ಎನ್ಎಸ್ ಪೈ ಶಾಲೆಯಲ್ಲಿ ಶಾಲಾ ಸ್ಥಾಪನ ದಿನಾಚರಣೆ..

ಎನ್ಎಸ್ ಪೈ ಶಾಲೆಯಲ್ಲಿ ಶಾಲಾ ಸ್ಥಾಪನ ದಿನಾಚರಣೆ..

ಮಾತೃಭಾಷೆ ಶಿಕ್ಷಣದಲ್ಲಿ ಸಾಧನೆ ಮಾಡುತ್ತಿರುವ ಬಿಇ ಶಿಕ್ಷಣ ಸಂಸ್ಥೆಯ ಸೇವೆ ಶ್ಲಾಘನೀಯ..

ಬೆಳಗಾವಿ :ಬೆಳಗಾವಿ ಶಿಕ್ಷಣ ಸಂಸ್ಥೆಯ,
ಎನ್ ಎಸ್ ಪೈ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ, ಬುಧವಾರ ದಿನಾಂಕ 12/06/2024ರಂದು, 33 ನೇಯ ಸ್ಥಾಪನಾ ದಿನ ಹಾಗೂ ಸರಸ್ವತಿ ಪೂಜೆ, ಪಾಟಿ ಪೂಜೆಯನ್ನು ಗಣ್ಯರು ನೆರವೇರಿಸುವ ಮೂಲಕ ಮಕ್ಕಳಿಗೆ
ಅಕ್ಷರಾಭ್ಯಾಸ ಮಾಡಿಸಿದ್ದಾರೆ..

ಶಾಲಾ ಉಸ್ತುವಾರಿಗಳಾದ ದೀಪಕ್ ಕುಲಕರ್ಣಿ ಅವರು ವಿದ್ಯಾರ್ಥಿಗಳಿಗೆ ಶುಭಕೋರುತ್ತಾ ಮಾತನಾಡಿ, ಎನ್ ಎಸ್ ಪೈ ಶಾಲೆಯು
ಮೂರು ವರ್ಷದ ಬುದ್ಧಿ ,ನೂರು ವರ್ಷದ ತನಕ ಅನ್ನುವಂತೆ ಒಳ್ಳೆಯ ಸಂಸ್ಕಾರದೊಂದಿಗೆ ಮಾತೃಭಾಷೆ ಕನ್ನಡ ಮಾದ್ಯಮದಲ್ಲಿ ಶಿಕ್ಷಣ ಕೊಡುತ್ತಾ, ನಿರಾಯಾಸವಾಗಿ ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ.

ಇದೆ ಶಾಲೆಯಲ್ಲಿ ಕಲಿತು
SSLC ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯಿನಿ ರಾಧಿಕಾ ನಾಯಿಕ ಸ್ವಾಗತಿಸಿದರು,
ಶ್ರೀಕಾಂತ್ ಮಲಶೆಟ್ಟಿ ಅವರು ನಿರೂಪಣೆ ಮಾಡಿದರು
ಉಷಾ ಅಥಣಿ ಸಂಯೋಜನೆ ಹಾಗೂ ಸುಮನ್ ಜೋಶಿ ವಂದನಾರ್ಪಣೆಯನ್ನು ಮಾಡುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..