ಆದರ್ಶ ನಾಗರಿಕರನ್ನು ಸೃಷ್ಟಿಸಲು ಕಾನೂನು ಶಿಕ್ಷಣ ಅತ್ಯಗತ್ಯ
ಕುಲಸಚಿವರಾದ ಡಾ ಎಸ್ ವಿ ನಾಡಗೌಡರ ಹೇಳಿಕೆ..
ಬೆಳಗಾವಿ : ವಕೀಲ ವೃತ್ತಿ ಘನತೆ ವೃತ್ತಿಯಾಗಿದ್ದು, ಆದರ್ಶ ನಾಗರಿಕರನ್ನು ರೂಪಿಸಲು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಕಾನೂನು ಶಿಕ್ಷಣ ಅತ್ಯಗತ್ಯ, ಪ್ರಸ್ತುತ ಕಾಲಘಟ್ಟದಲ್ಲಿ ವಕೀಲ ವೃತ್ತಿಯು ಸ್ಪರ್ಧಾತ್ಮಕವಾಗಿದೆ ಎಂದು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎಸ್.ವಿ. ನಾಡಗೌಡರ ಅಭಿಪ್ರಾಯಪಟ್ಟರು.
ನಗರದ ಪ್ರತಿಷ್ಠಿತ ರಾಜಾಲಖಮಗೌಡ ಕಾನೂನು ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಆರ್ ಎಲ್ ಕಾನೂನು ಕಾಲೇಜಿನ ಪರಂಪರೆ ಕುರಿತು ಹೆಮ್ಮೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಚೇರ್ಮನ್ ಎಂ.ಆರ್.ಕುಲಕರ್ಣಿ ವಿದ್ಯಾರ್ಥಿಗಳಿಗೆ ವಕೀಲಿ ವೃತ್ತಿಯ ಕುರಿತು ಸಲಹೆ ನೀಡುತ್ತಾ ವಿದ್ಯಾರ್ಥಿಗಳು ನಿರಂತರವಾಗಿ ಕಷ್ಟಪಟ್ಟು ಕೆಲಸ ಮಾಡಬೇಕು. ಹಣದ ಹಿಂದೆ ಹೋಗಬಾರದು; ಪ್ರಾಮಾಣಿಕ ಪರಿಶ್ರಮವಿದ್ದರೆ, ಹಣ ಮತ್ತು ಅವಕಾಶಗಳು ನಿಮ್ಮನ್ನು ಹಿಂಬಾಲಿಸುತ್ತದೆ, ಆದರೆ ಸಂಕಲ್ಪ ಮುಖ್ಯ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್ ಮಾತನಾಡಿ, ಈ ಕಾಲೇಜಿನಲ್ಲಿ ಉತ್ತೀರ್ಣರಾದ ನಂತರ ಮಗುವಿಗೆ ಭವಿಷ್ಯದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಪೋಷಕರಿಗೆ ಭರವಸೆ ನೀಡಿದರು.
ಕಾಲೇಜಿನ ಐಕ್ಯೂಎಸಿ ವಿಭಾಗದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ವಿಭಾಗದ ಸಂಯೋಜಕಿ ಡಾ. ಸಮಿನಾ ಬೇಗ್, ಅಧ್ಯಾಪಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸುನಿಧಿ ಜೋಶಿ ಗಣ್ಯರನ್ನು ಪರಿಚಯಿಸಿದರು. ಡಾ. ಸಮಿನಾ ಬೇಗ್ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ನೇಹಾ ಹಾಗೂ ಅನುಜಾ ನಿರೂಪಿಸಿ, ರುಚಿತ್ರಾ ವಂದಿಸಿದರು.
ವರದಿ ಪ್ರಕಾಶ ಕುರಗುಂದ..