ಅಶೋಕ ಚಂದರಗಿ ಅವರಿಗೆ “ಕನ್ನಡ ಗಡಿ ತಿಲಕ” ಪ್ರಶಸ್ತಿ ಪ್ರಧಾನ..
ಬೆಳಗಾವಿ : ರವಿವಾರ ದಿನಾಂಕ 19ರಂದು, ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಬೆಳಗಾವಿ ವತಿಯಿಂದ, ಕನ್ನಡ ನಾಡು ನುಡಿ ಪರವಾಗಿ ಹೋರಾಟ ಮಾಡಿದ ಅಶೋಕ ಚಂದರಗಿ ಅವರಿಗೆ ಗಡಿತಿಲಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ..
ಕನ್ನಡ ಸಾಹಿತ್ಯದ ಪ್ರಮುಖ ಸಾಹಿತಿ ಹಾಗೂ ಚಿಂತಕರಲ್ಲಿ ಒಬ್ಬರಾದ ಡಾ ಬಿ ಎ ಸನದಿ ಅವರು ಮಾನವೀಯ ಮೌಲ್ಯದ ಹಲವಾರು ಕೃತಿಗಳನ್ನು ರಚಿಸಿದ್ದು, ಕರ್ನಾಟಕದ ಒಳಗೂ ಹೊರಗೂ ಸಾಂಸ್ಕೃತಿಕ ರಾಯಭಾರಿಯಾಗಿ ಕನ್ನಡದ ಕಂಪು ಹರಿಸಿದ ಕನ್ನಡಾಭಿಮಾನಿ ಸಾಹಿತಿಯವರ ಹೆಸರಿನಲ್ಲಿ 2002ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ..

ಗಡಿಭಾಗದಲ್ಲಿ ನಾಡು, ನುಡಿ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ರಂಗಗಳಲ್ಲಿ ಔಚಿತ್ಯಪೂರ್ಣವಾಗಿ ಸೇವೆ ಸಲ್ಲಿಸಿದ ವ್ಯಕ್ತಿ, ಸಂಸ್ಥೆಗೆ ಪ್ರತಿ ವರ್ಷ “ಕನ್ನಡ ಗಡಿತಿಲಕ” ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ, ಪ್ರಸಕ್ತ ವರ್ಷ ಈ ಪ್ರಶಸ್ತಿಗೆ ಕನ್ನಡ ನಾಡು ನುಡಿ ಪರ ಹೋರಾಟಗಾರ ಅಶೋಕ ಚಂದರಗಿ ಭಾಜನರಾಗಿದ್ದಾರೆ..
ಅಶೋಕ ಚಂದರಗಿ ಅವರು 1959ರಲ್ಲಿ ರಾಮದುರ್ಗದಲ್ಲಿ ಜನಸಿದ್ದು, ಪತ್ರಿಕೋದ್ಯಮಿಗಳಾಗಿ, ಕನ್ನಡ ಹೋರಾಟಗಾರರಾಗಿ, ನೇತಾರರಾಗಿ, ಸಮಾಜ ಸೇವಕರಾಗಿ ಜನಪ್ರಿಯರು, 1982ರಲ್ಲಿ ಗೋಕಾಕ ಚಳುವಳಿಯ ಮೂಲಕ ಕನ್ನಡ ಚಳುವಳಿಗೆ ಪ್ರವೇಶಿಸಿದ ಚಂದರಗಿ ಅವರು, ಕನ್ನಡ ಕಡ್ಡಾಯ ಹಾಗೂ ಕನ್ನಡ ಶಾಲೆಗಳ ಸುಧಾರಣೆ ಹೋರಾಟದಲ್ಲಿ ಭಾಗಿಯಾದರು..

ನಿರಂತರ 32 ವರ್ಷಗಳಿಂದ ಗಡಿಯಲ್ಲಿ ನಾಡು ನುಡಿಯ ರಕ್ಷಣಾ ಕಾರ್ಯದಲ್ಲಿ ಕಂಕಣಬದ್ಧರಾಗಿ, ಪಾಟೀಲ ಪುಟ್ಟಪ್ಪ ಸ್ ಅವರ ನಂತರ ಕನ್ನಡದ ಬಗ್ಗೆ ಗಟ್ಟಿಯಾಗಿ ಮಾತನಾಡುವ ಕನ್ನಡದ ದ್ವನಿಯಾಗಿದ್ದು, ಕನ್ನಡಕ್ಕೆ ಮತ್ತೊಂದು ವರದಾನವಾಗಿದ್ದಾರೆ..
ಕರೋನಾ ಪರಿಸ್ಥಿತಿಯಲ್ಲಿ “ಹಸಿದವರತ್ತ ನಮ್ಮ ಚಿತ್ತ” ಎಂಬ ಅಭಿಯಾನದಡಿಯಲ್ಲಿ ಸಾವಿರಾರು ಬಡ ಕುಟುಂಬಗಳಿಗೆ ಆಹಾರ ವಿತರಿಸಿದ ಇವರ ಜನೋಪಯೋಗಿ ಕಾರ್ಯ ಪ್ರಶಂಸಾರ್ಹ, ಇಂತಹ ಬಹುಮುಖ ಸೇವೆಯ ಅಶೋಕ ಚಂದರಗಿ ಅವರಿಗೆ ಈ ವರ್ಷದ “ಕನ್ನಡ ಗಡಿತಿಲಕ” ಪ್ರಶಸ್ತಿ ನೀಡಿ ಗೌರವಿಸಿದ್ದು, ಸನದಿ ಸಾಂಸ್ಕೃತಿಕ ಪ್ರತಿಷ್ಠಾನಕ್ಕೆ ಹೆಮ್ಮೆ ಪಡುವ ಸಂಗತಿಯಾಗಿದೆ..

ಈ ಅಭಿನಂದನಾ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಪೂಜ್ಯ ಶ್ರೀ ಡಾ ಅಲ್ಲಮಪ್ರಭು ಮಹಾಸ್ವಾಮಿಗಳು ಬೆಳಗಾವಿಯ ರುದ್ರಾಕ್ಷಿಮಠ, ಶಿವಶಂಕರ ಹಿರೇಮಠ, ಡಾ ದಯಾನಂದ ನೂಲಿ, ಡಾ ಪಿ ಜಿ ಕೆಂಪನ್ನವರ, ಡಾ ರಾಮಕೃಷ್ಣ ಮರಾಠೆ, ಎ ಎ ಸನದಿ, ಸಿ ಎಂ ಬೂದಿಹಾಳ, ಬಸವರಾಜ್ ಗಾರ್ಗಿ ಶಂಕರ ಬಾಗೇವಾಡಿ ಮತ್ತಿತರರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..