ಉತ್ತರ ಕರ್ನಾಟಕದ ಅಭಿವೃದ್ದಿಯ ಬಗ್ಗೆ ಚರ್ಚೆ ಆಗುವ ನಿರೀಕ್ಷೆ ಇದೆ…

ಉತ್ತರ ಕರ್ನಾಟಕದ ಅಭಿವೃದ್ದಿಯ ಬಗ್ಗೆ ಚರ್ಚೆ ಆಗುವ ನಿರೀಕ್ಷೆ ಇದೆ..

ಪಂಚರಾಜ್ಯಗಳ ಚುನಾವಣಾ ಪಲಿತಾಂಶ ಮುನ್ಸೂಚನೆ ಅಲ್ಲಾ, ಎಚ್ಚರಿಕೆ ಗಂಟೆ..

ವಿಪಕ್ಷ ಶಾಸಕರ ಪ್ರಶ್ನೆಗೆ, ಸರ್ಕಾರದ ಸಮರ್ಥ ಉತ್ತರಕ್ಕೆ ಸಿದ್ದ..

ಸಚಿವ ಸತೀಶ ಜಾರಕಿಹೊಳಿ..

ಬೆಳಗಾವಿ : ಚಳಿಗಾಲ ಅಧಿವೇಶನದ ಮೊದಲ ದಿನ ಸದನಕ್ಕೆ ಆಗಮಿಸಿದ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಅಧಿವೇಶನದಲ್ಲಿ ಬರಗಾಲದ ಕುರಿತಾಗಿ ಪ್ರಮುಖ ಚರ್ಚೆ ನಡೆಯಲಿದ್ದು, ವಿಪಕ್ಷದ ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದರು.

ಅನುದಾನ ಬಿಡುಗಡೆಯಲ್ಲಿ ಯಾವ ಶಾಸಕರಿಗೆ ಅಂತಹ ತೊಂದರೆ ಆಗಿಲ್ಲ, ಮುಂದೆಯೂ ಆಗುವದಿಲ್ಲ, ಬೆಳಗಾವಿಯಲ್ಲಿ ಎಂಇಎಸ್ ಪ್ರತಿಭಟನೆಗೆ ಅನುಮತಿ ನೀಡಿಲ್ಲ.

ಈ ಅಧಿವೇಶನದಲ್ಲಿ ಸಾವರ್ಕರ ಭಾವಚಿತ್ರದ ಬಗ್ಗೆ ಯಾವ ಆಕ್ಷೇಪಣೆ ಕಂಡುಬರುವುದಿಲ್ಲ,
ಉತ್ತರ ಕರ್ನಾಟಕದ ಅಭಿವೃದ್ದಿಯ ಕುರಿತಾಗಿ ಚರ್ಚೆಯಾಗುವ ಬಹಳ ನಿರೀಕ್ಷೆ ಇದೆ, ಆದರೆ ಈ ಭಾಗದ ಜನರ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು..

ವಿಪಕ್ಷ ಶಾಸಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ, ಆರೋಗ್ಯಕರವಾದ ಚರ್ಚೆಗಳು ನಡೆದು, ಬೆಳಗಾವಿ ಈ ಚಳಿಗಾಲ ಅಧಿವೇಶನ ಅರ್ಥಪೂರ್ಣವಾಗಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆ, ಆದಕಾರಣ
ಈ ಭಾಗದ ಚರ್ಚೆಗಳು ಹೆಚ್ಚಾಗುತ್ತದೆ ಎಂದರು.

ಐದು ರಾಜ್ಯಗಳ ಚುನಾವಣೆಯ ಪಲಿತಾಂಶ ಮುಂದಿನ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬಿರೋಲ್ಲ, ಬದಲಾಗಿ ನಮ್ಮ ಪಕ್ಷಕ್ಕೆ ಇದೊಂದು ಎಚ್ಚರಿಕೆ ಗಂಟೆ ಅಷ್ಟೇ ಎಂದರು..

ಬೆಳಗಾವಿ ರಾಜಕಾರಣದಲ್ಲಿ ಎಲ್ಲಾ ಸರಿ ಇದೆ, ಯಾವುದೇ ವೈಮನಸ್ಸು ಇಲ್ಲಾ, ಆಪರೇಶನ್ ಕಮಲದ ಭೀತಿ ನಮ್ಮ ಪಕ್ಷಕ್ಕೆ ಇಲ್ಲಾ, ರಾಜ್ಯ ಹಾಗೂ ದೇಶದ ಚುನಾವಣಾ ಮಾನದಂಡಗಳು ಬೇರೆ ಬೇರೆಯಾಗಿರುತ್ತವೆ, ಅದಕ್ಕಾಗಿ ಈ ಪಲಿತಾಂಶ ಲೋಕಸಭಾ ಚುನಾವಣೆಯ ಮುನ್ಸೂಚನೆ ಅಲ್ಲಾ ಎಂದರು..

ಪಂಚ ರಾಜ್ಯಗಳ ಚುನಾವಣೆಯಲ್ಲಿ ಇನ್ನೂ ಎರಡು ರಾಜ್ಯಗಳಲ್ಲಿ ಗೆಲ್ಲುವ ಅವಕಾಶ ನಮ್ಮ ಪಕ್ಷಕ್ಕೆ ಇದ್ದರೂ ಎರಡು ಕಡೆಗೆ ನಮ್ಮ ಕಾಂಗ್ರೆಸ್ ಪಕ್ಷ ಆರಿಸಿ ಬಂದಿಲ್ಲ, ಮುಂದೆ ಸುಧಾರಿಸಿಕೊಳ್ಳುತ್ತೇವೆ ಎಂದರು.

ಸ್ವಾಮಿಗಳ ಹಾರೈಕೆ ಹಾಗೂ ಅನಿಸಿಕೆಗಳು ಎಸ್ಸಿ ಎಸ್ಟಿ ಸಿಎಂ ಆಗಬೇಕು ಎಂಬ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಅದು ಅವರವರ ಅನಿಸಿಕೆ, ಆ ಸಮುದಾಯಕ್ಕೆ ನ್ಯಾಯ ಪಡೆಯುವ ನಿಟ್ಟಿನಲ್ಲಿ ಹೇಳಿರಬಹುದು, ಮುಂದೆ ನೋಡೋಣ ಎಂದರು…

ವರದಿ ಪ್ರಕಾಶ ಕುರಗುಂದ..