ಅರ್ಬಾಜ್ ಮುಲ್ಲಾ ಹತ್ಯೆಗೆ ನ್ಯಾಯ ಸಿಗಬೇಕು..
ಮುಸ್ಲಿಮ ಸಮುದಾಯದ ಮನವಿ..
ಬೆಳಗಾವಿ : ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಂಡ ಪಿರಣವಾಡಿಯ ಗ್ರಾಮದ ಮುಸ್ಲಿಮ ಸಮುದಾಯದ ಸದಸ್ಯರು, ಅರ್ಬಾಜ್ ಮುಲ್ಲಾ ಎಂಬ ಅಮಾಯಕ ಯುವಕನ ಹತ್ಯೆಗೆ ನ್ಯಾಯ ಸಿಗಬೇಕು ಎಂದು ಮನವಿ ಮಾಡಿಕೊಂಡರು…
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಮೆಗೊಂಡ ನೂರಾರು ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಸದಸ್ಯರು ಹತ್ಯಾ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು, ನಮ್ಮ ಯುವಕನ ಸಾವಿಗೆ ನ್ಯಾಯ ಸಿಗಬೇಕು ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಹತ್ಯೆಯಾದ ಅರ್ಬಾಜ್ ಮುಲ್ಲಾ ಎಂಬ ಯುವಕ ತೀರಾ ಬಡಕುಟುಂಬದವ ಆಗಿದ್ದು, ಖಾಸಗಿ ಕೆಲಸ ಮಾಡುತ್ತಾ, ಚಿಕ್ಕ ಮನೆಯಲ್ಲಿ ತನ್ನ ಅಜ್ಜಿಯೊಂದಿಗೆ ವಾಸವಾಗಿದ್ದ, ಸಣ್ಣ ಮಕ್ಕಳು ಕೂಡ ಏನಾದರೂ ಬೈದರೆ ನಕ್ಕು ಸುಮ್ಮನ ಹೋಗುವಂಥ ಅಮಾಯಕ ಯುವಕನಾಗಿದ್ದ ಅರ್ಬಾಜ್ ಮಲ್ಲಾನ ಹತ್ಯೆಯಿಂದ ಅವನ ಮನೆಯೇ ಅನಾಥವಾಗಿದೆ ಎಂದಿದ್ದಾರೆ..
ಘಟನೆ ನಡೆದ ದಿನ ಆರೋಪಿಗಳು, ಹತ್ಯೆಯಾದ ಯುವಕನನ್ನು ಕಿಡ್ನಾಪ್ ಮಾಡಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕೊಲೆ ಮಾಡಿ ಬಿಸಾಕಿದ್ದು, ಶಾಂತವಾದ ಬೆಳಗಾವಿ ನಗರದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿದಂತಾಗಿದೆ ಎಂದಿದ್ದಾರೆ..
ಕೆಲ ಜನರು ಯಾವುದೇ ಭಯವಿಲ್ಲದೇ ಇಂತಾ ಸಮಾಜಘಾತುಕ ಹಾಗೂ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದು, ಸಮಾಜದಲ್ಲಿ ಶಾಂತಿಭಂಗಕ್ಕೆ ಕಾರಣರಾಗಿದ್ದಾರೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಗಾಳಿಗೆ ತೂರಿ ಇಂತಹ ಅಮಾನುಷ ಕೃತ್ಯ ಮಾಡುವವರ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂಬ ಸಂಶಯ ಕಾಡುತ್ತಿದೆ ಎಂದರು.
ಸಮಾಜದ ಯಾವುದೇ ಜಾತಿ, ಧರ್ಮದ ಯುವಕನಾದರೂ ಜೀವ ಒಂದೇ, ಮುಂದೆ ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು, ಅದಕ್ಕಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ವ್ಯವಸ್ಥೆ ಕಾರ್ಯ ಮಾಡಿ ಈ ಸಾವಿಗೆ ನ್ಯಾಯ ನೀಡಬೇಕು ಅದರ ಮೂಲಕ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನೆಲೆಸುವಂತೆ ಮಾಡಬೇಕು ಎಂದರು..
ವರದಿ ಪ್ರಕಾಶ ಕುರಗುಂದ…..