ಉಚಿತ ಗ್ಯಾರೆಂಟಿ ಕೈಬಿಡಿ, ಅವಶ್ಯ ಇರುವವರಿಗೆ ಸೌಲಭ್ಯ ನೀಡಿ..

ಉಚಿತ ಗ್ಯಾರೆಂಟಿ ಕೈಬಿಡಿ, ಅವಶ್ಯ ಇರುವವರಿಗೆ ಸೌಲಭ್ಯ ನೀಡಿ..

ಸ್ವಾಭಿಮಾನ ಸಮಾಜ ಕಟ್ಟುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನವಿರಲಿ..

ಬಾಳಾಸಾಹೇಬ ಉದಗಟ್ಟಿ, ಸಮಾಜ ಸೇವಕರು ಬೆಳಗಾವಿ..

ಬೆಳಗಾವಿ : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಉಚಿತ ಗ್ಯಾರೆಂಟಿ ಯೋಜನೆಗಳನ್ನು ಅವಶ್ಯಕ ಇದ್ದವರಿಗೆ ಮಾತ್ರ ನೀಡಿ, ಸಾಮಾನ್ಯರಿಗೆ ಅದರಿಂದ ಆಗುವ ತೊಂದರೆಯನ್ನು ತಪ್ಪಿಸಬೇಕೆಂದು ಬೆಳಗಾವಿಯ ಸಮಾಜ ಸೇವಕರಾದ ಬಾಳಾಸಾಹೇಬ ಉದಗಟ್ಟಿ ಅವರು ರಾಜ ಸರ್ಕಾರಕ್ಕೆ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ..

ಉಚಿತ ಬಸ್ ಸೌಲಭ್ಯ ಯೋಜನೆಯನ್ನು ದಯಮಾಡಿ ನಿಲ್ಲಿಸಬೇಕು, ಏಕೆಂದರೆ ಶಾಲೆಗೆ ಹೋಗುವ ಮಕ್ಕಳು ಮತ್ತು ವಯಸ್ಸಾದ 60 ವರ್ಷ ಮೇಲ್ಪಟ್ಟ ಜನರಿಗೆ ಬಸ್ಸಿನಲ್ಲಿ ಸ್ಥಳವಕಾಶ ದೊರೆಯದೇ ತೊಂದರೆ ಅನುಭವಿಸುತ್ತಿದ್ದಾರೆ.

ಶಾಲಾ ಮಕ್ಕಳಿಗೆ, ವಯೋವೃದ್ಧರಿಗೆ ಉಚಿತ ಬಸ್ ಸೌಲಭ್ಯ ನೀಡಿದರೆ ಸ್ವಾಗತ, ಬಸ ಸೌಲಭ್ಯ ಎಲ್ಲರಿಗೂ ಉಚಿತ ಎಂದಾದರೆ ಶಾಲಾ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಬಸ್ಸಿನಲ್ಲಿ ಸ್ಥಳ ಸಿಗುವುದೇ ಇಲ್ಲಾ, ಅದೇರೀತಿ ಶಿಕ್ಷಣ, ಆರೋಗ್ಯ ರೈತರ ಸೌಲಭ್ಯ ವಿಚಾರದಲ್ಲಿ ಸರ್ಕಾರ ಉದಾರತೆ ತೋರಿದರೆ ಒಳ್ಳೆಯದು ಅದರ ಬದಲಾಗಿ ಉಚಿತ ಹಣ ನೀಡುವದು, ವಿದ್ಯುತ್ ನೀಡುವದು ಮಾಡಿದರೆ ಸಮಾಜದ ಅಭಿವೃದ್ಧಿ ಆಗದೇ ಅದರಲ್ಲಿಯೂ ಭ್ರಷ್ಟಚಾರ ನಡೆಯುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.

ಆದಷ್ಟು ಬೇಗ ಸರ್ಕಾರ ಎಚ್ಛೆತ್ತುಕೊಂಡು ರಾಜ್ಯದ ಜನರಿಗೆ ಅನುಕೂಲ ಆಗುವ ಯೋಜನೆಗಳನ್ನು ತಂದು, ಜನರು ದುಡಿದು, ಸ್ವಾಭಿಮಾನಿಗಳಾಗಿ ಬದುಕುವ ವಾತಾವರಣವನ್ನು ನಿರ್ಮಿಸಬೇಕು ಎಂದು ಬೆಳಗಾವಿ ನಗರದ ಸಮಾಜ ಸೇವಕರಾದ ಬಾಳಾಸಾಹೇಬ ಕ. ಉದಗಟ್ಟಿ ಮತ್ತು ಅಭಿಮಾನಿ ಬಳಗದಿಂದ ಕರ್ನಾಟಕ ಸರ್ಕಾರಕ್ಕೆ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..