ಎಲ್ ಆಂಡ್ ಟಿ ಯಿಂದ ಹೊರಗುತ್ತಿಗೆ ಸಿಬ್ಬಂದಿಗೆ ಆಗಿರುವ ಸಮಸ್ಯೆ ತಕ್ಷಣ ನಿಲ್ಲಿಸುತ್ತೇವೆ.
ನೀರು ಸರಬರಾಜು ಸಿಬ್ಬಂದಿಗಳಿಗೆ ನಿಯಮಾನುಸಾರ ಸೌಲಭ್ಯ ನೀಡುತ್ತೇವೆ.
ಕೆಯುಐಡಿಎಫಸಿ ಅಧಿಕಾರಿಗಳ ಭರವಸೆ..
ಬೆಳಗಾವಿ : ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನೀರು ಸರಬರಾಜು ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸುಮಾರು 350ಕ್ಕೂ ಹೆಚ್ಚು ಹೊರಗುತ್ತಿಗೆ ಸಿಬ್ಬಂದಿಗಳಿಗೆ, ಗುತ್ತಿಗೆ ಸಂಸ್ಥೆಯಾದ ಎಲ್ ಆಂಡ್ ಟಿ ಯಿಂದ ಇನ್ಮುಂದೆ ಯಾವುದೇ ಸಮಸ್ಯೆ ಅಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಕೆಯುಐಡಿಎಫಸಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಸುಮಾರು 25 ವರ್ಷಗಳಿಂದ ಬೆಳಗಾವಿಯ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 350 ಸಿಬ್ಬಂದಿಗಳು, ಹಿಡಕಲ್ ಜಲಾಶಯ, ತುಮ್ಮರಗುದ್ದಿ, ಬೆಳಗಾವಿಯ ಲಕ್ಷ್ಮಿ ಟೇಕ್ ಈ ರೀತಿಯ ಸುಮಾರು ಹದಿನೈದು ಘಟಕಗಳಲ್ಲಿ ಕುಡಿಯುವ ನೀರು ಸರಬರಾಜು ಕಾರ್ಯದಲ್ಲಿ ನಿರತರಾಗಿದ್ದು, ಕೆಲ ವರ್ಷಗಳಿಂದ ಎಲ್ ಆಂಡ್ ಟಿ ಸಂಸ್ಥೆಯು ಗುತ್ತಿಗೆ ಅಡಿಯಲ್ಲಿ ಈ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ವಾಟರ್ ಮೆನ್, ಲೇಬರ್, ಡೇಟಾ ಆಪರೇಟರ್, ಪಂಪ ಆಪರೇಟರ್, ರೆವೆನ್ಯೂ ಕ್ಲಾರ್ಕ್ ಹೀಗೆ ನಾನಾ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಈ ಸಿಬ್ಬಂದಿಗಳಿಗೆ ಇತ್ತೀಚೆಗೆ ಗುತ್ತಿಗೆ ಸಂಸ್ಥೆಯಿಂದ ಹಲವು ಸಮಸ್ಯೆಗಳು ಎದುರಾಗುತ್ತಿದ್ದು, ಸಿಬ್ಬಂದಿಗಳು ಅದರ ವಿರುದ್ಧ ದ್ವನಿ ಎತ್ತಿದ್ದರು, ಸಿಬ್ಬಂದಿಗಳಿಗೆ ನೀಡುವ ವೇತನ, ವಿಳಂಬತೆ, ವ್ಯತ್ಯಾಸತೆ, ಕೆಲಸದ ಕಾಲಾವಧಿ ಹೀಗೆ ಹಲವಾರು ವಿಷಯಗಳಲ್ಲಿ ಸಿಬ್ಬಂದಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು.
ಇದರ ಕುರಿತಾಗಿ ಸಂಬಂಧಪಟ್ಟ, “ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ನಿಗಮ ನಿಯಮಿತ” ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ನೀರು ಸರಬರಾಜು ಸಿಬ್ಬಂದಿಗಳ ಸಮಸ್ಯೆ ನಮ್ಮ ಗಮನಕ್ಕೂ ಬಂದಿದೆ, ಆದಷ್ಟು ಬೇಗ ಎಲ್ ಆಂಡ್ ಟಿ ಅವರನ್ನು ಕರೆಸಿ, ತಾವು ತಿಳಿಸಿದಂತ ಸಿಬ್ಬಂದಿಗಳ ಸಮಸ್ಯೆಗಳು ಇನ್ಮುಂದೆ ಯಾವತ್ತೂ ಆಗದಂತೆ ನೋಡಿಕೊಳ್ಳುವಂತೆ ಗುತ್ತಿಗೆ ಸಂಸ್ಥೆಗೆ ತಾಕೀತು ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ.