ಆಟೋನಗರದ ಔದ್ಯೋಗಿಕ ಸ್ಥಾವರಗಳಿಗೆ ಇ ಖಾತಾ ನೀಡಿ..

ಆಟೋನಗರದ ಔದ್ಯೋಗಿಕ ಸ್ಥಾವರಗಳಿಗೆ ಇ ಖಾತಾ ನೀಡಿ..

ಉದ್ದಿಮೆದಾರರ ಸಮಸ್ಯೆ ಬಗೆಹರಿಸಿ ಉದ್ದಿಮೆ ಬೆಳೆಯಲು ಸಹಕರಿಸಲು ಜಿಲ್ಲಾಧಿಕಾರಿಗಳಲ್ಲಿ ಮನವಿ..

ಬೆಳಗಾವಿ : ನಗರದ ಕಣಬರಗಿ ಇಂಡಸ್ಟ್ರಿಯಲ್ ಏರಿಯಾ ಆಟೋ ನಗರ ( ಕೆ ಐ ಎ ಡಿ ಬಿ ) ಇಲ್ಲಿ ಸುಮಾರು 1200 ಔದ್ಯೋಗಿಕ ಸ್ಥಾವರಗಳಿದ್ದು, ಇವರ ಔದ್ಯೋಗಿಕ ಅಭಿವೃದ್ಧಿಯ ದೃಷ್ಟಿಯಿಂದ ಇ ಖಾತಾಗಳನ್ನು ನೀಡಬೇಕೆಂದು ಕಣಬರಗಿಯ ಕೈಗಾರಿಕಾ ಪ್ರದೇಶದ ಸಂಘದವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಗೆ ಬೇಟಿ ನೀಡಿ ಮನವಿ ನೀಡಿದ ಸಂಘಟನೆಯ ಪದಾಧಿಕಾರಿಗಳು, ಈ ಪ್ರದೇಶದಲ್ಲಿ ಸಣ್ಣ ಸಣ್ಣ ಉದ್ಯೋಗ ಮಾಡುತ್ತಾ ಸಾಕಷ್ಟು ಜನ ಜೀವನ ನಡೆಸುತ್ತಿದ್ದು, ಇವರ ಉದ್ಯೋಗಗಳು ಬೆಳೆಯಲು ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯದ ಅವಶ್ಯಕತೆ ತುಂಬಾ ಇದೆ, ಸಾಲ ನೀಡಲು ಬ್ಯಾಂಕನವರು ಇ ಆಸ್ತಿ ದಾಖಲೆಗಳನ್ನು ಕೇಳುತ್ತಿದ್ದಾರೆ, ಇ ಆಸ್ತಿ ಇಲ್ಲದೆ ಸಾಲ ಬಿಡುವದಿಲ್ಲ ಎನ್ನುತ್ತಿದ್ದಾರೆ, ಇದರಿಂದ ಉದ್ದಿಮೆದಾರರಿಗೆ ತುಂಬಾ ಕಷ್ಟವಾಗಿದೆ.

ಈಗಾಗಲೇ ಧಾರವಾಡ ಹಾಗೂ ಇನ್ನಿತರ ಪಾಲಿಕೆ ವ್ಯಾಪ್ತಿಯಲ್ಲಿ ನೀಡಲಾಗುತ್ತಿದೆ, ಈಗಾಗಲೇ ಜಿಲ್ಲಾಧಿಕಾರಿಗಳು ಒಂದು ಸಭೆಯಲ್ಲಿ 15ದಿನಗಳ ಒಳಗಾಗಿ ಇ ಖಾತಾ ನೀಡುತ್ತಾರೆ ಇಂದು ತಿಳಿಸಿದ್ದೀರಿ, ಬ್ಯಾಂಕ ಸಾಲ ಹಾಗೂ ನೋಂದಣಿಗಾಗಿ ನಮಗೆ ತುಂಬಾ ತೊಂದರೆಗಳು ಆಗುತ್ತಿದ್ದು, ಆದಷ್ಟು ಬೇಗ ನಮಗೆ ಇ ಖಾತಾ ದಾಖಲೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿ, ಉದ್ದಿಮೆದಾರರ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ.

Leave a Reply

Your email address will not be published. Required fields are marked *