ ಬೇಳಗಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಈ ಕೆಎಲ್ಇ ಎಂಬ ವಿದ್ಯಾಸಾಗರ, ಇಂದು ಈ ಸಂಸ್ಥೆಯಲ್ಲಿ ಕಲಿತವರು ಪ್ರಪಂಚದ ಬಹುತೇಕ ಎಲ್ಲಾ ರಂಗದಲ್ಲಿ ಕೆಲಸ ಮಾಡುತ್ತಿರುವದು ಈ ಸಂಸ್ಥೆಯ ಮಹತ್ವವನ್ನು ತಿಳಿಸುತ್ತದೆ ಎಂದರು..
ಇಂತಹ ಮಹಾನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹಾನ ಚೇತನವಾದ ಸರದಾರ ರಾಜಾ ಲಖಮಗೌಡ ಅವರ ಜಯಂತಿಯಂದು ಅವರ ಸ್ಮರಣೆ ಮಾಡುತ್ತಿರುವದು ನಮ್ಮೆಲ್ಲರ ಸೌಭಾಗ್ಯ, ಜೀವನದ ಪ್ರತಿ ಹಂತದಲ್ಲಿಯೂ ನಾವೆಲ್ಲರೂ ಅಂತಹ ಮಹನೀಯರನ್ನು ನೆನೆದು ಮುನ್ನಡೆಯಬೇಕು ಎಂಬ ಸಂದೇಶ ನೀಡಿದರು.
ನಂತರ ವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಎಲ್ ವಿ ದೇಸಾಯಿ ಅವರು ತಮ್ಮ ಅಧ್ಯಕ್ಷೆಯ ನುಡಿಗಳನ್ನು ಆಡುತ್ತಾ, ಜಯಂತಿ ಹಾಗೂ ರಾಜಾ ಲಖಮಗೌಡರ ಬಗ್ಗೆ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡು ಅವರ ವ್ಯಕ್ತಿತ್ವ ಮತ್ತು ಸಾಧನೆ ಬಗ್ಗೆ ಬೆಳಕು ಚೆಲ್ಲಿದರು..
ಕೊನೆಗೆ ಇಂಗ್ಲೀಷ ವಿಭಾಗದ ಮುಖ್ಯಸ್ಥರಾದ ಏಚ್, ಎನ್, ಬನ್ನೂರ ಅವರು ವಂದನಾರ್ಪಣೆ ಮೂಲಕ ಕಾರ್ಯಕ್ರಮ ಅಂತ್ಯಗೊಂಡಿದ್ದು, ಎಸ್ ಜಿ ನಂಜಪ್ಪನವರ, ಪ್ರೊ ಎಸ್, ಬಿ, ತಾರದಾಳೆ, ಸಿಬ್ಬಂದಿಗಳು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ…