ಅಶಿಸ್ತಿನ ಅಧಿಕಾರಿಗಳ ಎದೆಬಡಿತ ಏರಿಸುತ್ತಿರುವ ಅಂಬೇಡ್ಕರ ಶಕ್ತಿ ಸಂಘಟನೆ.
ಲಾಗ್ ಬುಕ್ ನಿರ್ವಹಣೆಯಲ್ಲಿ ಕಂಡುಬಂದ ಕೆಲ ಲೋಪದೋಷ.
ಸರಿಪಡಿಸಿಕೊಳ್ಳುತ್ತೇವೆಂದ ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿ..
ಬೆಳಗಾವಿ : ಕಚೇರಿಯ ಒಂದು ಮೂಲಭೂತ ಕಡತವಾದ ಲಾಗ್ ಬುಕ್ ನಿರ್ವಹಣೆಯ ವಿಷಯದಲ್ಲಿ ಕೆಲ ಲೋಪದೋಷಗಳು ಕಂಡುಬಂದಿದ್ದು ಬರುವ ದಿನಗಳಲ್ಲಿ ಅದನ್ನು ಸರಿಪಡಿಸುತ್ತದೆ ಎಂದು ಬೆಳಗಾವಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ನಗರದ ಡಾ ಬಿ ಆರ್ ಅಂಬೇಡ್ಕರ ಶಕ್ತಿ ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ಕೋಲಕಾರ ಅವರು ಮಾಹಿತಿ ಹಕ್ಕು ಕಾಯ್ದೆಯಡಿ, ಕಚೇರಿಯ ಲಾಗ್ ಬುಕ್ ನಿರ್ವಹಣೆಯ ಮಾಹಿತಿಯನ್ನು ಕೇಳಿದ್ದು, ಮಾಹಿತಿ ಪಡೆದುಕೊಂಡ ಅವರು ಅದರಲ್ಲಿ ಕೆಲ ಗೊಂದಲಗಳಿದ್ದ ಬಗ್ಗೆ ತಮಗಿರುವ ಅನುಮಾನವನ್ನು ಹೇಳಿಕೊಂಡಿದ್ದರು.
ಇದೇ ವಿಷಯವಾಗಿ ಸಂಬಂಧಿಸಿದ ಕಚೇರಿಯ ಅಧಿಕಾರಿಗಳನ್ನು ಕೇಳಿದಾಗ, ಅವರು ತಮ್ಮ ಲಾಗ್ ಬುಕ್ ನಿರ್ವಹಣೆ ಮಾಡಿರುವ ಬಗೆಯನ್ನು ವಿವರಿಸಿದ್ದು, ಅದರಲ್ಲಿ ನಮಗೆ ಕಾಡುತ್ತಿದ್ದ ಕೆಲ ಪ್ರಶ್ನೆಗಳನ್ನು ಮತ್ತೆ ಅವರಲ್ಲಿ ಕೇಳಿದಾಗ, ಅದೆಲ್ಲಾ ಹಾಗೆ ಇರುವದಿಲ್ಲ, ಎಷ್ಟು ಮಾಹಿತಿ ಬರೆಯಬೇಕೊ ಅಷ್ಟು ಬರೆದಿರುತ್ತೇವೆ, ಸರ್ಕಾರಿ ಆಜ್ಞೆಯ ಪ್ರಕಾರ ಅಷ್ಟೇ ಇರುತ್ತದೆ ಎಂಬ ಸಮಜಾಯಿಸಿ ನೀಡಿದ್ದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಕೆಲ ಪ್ರಶ್ನೆಗಳನ್ನು ಕೇಳಿದಾಗ, ಅದಕ್ಕೆ ಉತ್ತರಿಸದ ಅವರು ಅಂತಹ ವಿಷಯಗಳನ್ನು ಮುಂದೆ ಸರಿಪಡಿಸಿಕೊಂಡು ಹೋಗುತ್ತೇವೆ ಎಂಬ ಭರವಸೆ ನೀಡಿದ್ದಾರೆ..
ಇತ್ತ ಡಾ ಬಿ ಆರ್ ಅಂಬೇಡ್ಕರ ಶಕ್ತಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ಕೋಲಕಾರ ಅವರು ಈ ವಿಷಯದ ಕುರಿತು ಮಾತನಾಡಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ನಿಗಮದ ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ ಸ್ವಲ್ಪ ಸ್ಪಷ್ಟತೆಯ ಕೊರತೆ ಇದ್ದ ಕಾರಣ ಅದರ ವಿರುದ್ಧ ನಮ್ಮ ಸಂಘಟನೆಯಿಂದ ಮುಂಬರುವ ದಿನಗಳಲ್ಲಿ ಹೋರಾಟದ ಬಗ್ಗೆ ಯೋಚಿಸಿದ್ದೇವೆ.
ಅದೇ ರೀತಿ ಯಾವುದೇ ಇಲಾಖೆಯ ಸರ್ಕಾರಿ ಕಚೇರಿಗಳಾಗಲಿ, ಅಲ್ಲಿಯ ಅಧಿಕಾರಿಗಳು ಇಲಾಖೆಯ ನಿಯಮಾವಳಿಗಳನ್ನು ಪಾಲಿಸಿಕೊಂಡು ಹೋಗಬೇಕು, ಆಗ ತಮ್ಮ ಇಲಾಖೆಗೆ ಉತ್ತಮ ಹೆಸರು ಬರುವದರೊಂದಿಗೆ ಸಾರ್ವಜನಿಕರಿಗೂ ಅನುಕೂಲ ಆಗುತ್ತದೆ, ಅದನ್ನು ಬದಿಗೊತ್ತಿ ಆಡಳಿತದಲ್ಲಿ ಅಶಿಸ್ತು ತೋರಿಸುವ ಹಾಗೂ ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಪಡಿಸಿಕೊಂಡಿರುವ ಸನ್ನಿವೇಶಗಳು ಕಂಡು ಬಂದಲ್ಲಿ “ಡಾ ಬಿ ಆರ್ ಅಂಬೇಡ್ಕರ ಶಕ್ತಿ ಸಂಘಟನೆ” ಯಾವತ್ತೂ ಸುಮ್ಮನೆ ಇರುವದಿಲ್ಲ, ಅಂತವರ ವಿರುದ್ಧ ನಮ್ಮ ಸಂಘರ್ಷ ಸದಾ ಇದ್ದೆ ಇರುತ್ತದೆ ಎಂದಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..