ಎನ್ ಎಸ್ ಪೈ ಪ್ರಾಥಮಿಕ ಶಾಲೆಯಲ್ಲಿ 33ನೇ ವಾರ್ಷಿಕ ಸ್ನೇಹ ಸಮ್ಮೇಳನ..
ಪ್ರಾಥಮಿಕ ಶಾಲಾ ಶಿಕ್ಷಣ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ..
ನ್ಯಾಯವಾದಿ ರೋಹಿತ ಉಮನಾಬಾದಿಮಠ..
ಬೆಳಗಾವಿ : ತಾವು ಕಲಿತ ಶಾಲೆಯ ಬಾಲ್ಯದ ದಿನಗಳನ್ನು ಮೆಲಕು ಹಾಕಿ, ತಮ್ಮ ಸಾಧನೆಗೆ ಪ್ರತಿ ಹೆಜ್ಜೆಯ ಕೊಡುಗೆ ನನ್ನ ಪ್ರಾಥಮಿಕ ಶಾಲೆಯದು, ನನ್ನ ಸಾಧನೆಗೆ ಕನ್ನಡ ಮಾಧ್ಯಮ ಕಲಿಕೆ ಅಡ್ಡಿಯಾಗಿಲ್ಲ, ಬದಲಾಗಿ ಪೂರಕವಾಗಿ ಆತ್ಮವಿಶ್ವಾಸ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ ಎಂಬ ಭಾವನೆ ಪ್ರತಿ ಸಾಧಕರಲ್ಲಿಯೂ ಇರುತ್ತದೆ ಎಂದು ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ನ್ಯಾಯವಾದಿ ರೋಹಿತ ಉಮನಾಬಾದಿಮಠ ಅವರು ಹೇಳಿದ್ದಾರೆ.

ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಎನ್ ಎಸ್ ಪೈ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ನಡೆದ 33ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ರೋಹಿತ್ ಅವರು ಯಾವುದೇ ಸಾಧಕರು ತಮ್ಮ ಪ್ರಾಥಮಿಕ ಶಾಲಾ ದಿನಗಳ ಕಲಿಕೆಯನ್ನು ಯಾವತ್ತೂ ಮರೆಯೋದಿಲ್ಲ, ತಾವೂ ಕೂಡಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅತ್ಯಂತ ಪ್ರಯೋಜನಕಾರಿಯಾಗಿ ಪರಿಣಾಮಕಾರಿಯಾಗಿ ಕಲಿಯಬೇಕು ಎಂಬ ಕಿವಿಮಾತು ಹೇಳಿದ್ದಾರೆ.
ಈಗ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಕಲಿಕೆಯು ಬಹಳ ಮಹತ್ವವಾಗಿದ್ದು ಮಾತೃ ಭಾಷೆಯೊಂದಿಗೆ ಮಕ್ಕಳು ಬಹಳ ಮುತವರ್ಜಿಯಿಂದ ಇಂಗ್ಲಿಷ್ ಭಾಷೆಯನ್ನು ಕೂಡಾ ರೂಡಿಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಬೇಕೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಅರವಿಂದ ಹುನುಗುಂದ ಅವರು ಹೇಳಿದ್ದಾರೆ.

ಗೌರವ ಅತಿಥಿಗಳಾದ ದೀಪಕ ಕುಲಕರ್ಣಿಯವರು ಮಾತನಾಡಿ ಮಕ್ಕಳು ಮೊಬೈಲ್ ಬಳಕೆಯನ್ನು ಮಿತವಾಗಿ ಮಾಡಿ, ಪಾಲಕರು ಮಕ್ಕಳಿಗೆ ಮೊಬೈಲ್ ಹವ್ಯಾಸವನ್ನು ಬೆಳೆಸದೆ ಪುಸ್ತಕದ ಓದಿನ ಕಡೆ ಹೆಚ್ಚಿನ ಗಮನ ಕೊಡುವಂತೆ ಮಾಡಬೇಕು ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿಯಾದ ರಾಧಿಕಾ ನಾಯಕ ಅವರು ಸ್ವಾಗತಿಸಿದರು, ಜೊತೆಗೆ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆ 33 ವರ್ಷಗಳಿಂದ ನಡೆದು ಬಂದ ಹಾದಿಯನ್ನು ವಿವರಿಸಿದರು..
ಶಾಲಾ ಶಿಕ್ಷಕಿ ಹರ್ಷಾ ಕುಲಕರ್ಣಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರೆ,
ಶಿಕ್ಷಕಿ ಸುರೇಖಾ ಕಮತ್ ವಂದನಾರ್ಪಣೆ ಮಾಡಿದರು, ಕಾರ್ಯಕ್ರಮದ ಸಂಚಾಲಕಿಯಾದ ಉಷಾ ಅಥಣಿ ಉತ್ತಮ ಸಂಯೋಜನೆ ಮಾಡಿದರು, ಎಲ್ಲ ಮುದ್ದು ಮಕ್ಕಳು ವಿಭಿನ್ನ ಸಂದೇಶ ಸಾರುವ, ಪಾರಾಣಿಕ ಸಾಮಾಜಿಕ, ಮನ ರಂಜಿಸುವ ಹಾಡು, ಅಭಿನಯ, ನೃತ್ಯ ಮಾಡಿದ್ದು ಕಣ್ಣಿಗೆ ಹಬ್ಬವಾಗಿತ್ತು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..