ಉಷಾತಾಯಿ ಗೊಗಟೆ ಬಾಲಕಿಯರ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ..

ಉಷಾತಾಯಿ ಗೊಗಟೆ ಬಾಲಕಿಯರ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ..

ಬೆಳಗಾವಿ : ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಬೆಳಗಾವಿ ಎಜುಕೇಶನ್ ಸೊಸೈಟಿಯ ಶ್ರೀಮತಿ ಉಷಾತಾಯಿ ಗೊಗಟೆ ಬಾಲಕಿಯರ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಹಾಗೂ ಜಿವಾಳ ಪರಿವಾರದ ಸದಸ್ಯೆ ಶ್ರೀಮತಿ ಸುಖದ ದೇಶಪಾಂಡೆ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮುಖ್ಯ ಅತಿಥಿಗಳು ನೆಹರು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿದರು. ಮಕ್ಕಳ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ನಗದು ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾದ ಚಿಂತಾಮಣಿ ಗ್ರಾಮೋಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಅತಿಥಿಗಳಾಗಿ ಶಾಲೆಯ ನಿವೃತ್ತ ಶಿಕ್ಷಕರಾದ ಎ.ಎಸ್.ಬಾಗೇವಾಡಿ , ಶ್ರೀಮತಿ ಸರಸ್ವತಿ ದೇಸಾಯಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಮಹಾಲಕ್ಷ್ಮಿ ಅಮಾಶಿ, ಪ್ರಿಯಾಂಕಾ ಹಾವಳ ಸ್ವಾಗತಿಸಿ, ಪ್ರಿಯಾ ಕೊಳಂಬಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಂ.ಕೆ.ಮಾದರ, ಹಿರಿಯ ಶಿಕ್ಷಕ ವೆಂಕಟೇಶ ಕುಲಕರ್ಣಿ, ಕಾರ್ಯಕ್ರಮ ಸಂಯೋಜಕಿ ಸುಲೋಚನಾ ಐವಾಳೆ, ಲಕ್ಷ್ಮೀ ಯಳವಟಕರ , ಶಿಕ್ಷಕಿ ಆಶಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.