ಆತಂಕಕ್ಕೆ ಕಾರಣವಾದ ಎರಡೂನೂರು ವರ್ಷಗಳ ಪುರಾತನ ಮರದ ತೆರವು ಕಾರ್ಯ..

ಆತಂಕಕ್ಕೆ ಕಾರಣವಾದ ಎರಡೂನೂರು ವರ್ಷಗಳ ಪುರಾತನ ಮರದ ತೆರವು ಕಾರ್ಯ..

ಪಾಲಿಕೆ ಕಡೆಯಿಂದ ವ್ಯವಸ್ಥಿತವಾದ ತೆರವು ಕಾರ್ಯಚರಣೆ..

ಬೆಳಗಾವಿ : ನಗರದ ಮಧ್ಯಭಾಗ ಜನಜಂಗೂಳಿಯಿಂದ ತುಂಬಿದ ಮಾರುಕಟ್ಟೆಯ ಸ್ಥಳವಾದ ವಾರ್ಡ್ ಸಂಖ್ಯೆ ನಾಲ್ಕರ ನರಗುಂದಕರ ಬಾವೆ ವೃತ್ತದಲ್ಲಿ ಸುಮಾರು 200 ವರ್ಷಗಳ ಹಳೆಯ ಆಲದ ಮರವು ಇಂದೋ ನಾಳೆ ಬೀಳುವ ಪರಿಸ್ಥಿತಿ ಹೊಂದಿದ್ದು, ಸ್ಥಳೀಯ ವ್ಯಾಪಾರಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕದ ಸ್ಥಿತಿ ನಿರ್ಮಿಸಿತ್ತು.

ಇದನ್ನರಿತ ವಾರ್ಡ ಸಂಖ್ಯೆ ನಾಲ್ಕರ ನಗರ ಸೇವಕರಾದ ಜಯತೀರ್ಥ ಸವದತ್ತಿ ಅವರು ಸ್ಥಳಕ್ಕೆ ಆಗಮಿಸಿ, ಸ್ಥಳೀಯ ವ್ಯಾಪಾರಸ್ಥರ ಸಹಮತಿ ಪಡೆದು, ವ್ಯಾಪಾರಿ ಅಂಗಡಿಗಳ ಮೇಲೆ ಅಪಾಯದ ಮುನ್ಸೂಚನೆ ಅಂತಿರುವ ಮರದ ಕೆಲ ಭಾಗಗಳನ್ನು ತೆರವು ಗೊಳಿಸುವ ಕಾರ್ಯ ಮಾಡಿದ್ದಾರೆ. ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಗಳನ್ನು ಕರೆಸಿ ಅರ್ಧದಷ್ಟು ತೆರವು ಮಾಡಿದ್ದು ಇನ್ನೆರಡು ದಿನಗಳಲ್ಲಿ ಉಳಿದ ತೆರವು ಕಾರ್ಯಚರಣೆ ಪೂರ್ಣಗೊಳಿಸುವದಾಗಿ ನಗರ ಸೇವಕರು ಮಾಹಿತಿ ನೀಡಿದ್ದಾರೆ.

ಮಾರುಕಟ್ಟೆಯ ಕೇಂದ್ರ ಸ್ಥಾನವಾದ, ಬಾಲಾಜಿ ದೇವಸ್ಥಾನದ ಎದುರಿಗೆ ಇರುವ, ಹತ್ತಾರು ವ್ಯಾಪಾರಿ ಅಂಗಡಿಗಳು ಆತಂಕದ ಸ್ಥಿತಿಯಲ್ಲಿ ಈ ಮರದ ಕೆಳಗೆ ಇದ್ದಿದ್ದು, ಅಲ್ಲಿಯ ವ್ಯಾಪಾರಿಗಳು ಈಗ ಸ್ವಲ್ಪ ನಿರಾತಂಕ ಆಗಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ…