ಆಡಳಿತ ಯಂತ್ರದ ಕಾರ್ಯಕ್ಷಮತೆ ಹೆಚ್ಚಿಸಿದ ಅಧಿಕಾರಿಯ ಬೇಟಿ..
ತಾಲ್ಲೂಕು ಪಂಚಾಯತಿ ಪ್ರಗತಿ ಪರಿಶೀಲನೆ ನಡೆಸಿದ ಅಧಿಕಾರಿ ತಂಡ..
ಗ್ರಾಮೀಣ ವಲಯದ ಸರ್ವಾಂಗೀಣ ಅಭಿವೃದ್ಧಿಗಾಗಿ, ಸಲಹೆ ಸೂಚನೆ ನೀಡಿದ ಅಧಿಕಾರಿ ಪರಶುರಾಮ ದುಡಗುಂಟಿ..
ಬೆಳಗಾವಿ : ಗುರುವಾರ ದಿನಾಂಕ 08/08/2024ರಂದು ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ ಅವರು ತಮ್ಮ ಇಲಾಖಾ ಕಾರ್ಯಗತಿಯ ಪರಿಶೀಲನೆಯನ್ನು ಮುಂದುವರೆಸಿದ್ದು, ಬೈಲಹೊಂಗಲ ತಾಲೂಕಿನ ಹಲವು ಕಚೇರಿಗಳಿಗೆ ಬೇಟಿ ನೀಡಿ, ಆಡಳಿತ ಯಂತ್ರಕ್ಕೆ ಚುರುಕು ನೀಡಿದ್ದಾರೆ..
ಮೊದಲಿಗೆ ನೇರವಾಗಿ ಬೈಲಹೊಂಗಲದ ತಾಲೂಕು ಪಂಚಾಯತಿಗೆ ಬೇಟಿ ನೀಡಿ, ಅಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಸಭೆ ನಡೆಸಿ, ಎಲ್ಲಾ ತಾಲೂಕು ನೋಡಲ್ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ..

ಶಿಕ್ಷಣ ಇಲಾಖೆಯಲ್ಲಿ ಆಗಿರುವಂತಹ, ಆಗಬೇಕಾದಂತಹ ಕಾಮಗಾರಿಗಳ ಬಗ್ಗೆ ತಾಲೂಕು ಅಧಿಕಾರಿಗಳಿಂದ ಮಾಹಿತಿ ಪಡೆದು, ಶಾಲಾ ಕಟ್ಟಡಗಳ ದುರಸ್ತೆ, ಮೈದಾನಗಳು, ಗ್ರಂಥಾಲಯಗಳ ಸುಧಾರಣೆಗಳ ಬಗ್ಗೆ ಸಲನೆ ನೀಡಿದ ಲೆಕ್ಕಾಧಿಕಾರಿಗಳು, ಶಿಕ್ಷಕರ ಹಾಗೂ ಪಾಲಕರ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕೆಂದು ಸೂಚಿಸಿದ್ದಾರೆ.
ಶಾಲಾ ಮಾಸಿಕ ಸಭೆಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಜರಾಗದೇ ಇದ್ದರೆ ಅಂತವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆ ನೀಡಿದ ಅಧಿಕಾರಿಗಳು, ವಿವೇಕ ಯೋಜನೆಯಡಿ ಶಾಲಾ ಕಟ್ಟಡಗಳು ಅಕ್ಟೋಬರ್ ಮೊದಲ ವಾರದಲ್ಲಿ ಮುಗಿಯಬೇಕೆಂಬ ಸೂಚನೆ ನೀಡಿದರು..

ಇನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ವಿಷಯದ ಕುರಿತಾಗಿ ಚರ್ಚೆ ಮಾಡಿದ ಅಧಿಕಾರಿಗಳು, ಅಂಗನವಾಡಿ ಕಟ್ಟಡ, ಮಾತೃ ವಂದನಾ ಯೋಜನೆ, ಗ್ರಹಲಕ್ಷ್ಮಿ, ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ, ಬಾಲ್ಯ ವಿವಾಹ ಪ್ರಕರಣಗಳ ಪಟ್ಟಿ, ಅವುಗಳ ಮೇಲೆ ಜರುಗಿಸಿದ ಕ್ರಮ, ಅಂಗನವಾಡಿಗಳ ಬೇಟಿ, ಪಾಲಕರ ಸಭೆ ಮುಂತಾದ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಸುಧಾರಣಾ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ..
ನಂತರ ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ಬೇಟಿ ನೀಡಿ, ಔಷಧಗಳ ದಾಸ್ತಾನುಗಳ ಬಗ್ಗೆ ಸಭೆ ನಡೆಸಲಾಯಿತು, ವೈದ್ಯಾಧಿಕಾರಿಗಳ ಚರ್ಚೆ ಮಾಡುತ್ತಾ, ವಿಶೇಷವಾಗಿ ಡೆಂಗ್ಯೂ ಮಲೇರಿಯಾ, ಪ್ರಕರಣಗಳ ಬಗ್ಗೆ ಹಾಗೂ ಲಭ್ಯವಿರುವ ಔಷದೋಪಕರಣಗಳ ಬಗ್ಗೆ ಮಾಹಿತಿ ಪಡೆಯಲಾಯಿತು, ನೀರಿನ ಪರೀಕ್ಷಾ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆಯೋ? ಆರೋಗ್ಯ ತಪಾಸಣಾ ಕೇಂದ್ರಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬ ಸಕಲ ಮಾಹಿತಿ ಪಡೆದು, ನಮ್ಮ ಕ್ಲಿನಿಕ್ ಗೆ ಪ್ರಥಮ ಆಧ್ಯತೆ ನೀಡಿ, ಅಲ್ಲಿ ಸಕಲ ಸೇವೆ ಒದಗುವಂತೆ ನೋಡಿಕೊಳ್ಳಬೇಕು ಎಂಬ ಸಲಹೆ ನೀಡಿದರು..

ಇದೇ ವೇಳೆ ಆರೋಗ್ಯ ಮತ್ತು ವೈದ್ಯಕೀಯ ವಿಭಾಗಕ್ಕೆ ಸಂಬಂದಿಸಿದ ಯಾವುದೇ ಕಡತಗಳು ಕಾರ್ಯಗಳು ವಿಳಂಬ ಆಗಬಾರದೆಂದು ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ..

ನಂತರ ನಗರದ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ನೀಡಿದ ಅಧಿಕಾರಿ ಪರಶುರಾಮ ದುಡಗುಂಟಿ ಅವರು, ಕೃಷಿ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿ, ಬೀಜ ರಸಗೊಬ್ಬರಗಳ ದಾಸ್ತಾನು ಬಗ್ಗೆ ಪರಿಶೀಲನೆ ಮಾಡಿ, ರೈತರಿಗೆ ಪೂರೈಕೆ ಆಗುವ ಪ್ರಕ್ರಿಯಯ ಬಗ್ಗೆ ಮಾಹಿತಿ ಪಡೆದುಕೊಂಡರು, ಪ್ರತಿ ತಿಂಗಳು ರೈತ ಸಂಪರ್ಕ ಕೇಂದ್ರದಿಂದ ಆಗುವ ಬೆಳವಣಿಗೆ ಬಗ್ಗೆ ಮಾಹಿತಿ ನೀಡಬೇಕು ಎಂಬ ಸೂಚನೆ ನೀಡಿದರು.
ಇದೇ ವೇಳೆ, ಪ್ರಾಣಿಗಳಿಗೆ ಲಸಿಕೆ ಹಾಕಿಸುವದು ಅದರ ಪರಿಶೀಲನೆ ಮಾಡುವದು, ದಾಖಲೆ ಇಡುವದು ಬಹುಮುಖ್ಯ ಎಂದು ತಮ್ಮ ತಾಲೂಕು ಸಿಬ್ಬಂದಿಗಳಿಗೆ ಸೂಚಿಸಿದ್ದು, ಪ್ರತಿ ತಿಂಗಳಿಗೆ ಒಂದು ಸಲವಾದರೂ ಪಶುವೈದ್ಯಕೀಯ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ಮಾಡಿ, ವರದಿ ನೀಡಬೇಕು ಎಂಬ ಸೂಚನೆ ನೀಡಿದರು..

ಇನ್ನು ಗ್ರಾಮೀಣ ಕುಡಿಯುವ ನೀರು, ಅದರ ಸಮರ್ಪಕ ಪೂರೈಕೆಯ ಬಗ್ಗೆ ಕೆಲವು ಸಲಹೆ ಸೂಚನೆ ನೀಡಿದ ಅಧಿಕಾರಿ, ಕಾಮಗಾರಿಗಳ ಪರಿಶೀಲನೆ ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿರುವ ಬಗ್ಗೆ ಪರಿಶೀಲಿಸಿ ಎಂದ ಅವರು, ಪ್ರತಿ ತಿಂಗಳು 10 ಜೆಜೆಎಂ ಕಾಮಗಾರಿ ಪೂರ್ತಿಯಾಗಬೇಕು ಎಂದರು..
ಇನ್ನು ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ, ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಕಟ್ಟಡಗಳು ಹಾಗೂ ಅಲ್ಲಿ ದೊರೆಯುವ ಮೂಲಭೂತ ಸೌಲಭ್ಯಗಳ ಬಗ್ಗೆ ವರದಿ ಮಾಡುವದು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸರಿಯಾಗಿ ಸಿಗುತ್ತಿದೆಯೇ ಎಂದು ಪರೀಕ್ಷಿಸಬೇಕೆಂದ ಅವರು, ವಿಧ್ಯಾರ್ಥಿಗಳ ಅಧ್ಯಯನಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದರು..

ತಮ್ಮ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಈ ಚರ್ಚೆಯ ನಂತರ ಕೊನೆಯದಾಗಿ ಸಂಪಗಾವಿ ಗ್ರಾಮ ಪಂಚಾಯತಿಗೆ ಬೇಟಿ ನೀಡಿದ ಜಿಲ್ಲಾ ಪಂಚಾಯತಿ ಅಧಿಕಾರಿಗಳ ತಂಡ, ಅಲ್ಲಿ ಮುಖ್ಯವಾಗಿ ಲೆಕ್ಕಪತ್ರಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ಮಾಡಿ, ಎಲ್ಲವೂ ಸರಿಯಾಗಿದ್ದು, ಅಧಿಕಾರಿಗಳು ಆಡಳಿತ ಸುಧಾರಣಾ ನಿಟ್ಟಿನಲ್ಲಿ ಸಣ್ಣ ಪುಟ್ಟ ಸೂಚನೆಗಳನ್ನು ನೀಡಿದ್ದಾರೆ..
ಈ ಪ್ರಗತಿ ಪರಿಶೀಲನಾ ಅವಲೋಕನದ ಸಭೆಯಲ್ಲಿ ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಅವರ ಜೊತೆಗೆ, ಜಿಪಂ ಸಿಬ್ಬಂದಿಯಾದ ಶಶಿಕಾಂತ ನೆಸರಗಿ ಹಾಗೂ ಸುವರ್ಣಾ ಮಹೇಂದ್ರಕರ ಕೂಡಾ ಭಾಗಿಯಾಗಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..