ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪುರಸ್ಕಾರಕ್ಕೆ ಭಾಜನವಾದ ಮರಾಠಿ ದಡಪನ್ ಚಿತ್ರ..
ಬೆಳಗಾವಿ : ರವಿವಾರ ದಿನಾಂಕ 20/08/2023 ರಂದು ನಗರದ ಖಾಸಗಿ ಸ್ಥಳದಲ್ಲಿ “ದಡಪನ್” ಎಂಬ ಮರಾಠಿ ಚಲನಚಿತ್ರದ ಯಶಸ್ವಿ ಕಾರ್ಯಕ್ರಮ ಜರುಗಿದ್ದು, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಆಗಮಿಸಿ, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದರು..
ದಡಪನ್ ಎಂಬ ಮರಾಠಿ ಚಿತ್ರವು ಇದೆ ಸೆಪ್ಟೆಂಬರ್ 05 ರಂದು ಬೆಳಗಾವಿಯ ಗ್ಲೋಬ್ ಚಿತ್ರಮಂದಿರದಲ್ಲಿ ತೆರೆ ಕಂಡು, ಉತ್ತಮ ಪ್ರದರ್ಶನ ಕಾಣುತ್ತಿದೆ,
ಎಸೆಸೆಲ್ಸಿ ಆದ ನಂತರ ವಿಧ್ಯಾರ್ಥಿಗಳ ಮೇಲೆ ಇರುವ ಒತ್ತಡಗಳು ಹಾಗೂ ಅವುಗಳಿಂದ ಆಗುವ ಪರಿಣಾಮಗಳ ಬಗ್ಗೆ ಇರುವ ಕಥೆಯನ್ನು ಅತ್ಯಂತ ಭಾವನಾತ್ಮಕವಾಗಿ ಚಿತ್ರಮಾಡಿ ಗೆದ್ದಿದ್ದಾರೆ ಎನ್ನಬಹುದು..

ಈ ಚಿತ್ರವು ಮಕ್ಕಳು, ಮಹಿಳೆಯರು ಹಾಗೂ ಹಿರಿಯರನ್ನು ಆಕರ್ಷಿಸುತ್ತಾ, ಮೂರನೆಯ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ, ಉತ್ತಮ ಕಥಾವಸ್ತು ಹೊಂದಿರುವ ಮರಾಠಿ ಚಲನಚಿತ್ರವನ್ನು ಗುರ್ತಿಸಿ ಇಂದು, ಧಾರವಾಡದ ಉತ್ತರ ಕರ್ನಾಟಕ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಬೆಳಗಾವಿಗೆ ಆಗಮಿಸಿ, ದಡಪನ್ ಚಿತ್ರಕ್ಕೆ ಪ್ರಥಮ ಅತ್ಯುತ್ತಮ ಮರಾಠಿ ಚಿತ್ರ ಎಂಬ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದ್ದಾರೆ..
ಈ ಪುರಸ್ಕಾರ ಸಮಾರಂಭದಲ್ಲಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ ಶಂಕರ ಸುಗಟೆ, ಮಂಡಳಿಯ ಕಾರ್ಯದರ್ಶಿಗಳಾದ ಮಂಜುನಾಥ ಹಗೆದಾರ್, ದಡಪನ್ ಚಿತ್ರದ ನಿರ್ಮಾಪಕ, ನಿರ್ದೇಶಕ, ಕಲಾವಿದರು, ತಂತ್ರಜ್ಞರು, ಹಾಗೂ ಚಿತ್ರಪ್ರೇಮಿಗಳು ಭಾಗಿಯಾಗಿದ್ದರು..
ವರದಿ ಪ್ರಕಾಶ ಕುರಗುಂದ..