ಏಪ್ರಿಲ್ 16ರಿಂದ ಬೆಳಗಾವಿಯಲ್ಲಿ ವೈಭವಯುತ ಹರಿದಾಸ ಹಬ್ಬ…

ಏಪ್ರಿಲ್ 16ರಿಂದ ಬೆಳಗಾವಿಯಲ್ಲಿ ವೈಭವಯುತ ಹರಿದಾಸ ಹಬ್ಬ..

ರಾಮ ಹನುಮರ ಭಜನೆ ಕೀರ್ತನೆ, ಪ್ರವಚನಗಳಿಂದ ಪಾವನವಾಗುವ ಸಾವಿರಾರು ಭಕ್ತರು..

ಡಾ, ರಾಯಚೂರು ಶೇಷಗಿರಿದಾಸ್. ಹರಿದಾಸ ಸೇವಾ ಸಮಿತಿ ಗೌರವಾಧ್ಯಕ್ಷರು..

ಬೆಳಗಾವಿ : ಸಮಾಜವನ್ನು ತಿದ್ದಿ ತೀಡುವ ಸಾಹಿತ್ಯದ ಕೃತಿಗಳ ಮೂಲಖ ತಮ್ಮ ಸಂದೇಶಗಳನ್ನು ಜನರ ಮನಸ್ಸಿಗೆ ಮುಟ್ಟಿಸುವ ಸಾರ್ಥಕ ಪ್ರಯತ್ನ ಮಾಡಿದ ಕನ್ನಡದ ಹರಿದಾಸರ ಸಂದೇಶಗಳನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಹರಿದಾಸ ಹಬ್ಬ ಎನ್ನುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಡಾ ರಾಯಚೂರು ಶೇಷಗಿರಿದಾಸ್ ಅವರು ತಿಳಿಸಿದ್ದಾರೆ..

ನಗರದ ಸಾಹಿತ್ಯ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದೆ ಏಪ್ರಿಲ್ 16,17,18ರಂದು ಮೂರು ದಿನಗಳ ಕಾಲ ಬೆಳಗಾವಿಯ ಭಾಗ್ಯನಗರದ ರಾಮನಾಥ ಮಂಗಳ ಕಾರ್ಯಾಲಯದಲ್ಲಿ ಬೆಳಗಾವಿಯ ಹರಿದಾಸ ಸೇವಾ ಸಮಿತಿ ಹಾಗೂ ಬೆಳಗಾವಿಯ ವಿಶ್ವ ಮದ್ವ ಮಹಾ ಪರಿಷತ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

ಪ್ರತಿ ದಿವಸ ಮಧ್ಯಾಹ್ನ 3 ಗಂಟೆಯಿಂದ ಪ್ರಾರಂಭವಾಗುವ ಈ ಕಾರ್ಯಕ್ರಮ ಭಜನೆ, ಉಪನ್ಯಾಸ, ದಾಸವಾಣಿ, ಆಶೀರ್ವಚನ, ಸನ್ಮಾನ ಪ್ರಶಸ್ತಿ ಪ್ರಧಾನ ಹೀಗೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಹರಿದಾಸರಿಗೆ ನಮನಗಳನ್ನು ಸಲ್ಲಿಸಲಾಗುವ ಈ ಹರಿದಾಸ ಹಬ್ಬ ಅರ್ಥಪೂರ್ಣವಾಗಲಿದೆ ಎಂದಿದ್ದಾರೆ.

ಈ ಆಧ್ಯಾತ್ಮಿಕ ಹಬ್ಬವು ದಿನಾಂಕ 16 ರಂದು ಸಂಜೆ 4ಗಂಟೆ, 30 ನಿಮಿಷಕ್ಕೆ, ಪರಮಪೂಜ್ಯ ಅದಮಾರು ಮಠಾಧೀಶರಾದ ಶ್ರೀ ವಿಷ್ವಪ್ರಿಯತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತದಿಂದ ಉದ್ಘಾಟನೆ ಆಗಲಿದ್ದು, ದಾಸ ಸಾಹಿತ್ಯದಲ್ಲಿ ಸಾಧನೆಗೈದ ಹಿರಿಯ ಸಾಧಕರಿಗೆ ನೀಡಲಾಗುವ ಅನಂತಾದ್ರಿಷ ಪ್ರಶಸ್ತಿಯನ್ನು ಶ್ರೀ ಶ್ರೀನಿವಾಸ ಆಚಾರ್ಯ ಉಮರ್ಜಿ ಐನಾಪುರ ಇವರಿಗೆಪ್ರಶನ ಮಾಡಲಾಗುವದು ಎಂಬ ಮಾಹಿತಿ ನೀಡಿದ್ದಾರೆ..

ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ, ರಾಮಾ ಭಂಡಾರಿ, ಉದ್ದಿಮೆದಾರರು, ಭರತೇಶ ದೇಶಪಾಂಡೆ, ಉದ್ದಿಮೆದಾರರು, ಪರಮೇಶ್ವರ ಹೆಗಡೆ ಭಾಗಿಯಾಗಿದ್ದು, ಸಮಸ್ತ ಹರಿ ಭಕ್ತರು ಹಾಗೂ ಜಿಲ್ಲೆ, ರಾಜ್ಯದ ಭಕ್ತಾದಿ ವರ್ಗಗಳೆಲ್ಲ ಆಗಮಿಸಿ ಈ ಹರಿ ಸ್ಮರಣೆಯಲ್ಲಿ ಭಾಗಿಯಾಗಿ ಪುನೀತರಾಗಬೇಕು ಎಂದು ಮನವಿ ಮಾಡಿದರು..

ಬರುವ ಭಕ್ತವರ್ಗಕ್ಕೆ ಆಸನ, ನೀರು, ಉಪಹಾರ, ಪ್ರಸಾದ, ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಜಾತಿ, ಭಾಷೆ, ಕುಲ, ಜನಾಂಗ ಎನ್ನದೇ ಎಲ್ಲರೂ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದರು..

ಈ ಸುದ್ದಿಗೋಷ್ಟಿಯಲ್ಲಿ ಭಿಮಶೇನ ಮಿರ್ಜಿ, ಜಯತೀರ್ಥ ಸವದತ್ತಿ, ಕೇಶವ ಮಾಹುಲಿ, ಮಧುಕರ ತೇರದಾಳ, ಪ್ರಭಾಕರ್ ಸರಳಾಯಿ, ಶ್ರೀಧರ ಕುಲ್ಕರ್ಣಿ, ಸಂಜೀವ ಕುಲ್ಕರ್ಣಿ, ಶೇಷಗಿರಿ ಕುಲ್ಕರ್ಣಿ ಮತ್ತಿತರರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಕುರಗುಂದ..