ಆಶಾಕಿರಣ ಕಾರ್ಮಿಕರ ಮತ್ತು ಮಹಿಳಾ ಕಲ್ಯಾಣ ಸಂಘದ ಉದ್ಘಾಟನೆ..

ಆಶಾಕಿರಣ ಕಾರ್ಮಿಕರ ಮತ್ತು ಮಹಿಳಾ ಕಲ್ಯಾಣ ಸಂಘದ ಉದ್ಘಾಟನೆ..

ಆಶಾಕಿರಣ ಸಂಘ ನೂರಕ್ಕೆ ನೂರರಷ್ಟು ಯಶಸ್ವಿ ಆಗುತ್ತದೆ..

ನ್ಯಾಯವಾದಿ ಎಸ್ ಎಸ್ ಕಿವಡಸನ್ನವರ ವಿಶ್ವಾಸ.

ಬೆಳಗಾವಿ : ಪ್ರಶಕ್ತ ಸಮಾಜದಲ್ಲಿ ಮಹಿಳೆಯರಿಗೆ ಮತ್ತು ಕಾರ್ಮಿಕರಿಗೆ ಮಾರ್ಗದರ್ಶನ ಮಾಡುವ, ಸರ್ಕಾರಿ ಸೌಲಭ್ಯಗಳ ಬಗ್ಗೆ ತಿಳಿಹೇಳುವ ವ್ಯಕ್ತಿಗಳ ಸಂಘ ಸಂಸ್ಥೆಗಳ ಅವಶ್ಯಕತೆ ತುಂಬಾ ಇದ್ದು, ಇಂದು ಉದ್ಘಾಟನೆ ಗೊಂಡಿರುವ “ಆಶಾಕಿರಣ ಕಾರ್ಮಿಕರ ಮತ್ತು ಮಹಿಳಾ ಕಲ್ಯಾಣ ಸಂಘವು” ನೂರಕ್ಕೆ ನೂರರಷ್ಟು ತನ್ನ ಗುರಿ ತಲುಪುವದರಲ್ಲಿ ಯಶಸ್ವಿ ಆಗುತ್ತದೆ ಎಂದು ಬೆಳಗಾವಿ ವಕೀಲರ ಸಂಘದ ಅಧ್ಯಕ್ಷರಾದ ಎಸ್ ಎಸ್ ಕಿವಿಡಸಣ್ಣವರ ಹೇಳಿದ್ದಾರೆ.

ರವಿವಾರ ದಿನಾಂಕ 01/06/2025 ರಂದು ನಗರದ ಯಲ್ಲೂರ ಮಾರ್ಗದಲ್ಲಿ ಬೆಳಗಾವಿಯ ಹೆಮ್ಮೆಯ ರಾಜಕಾರಣಿಗಳಾದ ಸಚಿವ ಸತೀಶ ಜಾರಕಿಹೊಳಿ ಅವರ ಜನ್ಮ ದಿನದ ಅಂಗವಾಗಿ “ಆಶಾಕಿರಣ ಕಾರ್ಮಿಕರ ಹಾಗೂ ಮಹಿಳಾ ಕಲ್ಯಾಣ ಸಂಘವನ್ನು” ಉದ್ಘಾಟನೆ ಮಾಡಿ ಮಾತನಾಡಿದ ಅವರು ಪ್ರಗತಿಪರ ಸಮಾಜಕ್ಕೆ ಆಶಾಕಿರಣದಂತಹ ಸಂಘಗಳ ಅವಶ್ಯಕತೆ ತುಂಬಾ ಇದ್ದು, ಇವುಗಳಿಂದ ಕಾರ್ಮಿಕರ ಹಾಗೂ ಮಹಿಳೆಯರ ಅನೇಕ ಸಮಸ್ಯೆಗಳು ನಿವಾರಣೆಯಾಗುವವು ಎಂದಿದ್ದಾರೆ.

ಕಾರ್ಮಿಕರ ಹಾಗೂ ಮಹಿಳೆಯರ ಹಕ್ಕುಗಳು ಹಾಗೂ ಅವರಿಗಿರುವ ಸರ್ಕಾರಿ ಸೌಲಭ್ಯಗಳು ಅವರಿಗೆ ತಿಳಿದಿರಬೇಕು, ಪಾಪ ಬಹುತೇಕ ಜನರಿಗೆ ಏನೂ ಗೊತ್ತಿರುವುದಿಲ್ಲ, ಆಗ ಅವರೆಲ್ಲ ಅವಕಾಶಗಳಿಂದ ವಂಚಿತರಾಗಿ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ, ಆ ಸಮಸ್ಯೆ ಆಗಬಾರದೆಂದು ಇಂದು ಭಾರತಿ ಡವಳಿ ಅವರು ಒಂದು ಸದುದ್ದೇಶ ಹೊಂದಿರುವ ಸಂಘಟನೆಯನ್ನು ಪ್ರಾರಂಭ ಮಾಡಿದ್ದಾರೆ, ಈ ಸಂಘವನ್ನು ಉದ್ಘಾಟನೆ ಮಾಡುವ ಮೂಲಕ ಈ ಸಂಘವು ತನ್ನ ಗುರಿ ಉದ್ದೇಶಗಳಲ್ಲಿ ನೂರಕ್ಕೆ ನೂರರಷ್ಟು ಯಶಸ್ವಿಯಾಗಲಿ, ಮತ್ತೆ ಆಗುತ್ತದೆ ಎಂದು ಶುಭ ಹಾರೈಸಿದ್ದಾರೆ..

ಇನ್ನು ಸಂಘಟನೆಯ ಅಧ್ಯಕ್ಷರಾದ ಭಾರತಿ ಡವಳಿ ಅವರು ಮಾತನಾಡಿ, ಮಹಿಳಾ ಮತ್ತು ಕಾರ್ಮಿಕರ ಕಲ್ಯಾಣ ಸಂಘಟನೆ ಮಾಡುವದು ನನ್ನ ಬಹುದಿನಗಳ ಕನಸಾಗಿತ್ತು, ಇಂದು ನನ್ನ ಜನ್ಮ ದಿನದಂದೇ ಅದು ಈಡೇರಿದ್ದು ಸಂತಸ ತಂದಿದೆ, ಈ ನಮ್ಮ ಸಂಘಟನೆ ಕಾರ್ಮಿಕರು ಹಾಗೂ ಮಹಿಳೆಯರಿಗಾಗಿ ಸದಾ ಸೇವೆಯಲ್ಲಿ ಇರುತ್ತದೆ, ನಾನು ಜನರಿಗಾಗಿ ದುಡಿಯಲು ಸದಾಕಾಲ ಸಿದ್ದಳಿದ್ದೇನೆ, ಅದರಂತೆಯೆ ಜನರ ಭರವಸೆಯನ್ನು ಕೂಡಾ ನಿರೀಕ್ಷೆ ಮಾಡುವೆ ಎಂದಿದ್ದಾರೆ.

ಕಾರ್ಮಿಕರು ಹಾಗೂ ಮಹಿಳಾ ಸಮುದಾಯದವರು ಶಿಕ್ಷಣ, ಆರೋಗ್ಯ, ಉದ್ಯೋಗ, ಕೌಟುಂಬಿಕ, ಸಾಮಾಜಿಕ ಹಾಗೂ ವೈಯಕ್ತಿಕ ಏನೇ ತೊಂದರೆ ಹಾಗೂ ಸಮಸ್ಯೆಗಳಿದ್ದರೂ, ಯಾವಾಗಲಾದರೂ ನಮ್ಮನ್ನು ಸಂಪರ್ಕಿಸಬಹುದು, ನಾವು ಸಮಾಜ ಸೇವೆಗೆಂದಲೇ ಇರುವದು, ಜನರ ಸಮಸ್ಯೆಗೆ ಸ್ಪಂದನೆ ನೀಡಲು ನಮ್ಮ ಸಂಘಟನೆ ಕಚೇರಿ ಯಾವಾಗಲೂ ಸಿದ್ದವಿರುತ್ತದೆ ಎಂದಿದ್ದಾರೆ.

ಬೆಳಗಾವಿ ನಗರ ಹಾಗೂ ಜಿಲ್ಲೆಯ ಜನರು ತಮ್ಮ ಏನೇ ಕೆಲಸ ಕಾರ್ಯಗಳಿಗೆ ಹಾಗೂ ಸಮಸ್ಯೆಗಳಿಗೆ ಸಂಪರ್ಕಿಸಬೇಕಾದ ತಮ್ಮ ಕಚೇರಿಯ ವಿಳಾಸವನ್ನು ಕೂಡಾ ಸಂಘದ ಅಧ್ಯಕ್ಷರು ನೀಡಿದ್ದು,

“ಆಶಾಕಿರಣ ಕಾರ್ಮಿಕರ ಹಾಗೂ ಮಹಿಳಾ ಕಲ್ಯಾಣ ಸಂಘಟನೆ”, ಮಂಗಾಯಿ ಹೋಟೆಲ್ ಬಿಲ್ಡಿಂಗ್ ಎರಡನೇ ಮಹಡಿ, ಯಳ್ಳೂರ ಮಾರ್ಗ, ವಡಗಾಂವಿ, ಬೆಳಗಾವಿ. (ಸಂಪರ್ಕ ಸಂಖ್ಯೆ 6366800281, ಅಧ್ಯಕ್ಷರು, ಆಶಾಕಿರಣ ಕಾರ್ಮಿಕರ ಹಾಗೂ ಮಹಿಳಾ ಕಲ್ಯಾಣ ಸಂಘ ಬೆಳಗಾವಿ.)

ವರದಿ ಪ್ರಕಾಶ್ ಬಸಪ್ಪ ಕುರಗುಂದ.