ಇನಾಮದಾರ ಎಂಬ ಕನ್ನಡ ಚಿತ್ರದಲ್ಲಿ ಉತ್ತಮ ಸಾಮಾಜಿಕ ಸಂದೇಶವಿದೆ…

ಇನಾಮದಾರ ಎಂಬ ಕನ್ನಡ ಚಿತ್ರದಲ್ಲಿ ಉತ್ತಮ ಸಾಮಾಜಿಕ ಸಂದೇಶವಿದೆ..

ಚಿತ್ರತಂಡದ ಪರಿಶ್ರಮಕ್ಕೆ ಫಲ ದೊರೆಯಲಿ, ಯಶಸ್ವಿ ಆಗಲಿ..

ಕನ್ನಡ ಚಿತ್ರ ಪ್ರೇಕ್ಷಕರು ಬಂದು, ಚಿತ್ರ ನೋಡಿ ಹರಸಲಿ…

ಪ್ರಮೋದ್ ಮುತಾಲಿಕ ಆಶಯ..

ಬೆಳಗಾವಿ : ಗುರುವಾರ ನಗರದ ಪ್ರಕಾಶ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಇನಾಮದಾರ ಎಂಬ ಕನ್ನಡ ಚಿತ್ರವನ್ನು ವೀಕ್ಷಣೆ ಮಾಡಿದ ನಂತರ, ವಿಶ್ವ ಹಿಂದೂ ಪರಿಷತ್ ಸಂಘಟನೆಯ ಮುಖಂಡರಾದ ಪ್ರಮೋದ ಮುತಾಲಿಕ ಅವರು ಚಿತ್ರದ ಕುರಿತು ಮಾತನಾಡಿದ್ದಾರೆ..

ಬೆಳಗಾವಿಯ ಹುಕ್ಕೇರಿಯ ರಂಜನ ಎಂಬ ನವನಟ ನಾಯಕನಾಗಿ ನಟಿಸಿದ “ಇನಾಮದಾರ” ಎಂಬ ಕನ್ನಡ ಚಿತ್ರವನ್ನು ತಮ್ಮ ತಂಡದೊಂದಿಗೆ ವೀಕ್ಷಣೆ ಮಾಡಿದ ಮುತಾಲಿಕ್ ಅವರು, ಈ ಚಿತ್ರದ ಹೀರೋ ನಮ್ಮ ಊರಿನ ಹುಡುಗ, ನಮ್ಮ ಜೊತೆಯಲ್ಲಿಯೇ ಇದ್ದು ಕೆಲಸ ಮಾಡಿದವ, ಆತ ಇವತ್ತು ಒಂದು ಚಿತ್ರದ ನಾಯಕನಾಗಿ, ಉತ್ತಮ ಸಾಮಾಜಿಕ ಕಳಕಳಿ ಇರುವ ಹಾಗೂ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಸಂಸ್ಕೃತಿಯ ಮಿಶ್ರಣದ ಸಂಭಾಷಣೆ, ಹಾಗೂ ಕಥಾಹಂದರದ ಚಿತ್ರವನ್ನು ಮಾಡಿದ್ದು ಎಲ್ಲರೂ ಮೆಚ್ಚುವಂತಿದೆ ಎಂದರು..

ನಾಡಿನ ಜನರ ಕಥೆ ಒಂದು ರೀತಿ ಇದ್ದರೆ, ಅರಣ್ಯ ಜನರ ಆಚರಣೆ, ನಂಬಿಕೆ, ಸಂಪ್ರದಾಯ, ಪದ್ಧತಿಗಳು, ಅಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆ, ಅದರಿಂದ ಆ ಮುಗ್ಧ ಜನರನ್ನು ಕಾಪಾಡುವ ಸನ್ನಿವೇಶ ಇವೆಲ್ಲಾ ಹೊಸ ಲೋಕವನ್ನೇ ಸೃಷ್ಟಿಸಿ, ನಿಜಕ್ಕೂ ಪ್ರೇಕ್ಷಕರಿಗೆ ಇಷ್ಟ ಆಗುತ್ತವೆ ಎಂದರು..

ನಮ್ಮ ನಾಡಿನ, ಜಿಲ್ಲೆಯ ಯುವ ಕಲಾವಿದರು ಪ್ರಯತ್ನ ಮಾಡಿ ಉತ್ತಮ ಚಿತ್ರ ಮಾಡಿದ್ದು, ಎಲ್ಲಾ ಕನ್ನಡಿಗರೂ ಥಿಯೇಟರಗೆ ಬಂದು ಚಿತ್ರ ನೋಡಿ, ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಬೇಕು ಎಂದು ತಮ್ಮ ಆಶಯ ವ್ಯಕ್ತ ಪಡಿಸಿದರು..

ಇನ್ನು ಚಿತ್ರದ ನಾಯಕ ನಟ ರಂಜನ್ ಅವರು ಮಾತನಾಡಿ, ಇಂದು ನಮ್ಮ ಗುರುಗಳು ಬಂದು, ಚಿತ್ರ ವೀಕ್ಷಣೆ ಮಾಡಿ, ಒಳ್ಳೆಯದಾಗಲಿ ಎಂದು, ನಮಗೆಲ್ಲ ಆಶೀರ್ವಾದ ಮಾಡಿದ್ದಾರೆ, ಇದಕ್ಕಿಂತ ಸಂತೋಷ್ ನಮಗೆ ಬೇರೆ ಇಲ್ಲಾ, ನಾನು ಅವರ ಶಿಷ್ಯನಾಗಿ, ಅವರ ಜೊತೆಗೆ ಸಂಘಟನೆಯಲ್ಲಿ ಇದ್ದೆ, ಇಂದು ಅವರು ಬಂದು ಚಿತ್ರಕ್ಕೆ ಆಶೀರ್ವಾದ ನೀಡಿದ್ದು ಸಂತಸವಾಗಿದೆ ಎಂದರು..

ಚಿತ್ರ ಚೆನ್ನಾಗಿ ಮೂಡಿ ಬಂದಿದೆ, ಚಿತ್ರ ನೋಡಿದ ಪ್ರೇಕ್ಷಕರಿಗೆ ಯಾವ ನಿರಾಶೆಯೂ ಆಗುವದಿಲ್ಲ, ದಯವಿಟ್ಟು ಎಲ್ಲರೂ ಬಂದು ಚಿತ್ರ ನೋಡಿ ಎಂದು ಮನವಿ ಮಾಡಿದರು..

ವರದಿ ಪ್ರಕಾಶ ಕುರಗುಂದ..