ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ 2025..

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ 2025..

ವಾಲ್ಮೀಕಿ ಎಂದರೆ ಜ್ಞಾನದ ಅರಿವಿನ ಶಿಕ್ಷಣದ ಸಂಕೇತ..

ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ಕಲಿಸುವದೇ ವಾಲ್ಮೀಕಿಯ ಆರಾಧನೆ..

ಡಾ ಅರುಣ ಜೋಳದಕೂಡ್ಲಗಿ, ಕನ್ನಡ ಪ್ರಾಧ್ಯಾಪಕರು, ಕಲಬುರ್ಗಿ..

ಬೆಳಗಾವಿ : ವಾಲ್ಮೀಕಿ ಎಂದರೆ ಜ್ಞಾನದ ಸಂಕೇತ,ಅರಿವಿನ ಸಂಕೇತ ಹಾಗೂ ಶಿಕ್ಷಣದ ಸಂಕೇತ, ನಾವು ವಾಲ್ಮೀಕಿ ಕುಲದವರಾಗಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರವನ್ನು ಕಲಿಸಬೇಕು, ಅದೇ ನಾವು ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲಿಸುವ ಆರಾಧನೆ ಹಾಗೂ ಹಾಗೂ ಗೌರವ ಎಂದು ಕಲಬುರ್ಗಿಯ ಬಿ ಆರ್ ಅಂಬೇಡ್ಕರ್ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ ಅರುಣ ಜೋಳದಕೂಡ್ಲಗಿ ಹೇಳಿದ್ದಾರೆ..

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ದಿನಾಂಕ 07/10/2025 ರಂದು ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿಯವರ ಜಯಂತಿಯ ಆಚರಣೆ ಸಂದರ್ಭದಲ್ಲಿ ಮೇಲಿಂನಂತೆ ಹೇಳಿದ್ದಾರೆ.

ವೇದಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗಣ್ಯ ಮಾನ್ಯರಿಂದ ಕಾರ್ಯಕ್ರಮದ ಉದ್ಘಾಟನೆಗೆ ಚಾಲನೆ ನೀಡಲಾಯಿತು..

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಡಾ ಅರುಣ ಜೋಳದಕೂಡ್ಲಗಿ ಅವರು ಮಾತನಾಡಿ, ಮೊದಲಿಗೆ ವಾಲ್ಮೀಕಿ ಜಯಂತಿಯ ಶುಭಾಶಯ ಕೋರುತ್ತಾ, ಹಿಂದೆ ನಾನು ಭಾಗಿಯಾದ ವಾಲ್ಮೀಕಿ ಜಯಂತಿಯಲ್ಲಿ ಬಹುಪಾಲು ಗಂಡು ಮಕ್ಕಳ ಉಪಸ್ಥಿತಿ ಇರುತ್ತಿತ್ತು, ಬೆಳಗಾವಿಯಲ್ಲಿ ಹೆಣ್ಮಕ್ಕಳು ಭಾಗಿ ಆಗಿರುವದರಿಂದ ಅವರಿಗೆ ಧನ್ಯವಾದ, ಒಂದು ಸಮುದಾಯವೆಂದರೆ ಗಂಡು ಹೆಣ್ಣು ಇಬ್ಬರೂ ಮುಖ್ಯ, ವಾಲ್ಮೀಕಿ ಸಮುದಾಯದಲ್ಲಿ ಹೆಣ್ಮಕ್ಕಳು ಸಮುದಾಯದ ಕಾರ್ಯದಲ್ಲಿ ಭಾಗಿಯಾಗುತ್ತಿರುವದು ಸಂತಸದ ವಿಷಯ ಎಂದರು.

ಈ ನಮ್ಮ ವಾಲ್ಮೀಕಿ ಸಮುದಾಯದ ತಿಳಿನಿಲಿ ಶಾಲು ನಮ್ಮದೇ ಆದ ವಿಶೇಷ ಆಸ್ತಿತ್ವವನ್ನು ತೋರಿಸುತ್ತದೆ, ಹಿಂದೆ ಇದನ್ನು ಕೇಸರಿಮಯ ಮಾಡಲು ಕೆಲವರು ಪ್ರಯತ್ನ ಪಟ್ಟಿದ್ದರು. ಆದರೆ ವಾಲ್ಮೀಕಿ, ಅಂಬೇಡ್ಕರ ಅವರಂತಹ ಮಹನೀಯರಿಂದ ಇಂದೂ ಕೂಡಾ ನಮ್ಮ ತಿಳಿನಿಲಿ ಶಾಲು ತನ್ನ ಛಾಪು ಉಳಿಸಿಕೊಂಡು ಬಂದಿದೆ ಎಂದರು.

ಇಂದು ಸರ್ಕಾರದ ನೇತೃತ್ವದಲ್ಲಿ ವಾಲ್ಮೀಕಿ ಜಯಂತಿ ಮಾಡುತ್ತಿರುವದು ಇದು 15ನೇ ವರ್ಷ, ಸರ್ಕಾರಿ ರಜೆ ಘೋಸಿಸಿ ದೊಡ್ಡ ಮಟ್ಟದಲ್ಲಿ ಎಲ್ಲರೂ ಸೇರಿ ವಿಜೃಂಭನೆಯಿಂದ
ಪೂಜಾ ಮಾಡಿ ಜಯಂತಿ ಆಚರಣೆಯನ್ನು ಮಾಡುತ್ತಿದ್ದೇವೆ..

ಆದರೆ ವಾಲ್ಮೀಕಿ ಅವರ ಕಾಲದಲ್ಲಿ ಅಂದರೆ ಕ್ರಿಪೂ ಮೂರನೇ ಶತಮಾನದಲ್ಲಿ ಸಂಸ್ಕೃತವನ್ನು ಕೇಳಿದರೆ ಕಿವಿ ಕೀಳುವಂತಹ, ಓದಿದರೆ ನಾಲಿಗೆ ಸಿಳುವಂತಹ ಕಾಲವಿತ್ತು, ಜ್ಞಾನವನ್ನು ಬುಡಕಟ್ಟು ಜನರು ಪಡೆಯುವದು ಅಸಾಧ್ಯವಾಗಿತ್ತು.
ಅಂತಹ ಪರಿಸ್ಥಿತಿಯಲ್ಲಿ ವಾಲ್ಮೀಕಿ ಅವರು ಎಲ್ಲಾ ಸಮಸ್ಯೆ, ಕಷ್ಟಗಳನ್ನು ಬದಿಗೊತ್ತಿ, ಸಂಸ್ಕೃತಿ ಕಲಿತು ಬುಡಕಟ್ಟು ಸಮುದಾಯಗಳ ಪ್ರಥಮ ಸರಸ್ವತಿ ಪುತ್ರರಾದವರು ಎಂದಿದ್ದಾರೆ.

ವಾಲ್ಮೀಕಿ ಎಂದರೆ ಜ್ಞಾನದ ಸಂಕೇತ, ಅರಿವಿನ ಸಂಕೇತ, ಶಿಕ್ಷಣದ ಸಂಕೇತ..
ನಮ್ಮ ಮಕ್ಕಳನ್ನು ಶಿಕ್ಷತರನ್ನಾಗಿ ಮಾಡುವದೇ ನಾವು ವಾಲ್ಮೀಕಿಗೆ ಸಲ್ಲಿಸುವ ಆರಾಧನೆ, ಪೂಜೆ, ಗೌರವ ಎಂದಿದ್ದಾರೆ.

ಮೇಲ್ಜಾತಿಗಳು ಕೇಳಜಾತಿಯ ಮಹಾ ಪುರುಷರ ಬಗ್ಗೆ ಕಟ್ಟುವ ಕಟ್ಟು ಕಥೆಗಳಿಗೆ ಕೊರತೆ ಇಲ್ಲ, ವಾಲ್ಮೀಕಿಯನ್ನು ದರೋಡೆಕೋರ ಎಂದು ಕಥೆ ಹುಟ್ಟಿದ್ಫು ಹತ್ತನೇ ಶಮಾನದ ಸ್ಕಂದ ಪುರಾಣದಲ್ಲಿ, ವಾಲ್ಮೀಕಿ ಇದ್ದ ಕಾಲದಿಂದ 1300 ವರ್ಷಗಳ ನಂತರ ಈ ಕಥೆ ಹುಟ್ಟುತ್ತದೆ, ಹದಿನೈದನೆ ಶತನನದಲ್ಲಿ ಆಧ್ಯಾತ್ಮಿಕ ರಾಮಾಯಣದಲ್ಲಿ ಕಥೆ ಕಟ್ಟುತ್ತಾರೆ, ಹದಿನಾರನೇ ಶತಮಾನದಲ್ಲಿ ಹೀಗೆ ಕಥೆ ಕಟ್ಟುತ್ತಾರೆ, ಪಂಜಾಬ್ ಹಾಗೂ ಉತ್ತರ ಭಾರತದಲ್ಲಿ ವಾಲ್ಮೀಕಿಯನ್ನು ದರೋಡೆಕೋರ ಎಂದರೆ ಕೇಸ್ ಆಗುತ್ತದೆ. ಅದನ್ನೇ ಇಲ್ಲಿಯೂ ಪಾಲಿಸಬೇಕಾಗಿದೆ ಎಂದರು..

ರಾಮನನ್ನು ವಿಷ್ಣುವಿನ ಅವತಾರ ಎಂದು ಬಿಂಬಿಸುವ ಕೆಲ ಮೇಲ್ಜಾತಿಯ ಸಮುದಾ ಗಳು ಹೀಗೆ ಕಟ್ಟುಕತೆ ಕಟ್ಟುತ್ತಾ ಬಂದಿವೆ, ಇದು ಹತ್ತನೇ ಶತಮಾನದ ನಂತರ ಆದ ಬೆಳವಣಿಗೆ ಆದರೆ ವಾಲ್ಮೀಕಿ ಇದ್ದಿದ್ದು ಕ್ರಿ ಪೂ ಮೂರನೇ ಶತಮಾನ ಎಂದಿದ್ದಾರೆ.

ಜಾಗತಿಕ ಮಹಾಕಾವ್ಯಗಳ ಸಾಲಿನಲ್ಲಿ ವಾಲ್ಮೀಕಿ ರಚಿಸಿದ ರಾಮಾಯಣ ಮುಖ್ಯ ಸಾಲಿನಲ್ಲಿ ನಿಲ್ಲುತ್ತದೆ, ನಿಜವಾದ ವಾಲ್ಮೀಕಿಯನ್ನು ಪರಿಯಿಸಿದ್ದು ಡಾ ಬಾಬಾಸಾಹೇಬ ಅಂಬೇಡ್ಕರ್ ಎಂದಿದ್ದಾರೆ..

ಇನ್ನು ಪ್ರಸ್ತುತ ವಾಲ್ಮೀಕಿ ಸಮುದಾಯದ ಬಗ್ಗೆ ಹೇಳಬೇಕೆಂದರೆ ರಾಜ್ಯದ ಕೆಲ ಭಾಗಗಳಲ್ಲಿ ಇನ್ನು ನಮ್ಮವರು ಶಿಕ್ಷಣದಿಂದ ಬಹಳ ದೂರ ಉಳಿದಿದ್ದಾರೆ, ಅದನ್ನು ಬದಲಾಯಿಸಬೇಕು, ಇಂತ ಜಯಂತಿಯಲ್ಲಿ ಅದರ ಬಗ್ಗೆ ಚರ್ಚೆ ಆಗಬೇಕು, ಇನ್ನು ರಾಜ್ಯದ ಬಲಿಷ್ಠ ಕುರುಬ ಸಮುದಾಯವನ್ನು ನಮ್ಮ ವಾಲ್ಮೀಕಿ ಸಮುದಾಯದಕ್ಕೆ ಸೇರಿಸುವದರಿಂದ ವಾಲ್ಮೀಕಿ ಸಮುದಾಯ ಮತ್ತೆ ಗಂಡಾಂತರ ಸ್ಥಿತಿಗೆ ಬರುವಂತಾಗುತ್ತದೆ, ಅವರಿಗೆ ರಾಜಕೀಯ ಮೀಸಲಾತಿ ಅವಶ್ಯಕತೆ ಇದೆ, ಅವರೇನಾದರೂ ಬಂದರೆ ನಮ್ಮವರು ಶಾಸಕರಾಗೋದು ತುಂಬಾ ಕಠಿಣ ಆಗುತ್ತದೆ ಎಂದರು..

ಸಮುದಾಯದ ಬೆನ್ನೆಲುಬಾಗಿ ನಿಂತಿರುವ ಈ ಭಾಗದ ಜನಪ್ರತಿನಿಧಿ ಸತೀಶ ಜಾರಕಿಹೊಳಿ ಅವರು ಮಾನವ ಬಂದುತ್ವ ವೇದಿಕೆ ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ತೆರೆದು ಇಡೀ ಸಮುದಾಯಕ್ಕೆ ಬಂದುತ್ವದ ಸಂದೇಶ ಸಾರುವ ಕಾರ್ಯ ಮಾಡುತ್ತಿದ್ದಾರೆ ಅದು ಎಲ್ಲರೂ ಮೆಚ್ಚುವಸಂತಕ ಕಾರ್ಯ, ಅಂತಹ ಕಾರ್ಯದ ಅವಶ್ಯಕತೆ ಈಗ ತುಂಬಾ ಇದೆ ಎಂದಿದ್ದಾರೆ, ವಾಲ್ಮೀಕಿ ಸಮುದಾಯಕ್ಕೂ ಡಿಎಸ್ಎಸ್ ರೀತಿಯ ಸಂಘಟನೆ ಅವಶ್ಯಕತೆ ಇದೆ ಎಂದಿದ್ದಾರೆ.

ಜಯಂತಿಯ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಹೋನಕೇರಿ, ಜಿಪಂ ಉಪಕಾರ್ಯದರ್ಶಿ ಬಸವರಾಜ್ ಹೆಗ್ಗನಾಯಕ, ಜಿಪಂ ಯೋಜನಾಧಿಕಾರಿ ಬಂಗಾರಪ್ಪನವರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ರಾಮನಗೌಡ ಕನ್ನೊಳ್ಳಿ, ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್ ನಾಯಕ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹರ್ಷ, ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕಾಂಬ್ಳೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಸವರಾಜ್ ಕುರಿಹುಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ವಿದ್ಯಾವತಿ ಭಜಂತ್ರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನೈನವರ, ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿ ಭೀಮಗೋಳ, ಸಮುದಾಯದ ಪ್ರಮುಖರಾದ ರಾಜಶೇಖರ್ ತಳವಾರ, ಬಾವುಕಣ್ಣ ಬಂಗ್ಯಾಗೋಳ, ಯಲ್ಲಪ್ಪ ಕಾಕತಿ, ಸುರೇಶ್ ಗವಣ್ಣವರ, ಮಹೇಶ್ ಸಿಗಿಹಳ್ಳಿ ಹಾಗೂ ಸಮುದಾಯದ ಇತರ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..