ಆರ್ ಎಲ್ ಲಾ ಮಹಾವಿದ್ಯಾಲಯ ಕಾನೂನು ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದೆ..!!?

ಆರ್ ಎಲ್ ಲಾ ಮಹಾವಿದ್ಯಾಲಯ ಕಾನೂನು ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದೆ..

ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಹೇಳಿಕೆ..

ಬೆಳಗಾವಿ : ಶನಿವಾರ ನಗರದ ಗೋಗಟೆ ವಾಣಿಜ್ಯ ಮಹಾ ವಿದ್ಯಾಲಯದ ಆವರಣದಲ್ಲಿ ಇರುವ ರಾಜಾ ಲಖಮನಗೌಡ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಪ್ರಸನ್ನ ಬಿ ವರಾಳೆ ಅವರು ಆರ್ ಎಲ್ ಲಾ ಕಾಲೇಜಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ..

ಆರ್ ಎಲ್ ಲಾ ಕಾಲೇಜಿನಲ್ಲಿ ಹಿಂದೆ ಕಲಿತು ಹೋದ ಹಳೆಯ ವಿಧ್ಯಾರ್ಥಿಗಳು ಇಂದು ಹಲವಾರು ಕ್ಷೇತ್ರಗಳಲ್ಲಿ ಹಾಗೂ ಕಾನೂನು ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದು, ಪ್ರತಿ ರಂಗದಲ್ಲಿಯೂ ತಮ್ಮ ಸಾಧನೆಯ ಮೂಲಕ ಈ ಕಾನೂನು ಮಹಾವಿದ್ಯಾಲಯಕ್ಕೆ ಹೆಸರು ತಂದಿದ್ದಾರೆ ಎಂದರು.

ಅದೇ ರೀತಿ ಇಲ್ಲಿಯೇ ಅಧ್ಯಯನ ಮಾಡಿ, ಈ ಮಣ್ಣಿನ ವಾಡನಾಟ ಹೊಂದಿ, ಇಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ, ನಮ್ಮ ಜೊತೆ ಸ್ನೇಹಿತ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಐದು ಜನ ಸಾಧಕ ಮಹನೀಯರಿಗೆ ಅಭಿನಂದನೆ ಮಾಡುತ್ತಿರುವದು, ಅದರಲ್ಲಿ ನಾನು ಭಾಗಿಯಾಗಿದ್ದು ತುಂಬಾ ಸಂತಸಕರ ಎಂಬ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು..

ಇನ್ನು ಮಾತನಾಡುತ್ತಾ ಅವರು ತಾವು ಕಲಿತು ಬಂದ, ನಡೆದು ಬಂದ, ಅನುಭವಿಸಿದ ಅನುಭವಗಳನ್ನು ತಮ್ಮ ಮಾತೃಭಾಷೆ ಮರಾಠಿಯಲ್ಲಿ ಹೇಳುತ್ತಾ ಹೋದ ಅವರು, ಒಬ್ಬ ಹಿಂದುಳಿದ, ಶೋಷಿತ, ದಲಿತ, ಸಮಾಜದ ಕಟ್ಟಕಡೆಯ ಸ್ಥಾನದಲ್ಲಿ ಇರುವ ವ್ಯಕ್ತಿ ಇಂದು ಸಮಾನತೆಯ ಆಧಾರದಲ್ಲಿ ಸಾಧನೆ ಮಾಡಲು ಅನುವು ಮಾಡಿಕೊಟ್ಟ, ನಮ್ಮೆಲ್ಲರ ತಂದೆ ಬಾಬಾಸಾಹೇಬ ಅಂಬೇಡ್ಕರ ಅವರನ್ನು ನಾವು ಎಂದೂ ಮರೆಯಬಾರದು ಎಂದಾಗ ಇಡೀ ಸಭಾಂಗಣವೇ ಮುಖವಿಸ್ಮಿತರಾಗಿ ಚಪ್ಪಾಳೆಯ ಸುರಿಮಳೆಗೈದರು..

ಅಂಬೇಡ್ಕರ ಅವರ ಪ್ರಯತ್ನ ಹಾಗೂ ಕೊಡುಗೆಯಿಂದಲೇ ಇಂದು ಏಷ್ಟೋ ದುರ್ಬಲ ಸಮುದಾಯದ ಜನರು ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ, ಇಂದು ನಾವಿಲ್ಲಿ ಏನೇ ಸಾಧನೆ ಮಾಡಿದರು, ಅದಕ್ಕೆ ಹಿಂದೆ ಅಂತಹ ಸಾಧಕರು ದುಡಿದ ಪರಿಶ್ರಮವೇ ಕಾರಣ ಎಂದರು..

ಇನ್ನು ಕಾನೂನು ವಿಧ್ಯಾರ್ಥಿಗಳು ಹೇಗೆ ಅಧ್ಯಯನ ಮಾಡಬೇಕು, ತಮ್ಮ ಗುರಿ ಉದ್ದೇಶ ಏನಿರಬೇಕು, ಅವುಗಳ ಸಾಕಾರಕ್ಕಾಗಿ ಹೇಗೆ ಶ್ರಮಿಸಬೇಕು ಎಂಬ ಕಿವಿಮಾತು ಹೇಳಿದರು..

ಕಾಲೇಜ್ ಹಾಗೂ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ತಮ್ಮ ಭಾಷಣದ ಉದ್ದಕ್ಕೂ ಅತೀ ಆತ್ಮೀಯವಾಗಿ, ಆದರಾತೆಯಿಂದ ತಮ್ಮ ವೃತ್ತಿ, ಮತ್ತು ಸಮಾಜವನ್ನು ವರ್ನಿಸಿದ್ದು ಎಲ್ಲರೂ ಮೆಚ್ಚುವಂತ್ತಿತ್ತು..

ವರದಿ ಪ್ರಕಾಶ ಕುರಗುಂದ..