ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಕ್ರೀಡಾಕೂಟದ ಸಂಭ್ರಮ..
ಕ್ರೀಡೆಗಳು ಸಮಯಪ್ರಜ್ಞೆ ಹಾಗೂ ಸಹಕಾರ ಗುಣವನ್ನು ಕಲಿಸುತ್ತವೆ..
ಡಾ, ನೇತ್ರಾ ಸುತಾರ..
ಬೆಳಗಾವಿ : ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆಯು ಬುಧವಾರ ದಿನಾಂಕ 04/12/2024
ರಂದು ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿತ್ತು.
ಬೆಳಗಾವಿಯ ಪ್ರಖ್ಯಾತ ದಂತ ವೈದ್ಯರಾದ ಡಾ, ನೇತ್ರಾ ಮನೋಜ್ ಸುತಾರ ಇವರು ಪ್ರಮುಖ
ಅತಿಥಿಗಳಾಗಿ ಉಪಸ್ಥಿತರಾಗಿದ್ದು ಶಾಂತಿಯ ಸಂಕೇತವಾದ
ಪಾರಿವಾಳಗಳನ್ನು ಆಕಾಶದಲ್ಲಿ
ಹಾರಿಸುವ ಮೂಲಕ ಕ್ರೀಡಾಕೂಟದ ಉದ್ಘಾಟನೆ ಮಾಡಿದರು. ಬೆಳಗಾವಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಸುಧೀರ್ ಕುಲಕರ್ಣಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರು ಚಿಂತಾಮಣಿ ಗ್ರಾಮೋಪಾಧ್ಯಾಯ ಇವರು ಗೌರವ ಅತಿಥಿಗಳಾಗಿ
ಉಪಸ್ಥಿತರಿದ್ದು, ಕಾರ್ಯಕ್ರಮದ ಪ್ರಾರಂಭದಲ್ಲಿ ಕ್ರೀಡೆಯ ಧ್ವಜವನ್ನು ಹಾರಿಸಲಾಯಿತು. ಶಾಲೆಯ ವಿದ್ಯಾರ್ಥಿನಿಯಾದ ಅಪೂರ್ವಾ ಅಂಬೋಜಿ ಇವಳ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಪಥ ಸಂಚಲಣೆ ಮಾಡಿದರು.
ಅಂಜಲಿ ಪಾಟೀಲ್ ಕ್ರೀಡಾ ಜ್ಯೋತಿಯನ್ನು ಬೆಳಗಿದಳು,
ಕಾವೇರಿ ಭೂಸಲೆ
ಪ್ರತಿಜ್ಞಾವಿಧಿಯನ್ನು ಬೋಧಿಸಿದಳು.

ಕಾರ್ಯಕ್ರಮದ ಪ್ರಮುಖ ಅತಿಥಿಗಳಾದ ಡಾ.|| ನೇತ್ರಾ ಸುತಾರ್ ಅವರು ಮಾತನಾಡಿ “ಜೀವನದಲ್ಲಿ ಕ್ರೀಡೆಗೆ ಬಹಳ ಮಹತ್ವವಿದೆ ಅದಕ್ಕಾಗಿ ಪ್ರತಿಯೊಬ್ಬರು ಶಾಲೆಯಲ್ಲಿ ಆಯೋಜನೆ ಮಾಡಿದ್ದ ಕ್ರೀಡಾ ಸ್ಪರ್ಧೆಯಲ್ಲಿ ಆಸಕ್ತಿಯಿಂದ ಭಾಗವಹಿಸಿ ಮನಸ್ಸು ಹಾಗೂ ಶರೀರವನ್ನು ಸದೃಢವಾಗಿಡಲು ಪ್ರಯತ್ನಿಸಬೇಕು “ಎಂದು ಹೇಳಿದರು .
ಕ್ರೀಡೆಗಳ ಆಯೋಜನೆಯಿಂದ ಮತ್ತು ಅದರಲ್ಲಿ ಭಾಗವಹಿಸುವುದರಿಂದ ವೇಳೆಯ ಮಹತ್ವ, ಸಹಕಾರ, ಅಭಿವ್ಯಕ್ತಿ ಇತ್ಯಾದಿ ಗುಣಗಳು ಬೆಳೆಯುತ್ತವೆ.
ಆದ್ದರಿಂದ ಪ್ರತಿಯೊಬ್ಬರೂ ಆಸಕ್ತಿಯಿಂದ ಆಟಗಳನ್ನು
ಆಡಬೇಕು ಎಂದು ಹೇಳಿದರು.
10ನೇ ತರಗತಿ ವಿದ್ಯಾರ್ಥಿನಿಯರು ಸ್ವಾಗತಗೀತೆಯನ್ನು ಹಾಡಿದ್ದು, ಮುಖ್ಯೋಪಾಧ್ಯಯರಾದ ಎಂ ಕೆ ಮಾದಾರ್ ಅವರು ಅತಿಥಿಗಳ ಪರಿಚಯ ಮಾಡಿ ಎಲ್ಲರನ್ನು ಸ್ವಾಗತ ಮಾಡಿದರು,
ವೈಷ್ಣವಿ ಸೂಪೆ ಕಾರ್ಯಕ್ರಮದ ನಿರೂಪಣೆ ಮಾಡಿದಳು.
ಆದಿತಿ ಸುಭೇದಾರ್ ವಂದನಾರ್ಪಣೆ ಮಾಡಿದಳು.
ಈ ಕಾರ್ಯಕ್ರಮದ
ಆಯೋಜನೆ ಶಾಲೆಯ ಕ್ರೀಡಾ ಶಿಕ್ಷಕರಾದ ಬಲರಾಮ್ ಜೈನೋಜಿ
ಅವರು ಮಾಡಿದ್ದು,
ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.