ಆಪ್ತ ಸಹಾಯಕರು ಮಾಡಿದ ಕೆಲಸ ಸಚಿವರೇ ಮಾಡಿದ ಹಾಗೆ..

ಆಪ್ತ ಸಹಾಯಕರು ಮಾಡಿದ ಕೆಲಸ ಸಚಿವರೇ ಮಾಡಿದ ಹಾಗೆ..

ಸಚಿವರ ಸೂಚನೆ ಮೇರೆಗೆನೆ ಪಿಎ ಗಳು ಕೆಲಸ ಮಾಡೋದು..

ನುಣುಚಿಕೊಳ್ಳಲು ಆಗುವದಿಲ್ಲ, ರಾಜೀನಾಮೆ ನೀಡಲಿ, ನಿರ್ದೋಷಿ ಎಂದಾದರೆ ಮತ್ತೆ ಮಂತ್ರಿಯಾಗಲಿ..

ಅರವಿಂದ ಬೆಲ್ಲದ, ವಿಧಾನ ಸಭಾ ವಿರೋಧ ಪಕ್ಷದ ಉಪನಾಯಕ..

ಬೆಳಗಾವಿ : ಸಚಿವರ ಆಪ್ತ ಸಹಾಯಕರು ಯಾರ ಸೂಚನೆ ಮೇಲೆ ಕೆಲಸ ಮಾಡುವರು? ಸಚಿವರ ಸೂಚನೆ ಮೇಲೆ ಪಿಎ ಗಳು ಕೆಲಸ ಮಾಡುವಾಗ, ಪಿಎ ಮಾಡಿದ ಕೆಲಸ ಸಚಿವರು ಮಾಡಿದ ಹಾಗೆಯೇ, ಸಚಿವರು ಎಲ್ಲಾ ಕಡೆಗೆ ಫೋನ್ ಮಾಡಲು ಆಗುವದಿಲ್ಲ, ಪಿಎಗಳಿಗೆ ಹೇಳಿರುತ್ತಾರೆ, ಹೀಗಾಗಿ ನುಣುಚಿಕೊಳ್ಳಲು ಆಗುವದಿಲ್ಲ, ತಮ್ಮ ಆಪ್ತ ಸಹಾಯಕನ ಹೆಸರು ಬಂದಿರುವ ಈ ಸರ್ಕಾರಿ ನೌಕರನ ಆತ್ಮಹತ್ಯಾ ಪ್ರಕರಣದಲ್ಲಿ ಸಚಿವರು ಮೊದಲು ರಾಜೀನಾಮೆ ನೀಡಲಿ, ತನಿಖೆ ನಂತರ ನಿರ್ದೋಷಿ ಎಂದು ಕಂಡುಬಂದಲ್ಲಿ ಮತ್ತೆ ಸಚಿವರಾಗಿ ಮುಂದುವರೆಯಲಿ ಎಂದು ವಿಧಾನ ಸಭಾ ವಿರೋಧ ಪಕ್ಷದ ನಾಯಕರಾದ ಅರವಿಂದ ಬೆಲ್ಲದ ಅವರು ಹೇಳಿದ್ದಾರೆ.

ಗುರುವಾರ ದಿನಾಂಕ 07/11/2024ರಂದು ಬೆಳಗಾವಿಯ ಮೃತ ಸರ್ಕಾರಿ ನೌಕರ ರುದ್ರಣ್ಣ ಯಡವನ್ನವರ ಅವರ ಮನೆಗೆ ಬೇಟಿ ನೀಡಿ, ಮೃತನ ತಾಯಿ ಹಾಗೂ ಪತ್ನಿಯ ಜೊತೆಗೆ ಮಾತನಾಡಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಿಜೆಪಿ ನಾಯಕರು, ತಮ್ಮ ಮಗನ ಸಾವಿಗೆ ನ್ಯಾಯ ಕೊಡಿಸುವ ಪ್ರಯತ್ನವನ್ನು ನಮ್ಮ ಬಿಜೆಪಿ ಪಕ್ಷದಿಂದ ನಾವು ಮಾಡುತ್ತೇವೆ, ತಮ್ಮ ಜೊತೆಗೆ ನಾವೆಲ್ಲಾ ಇದ್ದೇವೆ ಎಂದು ದೈರ್ಯ ನೀಡಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಅರವಿಂದ ಬೆಲ್ಲದ ಅವರು ಮಾಜಿ ಶಾಸಕ ಸಂಜಯ ಪಾಟೀಲ ಅವರ ನೇತೃತ್ವದಲ್ಲಿ ರುದ್ರಣ್ಣ ಅವರ ಕುಟುಂಬಕ್ಕೆ ಬೇಟಿ ನೀಡಿ, ಸಾಂತ್ವನ ಹೇಳಿದ್ದೇವೆ, ಇದು ಬಹಳ ದುಃಖದ ಸಂಗತಿ, ಆ ತಾಯಿಯ ಹಾಗೂ ತಂಗಿಯ ನೋವನ್ನು ನೋಡೋದಕ್ಕೆ ಆಗುವದಿಲ್ಲ, ಯಾರಿಗೂ ಕೂಡಾ ಇಂತಹ ಪರಿಸ್ಥಿತಿ ಬರಬಾರದು, ಏನೇ ಒತ್ತಡ ಇದ್ದರೂ ಕೂಡ ಈ ರೀತಿಯ ನಿರ್ಧಾರ ರುದ್ರಣ್ಣ ತಗೊಬಾರದಿತ್ತು ಎಂದಿದ್ದಾರೆ.

ಈ ಘಟನೆಯ ಬಗ್ಗೆ ನಮ್ಮ ಬಿಜೆಪಿ ಪಕ್ಷದಿಂದ ಇಡೀ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದೇವೆ, ಒಬ್ಬ ಸರ್ಕಾರಿ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರೆ ಅದಕ್ಕೆ ಸೂಕ್ತ ತನಿಖೆ ನಡೆಸಿ ಎಂದು ಡಿಸಿ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದೇವೆ, ಆರೋಪಿಗಳನ್ನು ಬೇಗ ಬಂಧಿಸಬೇಕು, ಯಾವುದೇ ರೀತಿಯ ಸಾಕ್ಷ್ಯ ನಾಶ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದೇವೆ ಎಂದಿದ್ದಾರೆ..

ರುದ್ರಣ್ಣ ಅವರು ತಮ್ಮ ಸಾವಿಗೆ ಕಾರಣವನ್ನು ವಾಟ್ಸ್ ಅಪ್ ಗ್ರೂಪ್ ನಲ್ಲಿ ಹಾಕಿದ್ದಾರೆ, ಸಂಜೆ ಮನೆಯವರಿಗೂ ಮಾತಾಡಿದ್ದಾರೆ, ಅದಾದ ನಂತರ ಅವರಿಗೆ ಯಾವ ಕರೆಗಳು ಬಂದಾವು? ನಂತರ ಬಿಲ್ಡಿಂಗ್ ಕೆಳಗೆ ಬಂದು ಹೋದರಂತೆ, ಅಲ್ಲಿ ಯಾರನ್ನು ಬೇಟಿ ಮಾಡಿದರು? ಎಲ್ಲದರ ಬಗ್ಗೆ ಸೂಕ್ತ ತನಿಖೆ ಆಗಬೇಕು, ರಾಜ್ಯದಲ್ಲಿ ಸುಮಾರು ಏಳು ಜನ ಸರ್ಕಾರಿ ಅಧಿಕಾರಿಗಳ ಆತ್ಮಹತ್ಯಾ ಆಗಿದ್ದು, ಸೂಕ್ತ ತನಿಖೆಗಾಗಿ ಸಿಬಿಐಗೆ ನೀಡಬೇಕು, ಸರ್ಕಾರದಲ್ಲಿದ್ದವರು ಬ್ರಷ್ಟಾಚಾರ ಅನ್ಯಾಯದ ಕೆಲಸ ಮಾಡಲಿಕ್ಕೆ ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಮಾಡುವುದರಿಂದ ಇಂತಹ ಘಟನೆಗಳು ಸಂಭವಿಸುವವು.

ಸಾಯುವ ಮೊದಲು ಮಂತ್ರಿಗಳ ಆಪ್ತ ಸಹಾಯಕನ ಹೆಸರು ಹೇಳಿರುವ ಕಾರಣಕ್ಕೆ, ಮಂತ್ರಿಗಳು ರಾಜೀನಾಮೆ ನೀಡಬೇಕು ಅದೇ ರೀತಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದಿದ್ದಾರೆ..

ಈ ಸಾಂತ್ವನ ಬೇಟಿಯ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಮೂರುಗೆಂದ್ರಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶಂಕರ ಮಾಡಲಗಿ, ಎಫ್ ಎಸ್ ಸಿದ್ದನಗೌಡರ, ಬಿಜೆಪಿ ಪದಾಧಿಕಾರಿಗಳಾದ ಯಲ್ಲೇಶ್, ಸಚಿನ ಕಡಿ, ಮತ್ತಿತರರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..