ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯ ಶ್ಲಾಘನೀಯ…

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯ ಶ್ಲಾಘನೀಯ…

ಬೆಳಗಾವಿ : ರಾಜ್ಯದಲ್ಲಿ ಹೊಸದಾಗಿ ಅಸ್ಥಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಜನರಿಗಾಗಿ ಹಲವಾರು ಹೊಸ ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಸಾರ್ವಜನಿಕರು ಬಹುತೇಕ ಯೋಜನೆಗಳನ್ನು ಪಡೆಯಲು ಪಡಿತರ ಚೀಟಿಯು ಮಾನದಂಡವಾಗಿರುವದರಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕೆಲಸದ ಜವಾಬ್ದಾರಿ ದುಪ್ಪಟ್ಟಾಗಿತ್ತು..

ರಾಜ್ಯ ಸರ್ಕಾರಕ್ಕೆ ಅಕ್ಕಿಯ ಕೊರತೆ ಇದ್ದ ಕಾರಣ, ಅಕ್ಕಿಯ ಬದಲಾಗಿ ಹಣವನ್ನು ನೀಡುವ ಕಾರ್ಯಕ್ರಮ ಒಂದು ದೊಡ್ಡ ಸವಾಲಾಗಿ ಎದುರಾಗಿತ್ತು, ಆದರೆ ಇಲಾಖೆಯು ಅದನ್ನು ವ್ಯವಸ್ಥಿತವಾಗಿ ನಿಭಾಯಿಸಿ, ಗ್ರಾಹಕರ ಸಮಸ್ಯ ಏನೇ ಇದ್ದರೂ ಅದನ್ನು ಪರಿನಿತರಿಂದ ಸರಿಪಡಿಸಿ, ಪ್ರತಿ ಗ್ರಾಹಕರಿಗೂ ಅಕ್ಕಿಯ ಬದಲಾಗಿ ಹಣ ಸಂದಾಯವಾಗುವಂತೆ ಮಹತ್ವದ ಕಾರ್ಯ ಮಾಡಿದ್ದು ಇದೇ ಸಿಬ್ಬಂದಿ ವರ್ಗ..

ಈಗ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾಗಿದ್ದು, ಅದಕ್ಕೆ ಪಡಿತರ ಚೀಟಿಯೇ ಮುಖ್ಯ ಮಾನದಂಡವಾಗಿದ್ದು, ಗ್ರಾಹಕರು ತಮ್ಮ ಎಪಿಎಲ್ ಕಾರ್ಡುಗಳನ್ನು ಬಳಕೆ ಮಾಡದೇ ಇದ್ದುದರಿಂದ, ಎಷ್ಟೋ ಗ್ರಾಹಕರ (apl) ಪಡಿತರ ಚೀಟಿಗಳು ನಿಷ್ಕ್ರಿಯ ಆಗಿದ್ದವು, ಈಗ ಗೃಹಲಕ್ಷ್ಮಿ ಯೋಜನೆಗೆ ಅವು ಅತ್ಯವಶ್ಯಕ ಆಗಿರುವ ಹಿನ್ನೆಲೆಯಲ್ಲಿ ಎಲ್ಲಾ ಜನರು ಬಂದು, ಅಂತಹ ಪಡಿತರ ಚೀಟಿಗಳನ್ನು ಕ್ರಿಯಾಶೀಲ ಮಾಡಿಕೊಳ್ಳಲು ಇಲಾಖೆಯ ಕಚೇರಿಗೆ ಮುಗಿ ಬಿದ್ದಿದ್ದಾರೆ..

ಒಮ್ಮೆಲೆ ದೊಡ್ಡ ಮಟ್ಟದಲ್ಲಿ ಬರುತ್ತಿರುವ ಜನರನ್ನು ಅತೀ ಜವಾಬ್ದಾರಿಯಿಂದ ನಿಭಾಯಿಸುತ್ತಿರುವ ಇಲಾಖೆಯ ಸಿಬ್ಬಂದಿಗಳು, ನಾಲ್ಕು ಕಡೆಗಳಲ್ಲಿ ಜನರ ಪಡಿತರ ಚೀಟಿಗಳನ್ನು ಕ್ರಿಯಾಶೀಲ ಮಾಡುವ ಕಾರ್ಯ ಮಾಡುತ್ತಾ, ಮತ್ತೆ ಬೇರೆ ಸಮಸ್ಯ ಇದ್ದರೂ ಕೂಡ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ..

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ, ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ ಕಂಕನವಾಡಿ ಅವರೂ ಕೂಡ ಪ್ರತಿ ತಾಲೂಕಿನ ಸಮಸ್ಯೆಗಳನ್ನು ಪರಿಶೀಲಿಸುತ್ತಾ, ನಗರದಲ್ಲಿಯೂ ಕೂಡಾ ಉತ್ತಮ ರೀತಿಯಲ್ಲಿ ಕಾರ್ಯ ನಡೆಯುವಂತೆ ತಮ್ಮ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ..

ಒಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸಹಕಾರದಿಂದ ಕಾರ್ಯ ಮಾಡಿದ್ದಲ್ಲಿ, ಸರ್ಕಾರದ ಯೋಜನೆಗಳು ಜನರಿಗೆ ಸರಾಗವಾಗಿ ತಲುಪುತ್ತವೆ ಎಂಬುದಕ್ಕೆ ಇವು ನಿದರ್ಶನವಷ್ಟೆ…

ವರದಿ ಪ್ರಕಾಶ ಕುರಗುಂದ…