ಉಷಾತಾಯಿ ಗೊಗಟೆ ಬಾಲಕಿಯರ ವಿದ್ಯಾಲಯದಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ..
ಸಾಧನೆ ಮಾಡಿದ ವಿದ್ಯಾರ್ಥಿನಿ ಹಾಗೂ ಶಿಕ್ಷಕಿಯರಿಗೆ ಸನ್ಮಾನ..
ಬೆಳಗಾವಿ : ಬೆಳಗಾವಿ ಎಜುಕೇಶನ್ ಸೊಸೈಟಿಯ ಶ್ರೀಮತಿ ಉಷಾತಾಯಿ ಗೊಗಟೆ ಬಾಲಕಿಯರ ವಿದ್ಯಾಲಯದಲ್ಲಿ ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಬೆಳಗಾವಿಯ ರತ್ನಾಕರ ದೊಡ್ಡಣ್ಣನವರ್ ಮತ್ತು ನಂದಾ ದೊಡ್ಡಣ್ಣನವರ್ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಸಂಸ್ಥೆಯ ಅಧ್ಯಕ್ಷ ಅವಿನಾಶ ಪೋತದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಸುಧಾಕರ ಶಾನಭಾಗ, ವಾಮನ್ ಹುಯಿಲಗೋಳ, ಸುಧಾ ಮೂರ್ತಿ (ಬೆಂಗಳೂರು), ಸತೀಶ ದೇಶಪಾಂಡೆ, ವಿ.ಆರ್.ಗುಡಿ, ಎಲ್.ಡಿ.ಮದಿಹಳ್ಳಿ ಮುಂತಾದ ಅನೇಕ ಶಿಕ್ಷಣ ಪ್ರೇಮಿಗಳು ನೀಡಿದ ಸಹಯ್ಯ ಅನುದಾನದಿಂದ ಬಹುಮಾನಗಳನ್ನು ನೀಡಲಾಯ್ತು . ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ ಶೇ.100 ಫಲಿತಾಂಶ ನೀಡಿದ ವಿಷಯ ಶಿಕ್ಷಕಿ ವರ್ಷಾ ನೈಕ್ ಅವರನ್ನು ಅವಿನಾಶ ಪೋತದಾರ ಸನ್ಮಾನಿಸಿದರು.
ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಚಿಂತಾಮಣಿ ಗ್ರಾಮೋಪಾಧ್ಯೆ, ಸಂಸ್ಥೆಯ ಸದಸ್ಯ ವಿಜೇಂದ್ರ ಗುಡಿ, ನಿವೃತ್ತ ಶಿಕ್ಷಕ ಎ.ಎಸ್.ಬಾಗೇವಾಡಿ, ಸರಸ್ವತಿ ದೇಸಾಯಿ ಉಪಸ್ಥಿತರಿದ್ದು, ಪ್ರಾಚಾರ್ಯ ಎಂ ಕೆ ಮಾದಾರ್ ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಸುಲೋಚನಾ ಐವಾಳೆ ವಂದಿಸಿದರು, ಶ್ರೀದೇವಿ ಕುಲಕರ್ಣಿ ವರದಿ ಮಂಡಿಸಿದರು, ವಿದ್ಯಾರ್ಥಿನಿ ವೈಷ್ಣವಿ ಸೂಪೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ವರದಿ ಪ್ರಕಾಶ ಬಸಪ್ಪ ಕುರಗುಂದ..