ಐಎಎಸ್ ಮತ್ತು ಕೆಎಎಸ್ ಆಕಾಂಕ್ಷಿ ವಿಧ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಾಗಾರ..
ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ತುಂಬಾ ಪ್ರತಿಭಾವಂತರು..
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಶ್ಲಾಘನೆ..
ಬೆಳಗಾವಿ : ಶನಿವಾರ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಬೆಳಗಾವಿಯ ಜಿಲ್ಲಾಡಳಿತ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿತ್ತು..
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಉದ್ಯೋಗ ವಿನಿಮಯ ಇಲಾಖೆಯ ಜಂಟಿ ನಿರ್ದೇಶಕಿಯರಾದ ಸಾಧನಾ ಪೋಟೆ ಅವರು, ವಿದ್ಯಾರ್ಥಿಗಳಿಗಾಗಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಯ ಕಾರ್ಯಾಗಾರ ಇಟ್ಟಿರುವ ಜಿಲ್ಲಾಡಳಿತಕ್ಕೆ ಧನ್ಯವಾದ ಎಂದ ಅವರು, ನುರಿತ ಹಾಗೂ ಹೊಸ ಅಧಿಕಾರಿಗಳಿಂದ ಹಲವು ವಿಷಗಳನ್ನು ತಿಳಿಯಲು ಅನುಕೂಲ ಆಗುತ್ತದೆ ಎಂದರು..

ಇನ್ನು ಸ್ವಾಗತ ನುಡಿಗಳನ್ನು ಆಡಿದ ಜಿಲ್ಲಾಧಿಕಾರಿಗಳು, ಐಎಎಸ್
ತರಬೇತಿ ನೀಡಲು ನಾಲ್ಕು ಜನ ಪ್ರೊಬೇಷನರಿ ಅಧಿಕಾರಿಗಳನ್ನು ಕರೆಸಿ ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿಸುತ್ತಿದ್ದೇವೆ, ಅದರಲ್ಲಿ ಬೆಳಗಾವಿಯ ಇಬ್ಬರು ಪ್ರೊಬೇಷನರಿ ಐಎಎಸ್ ಅಧಿಕಾರಿಗಳು, ಈಗ ತಾನೇ ಪರೀಕ್ಷೆ ಪಾಸು ಮಾಡಿ, ತಮಗೆ ತರಬೇತಿ ನೀಡಲು ಇವತ್ತು ಇಲ್ಲಿ ಬಂದು ಇಡೀ ದಿನ ನಿಮಗೆ ಮಾರ್ಗದರ್ಶನ ಮಾಡುತ್ತಾರೆ.
ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲು, ನಮ್ಮ ಬೆಳಗಾವಿಯಿಂದ ಪಾಸಾದ ಅಧಿಕಾರಿಗಳನ್ನೇ ಇಲ್ಲಿ ಕರೆಸಿದ್ದೇವೆ, ನೀವು ಈ ಸಾಧನೆ ಮಾಡಬಹುದು, ಅದು ಹೇಗೆ ಮಾಡಬೇಕು ಎಂದು ತಮ್ಮ ಅನುಭವ ಹಾಗೂ ಮಾಹಿತಿಯನ್ನು ನೀಡುವರು ಎಂದರು..
ಉತ್ತರ ಕರ್ನಾಟಕದ, ಕನ್ನಡ ಮಾಧ್ಯಮದಲ್ಲಿ ಓದಿದ ಬಹಳಷ್ಟು ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳು ಇಲ್ಲಿ ಇದ್ದೇವೆ, ನಾವು ಉತ್ತರ ಕರ್ನಾಟಕದವರು ತುಂಬಾ ಜಾಣರು, ಅದರ ಜೊತೆ ಆತ್ಮವಿಶ್ವಾಸ ನಾವು ಬೆಳೆಸಿಕೊಂಡರೆ ಯಾವುದೇ ಸಾಧನೆ ಮಾಡಬಹುದು ಎಂದರು..

ನಾನು ಒಂದು ಬಡ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು, ತುಂಬಾ ಸಮಯ ಅಲ್ಲಿ, ಇಲ್ಲಿ ವ್ಯಾಸಂಗ ಮಾಡಿ, ಕೆಲಸ ಮಾಡಿ, ಇಂದು ಅಧಿಕಾರಿಯಾಗಿದ್ದೇವೆ, ಆದರೆ ಈಗಿನ ವಿಧ್ಯಾರ್ಥಿಗಳಿಗೆ ಉತ್ತಮ ಸನ್ನಿವೇಶ, ಕಲಿಕಾ ಸಾಮಗ್ರಿ, ಇಂತಹ ಪರಿಣಿತರ ಕಾರ್ಯಗಾರ ಇವೆ, ಅದನ್ನೆಲ್ಲ ಸದುಪಯೋಗ ಮಾಡಿಕೊಳ್ಳಿ, ಇಂತಹ ಪರೀಕ್ಷೆ ಪಾಸು ಮಾಡುವ ಗುರಿ ಹೊಂದಿದ ನಿಮಗೆ, ಮೊದಲು ಇಚ್ಛಾಶಕ್ತಿ ಇರಬೇಕು, ಕಷ್ಟಪಟ್ಟು ಓದಬೇಕು ಅಷ್ಟೇ, ದಿನಕ್ಕೆ ಕೇವಲ 8 ರಿಂದ 10 ತಾಸು ಕನಿಷ್ಠ ಎರಡು ವರ್ಷ ಓದಬೇಕು, ಅದು ಗಮನ ಇಟ್ಟು, ಫೋಕಸ್ ಮಾಡಿ ಓದಬೇಕು, ಆಗ ಖಂಡಿತವಾಗಿ ನೀವು ಯಾವುದೇ ಪರೀಕ್ಷೆ ಪಾಸು ಮಾಡಬಹುದು..
ನನ್ನ ಪಾಲಕರು, ನನ್ನ ಊರಿಗೆ, ನನ್ನ ನಾಡಿಗೆ ಒಂದು ಹೆಮ್ಮೆ ಹಾಗೂ ಒಳ್ಳೆಯ ಉಡುಗೊರೆ ನೀಡುತ್ತೇನೆ ಎಂದು ಗುರಿ ಇಟ್ಟುಕೊಂಡು ನಿಮ್ಮ ಪ್ರಯತ್ನ ಮಾಡಬೇಕು ಎಂದ ಅವರು, ನಾನು ಪಾಸಾಗಿದ್ದು, 2011 ರಲ್ಲಿ, ಆದರೆ ಈಗ ಪರೀಕ್ಷೆಯ ಪರಿಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ಆಗಿವೆ, ನಾನು ಮೂರು ವರ್ಷ ಕಷ್ಟಪಟ್ಟು ಓದಿದೆ, ಆಗ ಸಮಯವನ್ನು ಬೇರೆ ಕೆಲಸಕ್ಕೆ ನೀಡದೇ ಒಂದು ರೀತಿಯ ತ್ಯಾಗ ಮಾಡಿದೆ ಎನ್ನಬಹುದು, ಯುಪಿಎಸ್ಸಿ ಪರೀಕ್ಷೆ ಪದ್ಧತಿಯಲ್ಲಿ
ನೀವು ಒಂದು ರೂಪಾಯಿ ಕೂಡಾ ನೀಡಬೇಕಿಲ್ಲ, ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಸುವರ್ಣಾವಕಾಶ, ಇದರ ಉಪಯೋಗ ಪಡೆದು ಉತ್ತಮ ಅಧಿಕಾರಿಯಾಗಿ ಎಂದು ಕಾರ್ಯಗಾರದಲ್ಲಿ ಉಪಸ್ಥಿತರಿದ್ದ ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು..

ಇನ್ನು ಬೆಳಗಾವಿಯ ಐಎಎಸ್ ಪ್ರೊಬೇಷನರಿ ಅಧಿಕಾರಿಯಾದ ಶುಭಂ ಶುಕ್ಲಾ ಅವರು ಕನ್ನಡದಲ್ಲೇ ಮಾತು ಆರಂಬಿಸಿ ಎಲ್ಲರಿಂದ ಮೆಚ್ಚುಗೆ ಪಡೆದರು, ಐಎಎಸ್ ಪರೀಕ್ಷೆ ಪಾಸಾಗುವದು ಕೋಣೆಯಲ್ಲಿ ಬಾಗಿಲು ಹಾಕಿ ಕುಳಿತು, ಪುಸ್ತಕ ಓದೋದು ಅಲ್ಲಾ, ಅದರ ಬದಲಾಗಿ ನಿಮ್ಮ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಜ್ಞಾನ, ಅರಿವು ಇರಬೇಕು, ಅದರ ಜೊತೆಗೆ ದಿನಪತ್ರಿಕೆ ಓದಬೇಕು ಅದು ಮುಖ್ಯ ಜ್ಞಾನ, ಅದೇ ಅಲ್ಲಿ ಕೆಲಸಕ್ಕೆ ಬರುವದು ಎಂದರು..
ಎಲ್ಲಾ ವಿಧ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಿ, ಬೆಳಗಾವಿಯಲ್ಲಿ ಪ್ರತಿಭೆಯ ಭಂಡಾರವೇ ಇದೆ, ಎಲ್ಲರೂ ಉನ್ನತ ಪರೀಕ್ಷೆಯಲ್ಲಿ ಪಾಸಾಗಬಹುದು, ಅದಕ್ಕೆ ಉತ್ತಮ ಉದಾಹರಣೆ ಎಂದರೆ ಈ ವರ್ಷದ ಬೆಳಗಾವಿ ಜಿಲ್ಲೆಯಿಂದ ಆಯ್ಕೆಯಾದ ಆರು ಅಧಿಕಾರಿಗಳು ಎಂದರು..

ಪರೀಕ್ಷೆಯಲ್ಲಿ ಪಾಸಾಗಲು ಸಾಕಷ್ಟು ಪರೀಕ್ಷಾ ಸಲಕರಣೆ ಇವೆ, ಅದಕ್ಕಾಗಿ ಖರ್ಚು ಮಾಡಿ, ಕೋಚಿಂಗ ಮಾಡುವ ಅವಶ್ಯಕತೆ ಇಲ್ಲಾ, ದೊಡ್ಡ ಮಟ್ಟದಲ್ಲಿ ಕೋಚಿಂಗಿಗೆ ಹಣ ಖರ್ಚು ಮಾಡುವ ಬದಲು, ಸ್ವಲ್ಪ ಹಣದಲ್ಲಿ ಒಳ್ಳೆಯ ncert ಪುಸ್ತಕ ಖರೀದಿ ಮಾಡಿ ಅಧ್ಯಯನ ಮಾಡಿ, ಸ್ಮಾರ್ಟ ಫೋನಿನಲ್ಲಿ ಗೂಗಲ್, ಯುಟುಬ್ ಗಳಲ್ಲಿ ಅನೇಕ ಅಧ್ಯಯನದ ಮಾಹಿತಿ ತಮಗೆ ಸಿಗುತ್ತವೆ, ಅದನ್ನು ಉಪಯೋಗಿಸಿ ಅಧ್ಯಯನ ಮಾಡಿದರೆ, ಯಶಸ್ವಿ ಸಾಧ್ಯ ಎಂದು ಸಲಹೆ ನೀಡಿದರು..
ಇನ್ನು ಬೆಳಗಾವಿಯ ಪ್ರೊಬೇಷನರಿ ಅಧಿಕಾರಿ ಸಾಹಿತ್ಯಾ ಮಾತನಾಡಿ, ಮೊದಲು ತಾವು ಐಎಎಸ್ ಪಠ್ಯಕ್ರಮ ತಿಳಿದುಕೊಳ್ಳಿ, ಒಂದು ಜಿಲ್ಲಾ ಅಧಿಕಾರಿ ಆಗುವ ಹುದ್ದೆಗೆ ಎಲ್ಲಾ ಕ್ಷೇತ್ರದ ವಿಷಯಗಳು ತಮಗೆ ಮಾಹಿತಿ ಇರಬೇಕು, ಜಿಲ್ಲಾ ಕೇಂದ್ರದಿಂದ ಹಳ್ಳಿವರೆಗೂ ಮಾಹಿತಿ ಇರಬೇಕು, ಅದಕ್ಕಾಗಿ ಬಹಳ ವಿಷಯಗಳ ಅಧ್ಯಯನ ಅನಿವಾರ್ಯ ಎಂದರು..
ಯೂಟ್ಯೂಬ್ ಅಲ್ಲಿ ಆನ್ಲೈನ್ ಅಧ್ಯಯನ ಮಾಡಿ, ನೀವು ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡುವ ವಿಷಯವೇ ಅಲ್ಲಿ ಕೇಳುವರು, ಆದರೆ ವಿಧಾನ ಬೇರೆ ಇರುತ್ತದೆ ಎಂದರು, ಸುತ್ತಮುತ್ತಲಿನ ವಿಷಯ ಏನು ನಡಿತಾ ಇದೇ, ಪುಸ್ತಕದಲ್ಲಿ ಏನಿದೆ ಎಂದು ತಿಳಿದರೆ, ಎರಡನ್ನೂ ಅರ್ಥೈಸಿಕೊಂಡಾಗ ನೀವು ಸಫಲರಾಗುತ್ತಿರಾ ಎಂದರು..

ದಿನಪತ್ರಿಕೆ ಓದಿ ಕಲಿಯುವುದು ಬಹಳ ಮುಖ್ಯ, ಇವತ್ತೇ ಪತ್ರಿಕೆ ಓದಲಿಕ್ಕೆ ಪ್ರಾರಂಭಿಸಿ, ಕಲಾ ವಿಭಾಗದ ವಿಧ್ಯಾರ್ಥಿಗಳಿಗೆ ಐಎಎಸ್ ಮಾಡುವದು ಅತೀ ಸರಳ, ಕಲಾ ವಿಷಯದ ಬಗ್ಗೆನೇ ಹೆಚ್ಚು ಪ್ರಶ್ನೆ ಇರುತ್ತದೆ, ncert ಪುಸ್ತಕ ಓದುವುದು ತುಂಬಾ ಮುಖ್ಯ, 6 ರಿಂದ 12ನೆಯ ವರ್ಗದ ವಿಷಯವಸ್ತು ಅಧ್ಯಯನ ಮಾಡಿದರೆ ಆಯ್ತು ಎಂದರು..
ಸರ್ಕಾರದಿಂದ ತುಂಬಾ ಅವಕಾಶವಿದೆ, ಯಾರೂ ಚಿಂತೆ ಮಾಡುವ ಹಾಗಿಲ್ಲ, ಅಧ್ಯಯನ ಸಾಮಗ್ರಿ ಉಚಿತ, ನಿಮ್ಮ ಭಾಷೆಯಲ್ಲಿಯೇ ಪರೀಕ್ಷೆ, ಸಂದರ್ಶನ ಮಾಡುವ ವ್ಯವಸ್ಥೆ ಇದೆ, ಅರ್ಜಿ ಉಚಿತ, ಹೀಗೆ ಬಡ ವಿಧ್ಯಾರ್ಥಿಗಳಿಗೆ ಹಲವಾರು ಅವಕಾಶ ಸರ್ಕಾರದಿಂದ ಇವೆ, ದಯವಿಟ್ಟು ಎಲ್ಲರೂ ಪ್ರಯತ್ನಿಸಿ ಎಂದರು..
ನನ್ನ ಕಥೆ ಸೋತು ಗೆದ್ದಕಥೆ ಇದ್ದಂತೆ, ಅದಕ್ಕೆ ನಾನು ಎಲ್ಲಾ ಕಡೆ ನನ್ನ ಕಥೆ ಹೇಳುತ್ತೇನೆ, ನಾಲ್ಕು ಸಲ ಪೆಲ್ ಆಗಿದ್ದೆ, ಆದರೆ ಇನ್ನೆರಡು ಸಲ ಪೇಲ್ ಆಗ್ತೀನಿ ಅಂತಾ ಅಳುತ್ತಲೇ ಪ್ರಯತ್ನ ಮಾಡಿದೆ, ಯಶಸ್ವಿ ಆದೆ ಅಷ್ಟೇ, ಪ್ರತಿಸಲ ತಾವು ಹೊಸ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಮ್ಮ ಕೆಲಸ ಆರಂಭಿಸಿ ಎಂಬ ಸಲಹೆ ನೀಡಿ, ಸೇರಿದ ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು..
ಇನ್ನು ಮತ್ತೊಬ್ಬ ಅಧಿಕಾರಿ ಗಜಾನನ ಮನೆ ಅವರು ಮಾತನಾಡಿ, ಓದಬೇಕು ಅಂತಾ ಓದಿದಾಗ ಪಾಸು ಆಗದೇ, ಕೆಲಸಕ್ಕೆ ಸೇರಿ, ನನ್ನ ತಪ್ಪುಗಳು ಅರ್ಥ ಆದ ಮೇಲೆ, ನಾನು ಆರನೆಯ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿ ಆಗಿರುವೆ ಎಂದು ನೆರೆದ ವಿಧ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆಯಾದರು..
ಇನ್ನು ಕೆಎಎಸ್ ಅಧಿಕಾರಿಗಳಾದ ಪಾಲಿಕೆಯ ಆಯುಕ್ತರು ಹಾಗೂ ಬೆಳಗಾವಿಯ ಉಪವಿಭಾಗಾಧಿಕಾರಿಗಳು ಈ ಕಾರ್ಯಾಗಾರದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದು, ಆಕಾಂಕ್ಷಿಗಳಿಗೆ ಹಲವು ಮಾಹಿತಿ, ಸಲಹೆ ಸೂಚನೆ ನೀಡಿದರು.
ಈ ಕಾರ್ಯಾಗಾರದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಪ್ರೊಬೇಷನರಿ ಐಎಎಸ್ ಅಧಿಕಾರಿಗಳು, ಪಾಲಿಕೆಯ ಆಯುಕ್ತರು, ಬೆಳಗಾವಿಯ ಉಪವಿಭಾಗಾಧಿಕಾರಿಗಳು, ಉದ್ಯೋಗ ಮತ್ತು ಮಾಹಿತಿ ಇಲಾಖೆಯ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಉದ್ಯೋಗ ವಿನಿಮಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..