ಆರ್ಸಿಯು ಕುಲಪತಿ ಪ್ರೊ ತ್ಯಾಗರಾಜ ವಿರುದ್ಧ ನಕಲಿ ಅಂಕಪಟ್ಟಿ ಆರೋಪ..
ಸುಳ್ಳು ಮಾಹಿತಿ ನೀಡಿ, ಉನ್ನತ ಹುದ್ದೆ ಗಿಟ್ಟಿಸಿದ ಕುಲಪತಿ..
ಶ್ರೀನಾಥ ಪೂಜಾರಿ, ರಾಜ್ಯಾಧ್ಯಕ್ಷ ದಲಿತ ವಿದ್ಯಾರ್ಥಿ ಪರಿಷತ..
ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ್ ನಕಲಿ ಅಂಕಪಟ್ಟಿ ಹಚ್ಚಿ, ನಕಲಿ ಸೇವಾ ದಾಖಲೆ ನೀಡಿ ವೃತ್ತಿ ಪಡೆದು, ನೇಮಕಾತಿಗೆ ಅನರ್ಹರಾಗಿರುವರನ್ನು ಸರಕಾರ ಕುಲಪತಿಯನ್ನಾಗಿ ನೇಮಕ ಮಾಡಿದ್ದು ರಾಜ್ಯದಲ್ಲಿ ಇದೇ ಮೊದಲು ಎಂದು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಆರೋಪಿಸಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರೊ.ಸಿ.ಎಂ. ತ್ಯಾಗರಾಜ ಅವರು ಕಳೆದ 2011ರಲ್ಲಿ ನೇಮಕಾತಿ ಆದೇಶದ ಪ್ರಕಾರ ಎಂಬಿಎ ವಿಭಾಗದ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು. ಇಲ್ಲಿ ನೇಮಕವಾಗಲು ನಕಲಿ ಎಂಬಿಎ ದಾಖಲಾತಿ ನೀಡಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ತ್ಯಾಗರಾಜ್ ಅವರು ಎಂಬಿಎ ಪಡೆದ 2005ರಲ್ಲಿ ಆ ಕಾಲೇಜು ಅಸ್ತಿತ್ವದಲ್ಲಿ ಇರಲಿಲ್ಲ. ವಿಶ್ವವಿದ್ಯಾಲಯದ ಧನ ಸಹಾಯ ಆಯೋಗದ ಪ್ರಕಾರ ಡಾ. ಸಿ.ವಿ.ರಾಮನ್ ವಿಜ್ಞಾನ ತಂತ್ರಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆ ವಿಶ್ವವಿದ್ಯಾಲಯ ರಾಯಪುರ್ ಯುಜಿಸಿ ಕಾಯ್ದೆ 1956ರ ಪ್ರಕಾರ ಯುಜಿಸಿ ಸ್ಥಾಪಿಸಿದ ವಿಶ್ವವಿದ್ಯಾಲಯದ ಪಟ್ಟಿಯಲ್ಲಿಯೂ ಇಲ್ಲ ಎಂದಿದ್ದಾರೆ.
ನಾವು ಪ್ರೊ. ತ್ಯಾಗರಾಜ್ ವಿರುದ್ಧ ಕಾನೂನು ಹೋರಾಟ ನಡೆಸಿದ್ದೇವೆ. ಇಂಥ ನಕಲಿ ವಿಸಿಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದರು.
ಬಾಲಾಜಿ ಕಾಂಬಳೆ, ಶಿವಂ ಕಾಂಬಳೆ, ಆದರ್ಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.