ಎಂಇಎಸ್ ನ ಮಹಾಮೇಳಾಕ್ಕೆ ಅವಕಾಶ ನೀಡಬಾರದು..

ಎಂಇಎಸ್ ನ ಮಹಾಮೇಳಾಕ್ಕೆ ಅವಕಾಶ ನೀಡಬಾರದು..

ಗಡಿನಾಡು ಕನ್ನಡಿಗರ ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ..

ಬೆಳಗಾವಿ : ಇದೇ ಸೋಮವಾರ 8ನೇ ತಾರೀಕಿನಿಂದ ಬೆಳಗಾವಿಯಲ್ಲಿ ನಡೆಯುವ ರಾಜ್ಯ ವಿಧಾನ ಮಂಡಳ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿಯೇ ಮಹಾಮೇಳ ನಡೆಸಲು ಸಿದ್ಧತೆ
ನಡೆಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕರನ್ನು ಮುಂಜಾಗ್ರತ ಕ್ರಮವಾಗಿ ಬಂಧಿಸಬೇಕು ಮತ್ತು ಮಹಾಮೇಳ ನಡೆಸುವ ಪ್ರದೇಶದಲ್ಲಿ ನಿಷೇಧ ಆದೇಶವನ್ನು ಜಾರಿ ಮಾಡಬೇಕೆಂದು ಗಡಿನಾಡು ಕನ್ನಡಿಗರ ಸೇನೆಯು ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಮೊಹಮದ ರೋಷನ್ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೆನಟ್ಟಿ ಅವರು ನವೆಂಬರ್ ಒಂದರಂದು ಕರಾಳ ದಿನಾಚರಣೆಯನ್ನು ಆಚರಿಸದಂತೆ ಜಿಲ್ಲಾಡಳಿತವು ಎಚ್ಚರಿಕೆ ನೀಡಿದ್ದರೂ ಕೂಡಾ ಎಮ್ಇಎಸ್ ನಾಯಕರು ಸಹಸ್ರಾರು ಜನರ ಮೆರವಣಿಗೆ ನಡೆಸಿದ್ದರು, ಈಗಲೂ ಅದೇ ರೀತಿ ಆಗುವ ಸಾಧ್ಯತೆ ಇದ್ದು ಅವರನ್ನು ಮುಂಜಾಗ್ರತೆ ಕ್ರಮವಾಗಿ ಬಂಧಿಸಬೇಕು ಹಾಗೂ ಅವರು ಕಾರ್ಯಕ್ರಮ ನಡೆಸುವ ಪ್ರದೇಶದಲ್ಲಿ ನಿಷೇಧ ಹೆರಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಭೀಮಾಶಂಕರ್ ಗುಳೇದ ಅವರು ಸಹ ಹಾಜರಿದ್ದು, ಅವರ ಸಮ್ಮುಖದಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.
ಗಡಿನಾಡು ಕನ್ನಡಿಗರ ಸೇನೆಯ ಪದಾಧಿಕಾರಿಗಳಾದ ಸಂತೋಷ ಮಾಸೇನಟ್ಟಿ, ಆನಂದ ಬಿಲಾವರ, ಎಸ್. ಎಸ್. ಮೂಕನವರ, ಕಿರಣ ಚಿತಂಪಳೆ,
ಮಯೂರ್ ಕಾಂಬಳೆ, ಮಂಜುನಾಥ ಪಾಸ್ತೇ ಮುಂತಾದವರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *