ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯ ಸಾಧನೆ..

ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯ ಸಾಧನೆ..

ರಾಷ್ಟ್ರಮಟ್ಟದ ಸ್ಪೂರ್ತಿ ಪ್ರಶಸ್ತಿಗೆ ಆಯ್ಕೆಯಾದ ಶಾಲಾ ವಿಧ್ಯಾರ್ಥಿನಿ..

ವಿಧ್ಯಾರ್ಥಿಗಳು ಸರ್ಕಾರದ ಯೋಜನೆಯ ಸದುಪಯೋಗ ಪಡೆಯಬೇಕು.

ಲೀಲಾವತಿ ಹಿರೇಮಠ, ಬಿಇಒ ಬೆಳಗಾವಿ ನಗರ..

ಬೆಳಗಾವಿ : ಬೆಳಗಾವಿ ನಗರ ವಲಯದ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆಯ ವಿಧ್ಯಾರ್ಥಿನಿ ವರ್ಷಾ ಕೊರಿಮಠ ಎಂಬುವವರು “ಸ್ಪೂರ್ತಿ ಪ್ರಶಸ್ತಿ ಯೋಜನೆಯು” ರಾಷ್ಟ್ರ ಮಟ್ಟದ ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಶಾಲಾ ಸಿಬ್ಬಂದಿ ಹಾಗೂ ಶಿಕ್ಷಕ ಇಲಾಖೆಯ ಸಂತಸಕ್ಕೆ ಕಾರಣವಾಗಿದೆ..

ಕಾರಣ, ಬೆಳಗಾವಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೀಲಾವತಿ ಹಿರೇಮಠ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಐ ಡಿ ಹಿರೇಮಠ ಅವರು ಶಾಲೆಗೆ ಬೇಟಿ ನೀಡಿ, ವಿಧ್ಯಾರ್ಥಿನಿ ವರ್ಷಾ ಕೋಡಿಮಠ ಅವರನ್ನು ಸನ್ಮಾನಿಸಿದ್ದು, ಈ ಸಂದರ್ಭದಲ್ಲಿ ಸ್ಪೂರ್ತಿ ಪ್ರಶಸ್ತಿ ಯೋಜನೆಯ ನಗರ ವಲಯದ ನೋಡಲ್ ಅಧಿಕಾರಿಯಾದ ರಿಜವಾನ ನಾವಗೇಕರ ಕೂಡಾ ಇದ್ದರು..

ಸನ್ಮಾನದ ಬಳಿಕ ಲೀಲಾವತಿ ಹಿರೇಮಠ ಅವರು ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಪ್ರೋತ್ಸಾಹ ಧನ ಸೌಲಭ್ಯ ಇರುವದರಿಂದ ವಿಧ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು, ಪ್ರತಿಭೆಗೆ ಬಹಳ ಮಹತ್ವವಿದೆ, ಎಲ್ಲರೂ ತಮ್ಮ ಪ್ರತಿಭೆಗಳಿಂದ ಸಾಧನೆ ಮಾಡಬೇಕು ಎಂದು ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು..

ಇನ್ನು ಐ ಡಿ ಹಿರೇಮಠ ಅವರು ಮಾತನಾಡಿ, ವಿಧ್ಯಾರ್ಥಿಗಳು ತಮ್ಮ ಕಲ್ಪನಾ ಶಕ್ತಿಗೆ ಚಾಲನೆ ನೀಡಿ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಸಾಧನೆ ಮಾಡುವ ಗುರಿ ಹೊಂದಿರಬೇಕೆಂದು ಕಿವಿಮಾತು ಹೇಳಿದರು, ಶಾಲಾ ಮುಖ್ಯೋಪಾಧ್ಯಾಯರಾದ ಎಂ ಕೆ ಮಾದರ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರೆ, ವಿಧ್ಯಾರ್ಥಿನಿ ವರ್ಷಾ ಕೊರಿಮಠ ಅವರು ತಮ್ಮ ಅನುಭವ ಹಂಚಿಕೊಂಡರು, ಅದೇ ರೀತಿ ರಿಜವಾನ್ ನಾವಗೆಕರ್ ಪ್ರಾಸ್ತಾವಿಕವಾಗಿ ಮಾತನಾಡಿದ್ದು, ಶಾಲೆಯ ಎಲ್ಲಾ ಸಿಬ್ಬಂದಿಗಳು ಹಾಗೂ ವಿಧ್ಯಾರ್ಥಿಗಳು ಈ ಸ್ಪೂರ್ತಿದಾಯಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..

ವರದಿ ಪ್ರಕಾಶ ಬಸಪ್ಪ ಕುರಗುಂದ..