ಆಯುಷ್ ಟಿವಿಯಿಂದ ಬೆಳಗಾವಿಯಲ್ಲಿ ಮನರಂಜನಾ ಮಹಾಮೇಳ…
ಬೆಳಗಾವಿ ಕಲಾ ಪ್ರತಿಭೆಗಳಿಗೆ ಮುಕ್ತ ಹಾಗೂ ಸುವರ್ಣ ಅವಕಾಶ..
ನಾಗೇಶ ವೈ ದೇಸಾಯಿ..
ಬೆಳಗಾವಿ : ಗುರುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯದ ಸದಭಿರುಚಿ ಕಾರ್ಯಕ್ರಮ ನೀಡುವ ಆಯುಷ್ ಟಿವಿಯ ಸಿಬ್ಬಂದಿಯವರು, ಬೆಳಗಾವಿ ನಗರದಲ್ಲಿ ತಾವು ನಡೆಸುತ್ತಿರುವ ಪ್ರತಿಭಾ ಅನ್ವೇಷಣೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ..
ಕಳೆದ ಒಂಬತ್ತು ವರ್ಷದಿಂದ ಆರೋಗ್ಯ ಮತ್ತು ಜೀವನ ಶೈಲಿಯ ಕುರಿತು ಉತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿಕೊಂಡು ಬಂದಿರುವ ಆಯುಷ್ ಟಿವಿಯವರು, ಇದೇ ನವೆಂಬರ್ ತಿಂಗಳ 18ನೆಯ ಬೆಳಗಾವಿಯ ಲವ್ ಡೇಲ್ ಸೆಂಟ್ರಲ್ ಸ್ಕೂಲ್ ನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಆಡಿಷನ ಪ್ರಾರಂಭವಾಗುವುದೆಂಬ ಮಾಹಿತಿ ನೀಡಿದ್ದಾರೆ..

ಬೆಳಗಾವಿ ಜಿಲ್ಲೆಯ ಗಾಯನ ಪ್ರತಿಭೆಗಳಿಗಾಗಿ ಆಯುಷ್ ಮುಸಿಕ್ “ವಾಯ್ಸ್ ಆಫ್ ಬೆಳಗಾವಿ”, ಮಾತಿನ ಮಲ್ಲರಿಗಾಗಿ “ಹರಟೆ ಕಟ್ಟೆ”, ಹಾಸ್ಯ ಪ್ರತಿಭೆಗಳಿಗೆ ಸ್ಟ್ಯಾಂಡ್ ಅಪ್ ಕಾಮಿಡಿಯ “ಕಾಮಿಡಿ ಕಿಂಗ್” ಆಪ್ ಬೆಳಗಾವಿ, ಹೀಗೆ ಮೂರು ವಿಧದ ಸ್ಪರ್ತದೆಗಳನ್ನು ಏರ್ಪಡಿಸಲಾಗುತ್ತಿದ್ದು, ಬೆಳಗಾವಿಯ ಕಲಾರಸಿಕರು ಈ ಸ್ಪರ್ಧೆಯಲ್ಲಿ ಭಾಗಿಯಾಗಿ ತಮ್ಮ ಕಲಾ ಸಾಮಾರ್ಥ್ಯ ತೋರಿಸಬೇಕು ಎಂಬ ಮನವಿ ಮಾಡಿದರು..
ಈ ಮೂರು ವಿಭಾಗದ ಸ್ಪರ್ಧೆ, ಬೆಳಗಾವಿ ಮಹಾಂತೇಶ್ ನಗರದ ಲವ್ ಡೇಲ್ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆಯಲಿದ್ದು, ಯಾವುದೇ ಪ್ರವೇಶ ಪೀ ಹಾಗೂ ವಯಸ್ಸಿನ ಮೀತಿ ಇರುವದಿಲ್ಲ, ಆಡಿಷನ್ ಅಲ್ಲಿ ಆಯ್ಕೆ ಆದವರಿಗೆ ಡಿಸೆಂಬರ್ 9 ಹಾಗೂ 10ನೆಯ ತಾರಿಕಿನಂದು, ಬೆಳಗಾವಿಯ ಕುಮಾರ ಗಂಧರ್ವ ಮಂದಿರದಲ್ಲಿ ಗ್ರಾಂಡ್ ಫಿನಾಲೆ ನಡೆಸಲಾಗುವುದೆಂದು ಮಾಹಿತಿ ನೀಡಿದ್ದಾರೆ..

ಈ ಸುದ್ದಿಗೋಷ್ಠಿಯಲ್ಲಿ ಆಯುಷ್ ಚಾನೆಲ್ಲಿನ ಬಿಸಿನೆಸ್ ಹೆಡ್ ಆದಂತ, ನಾಗೇಶ್ ದೇಸಾಯಿ, ಅಶೋಕ್ ಭಜಂತ್ರಿ, ರಮೇಶ, ಸುಬ್ರಮಣ್ಯ ಮತ್ತಿತರರು ಭಾಗಿಯಾಗಿದ್ದರು..
ವರದಿ ಪ್ರಕಾಶ ಕುರಗುಂದ..