ಆಸ್ತಿ ವಿವಾದದ ಹಿನ್ನೆಲೆ, ಚಿಕ್ಕಪ್ಪನಿಗೆ ಚಾಕು ಇರಿತ..
ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರು..
ಬೆಳಗಾವಿ : ಬುಧವಾರ ರಾತ್ರಿ ಸುಮಾರು 10-30 ಕ್ಕೆ ಬೆಳಗಾವಿಯ ರೇಲ್ವೆ ಸ್ಟೇಷನ್ ರಸ್ತೆಯ ಪಾಟೀಲ್ ಮಾಳಾದಲ್ಲಿ ಒಂದು ಪ್ರತಿಷ್ಠಿತ ಕುಟುಂಬದಲ್ಲಿ ಆಸ್ತಿ ವಿವಾದದ ಕಹಿ ಘಟನೆ ನಡೆದಿದ್ದು, ಇದರಲ್ಲಿ ಅನಿಲ ಶರದ ಧಾಮಣೆಕರ (46) ಮೃತ ದುರ್ದೈವಿ ಆಗಿದ್ದರೆ.
ಆದಿತ್ಯ ದೀಪಕ್ ಧಾಮಣೆಕರ ಎಂಬಾತ ತನ್ನ ಚಿಕ್ಕಪ್ಪ ಅನಿಲ್ ಧಾಮಣೆಕರನೊಂದಿಗೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಾಗ್ವಾದ ಮಾಡಿ, ಮಾರಾಮಾರಿ ನಡೆದ ಸಿಟ್ಟಿನ ಆವೇಗದಲ್ಲಿ ದುಡುಕಿ ತನ್ನ ಚಿಕ್ಕಪ್ಪನಿಗೆ ಚಾಕು ಇರಿದಿದ್ದಾನೆ.
ಘಟನೆಯಲ್ಲಿ ತೀವ್ರ ಗಾಯಗೊಂಡ ಚಿಕ್ಕಪ್ಪನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿಸಿದ್ದು, ಕಳೆದ ಮಧ್ಯರಾತ್ರಿ ಸುಮಾರು ಹನ್ನೆರಡು ಘಂಟೆಗೆ ಹಲ್ಲೆಗೊಳಗಾದ ಅನಿಲ್ ಧಾಮಣೆಕರ ಕೊನೆಯುಸಿರೆಳೆದಿದ್ದಾರೆ, ಘಟನಾ ಸ್ಥಳಕ್ಕೆ ಡಿಸಿಪಿ ರೋಹನ ಜಗದೀಶ್ ಮತ್ತು ಖಡೇ ಬಜಾರ್ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.