ಐದು ಲಕ್ಷದ ನಕಲಿ ಮಧ್ಯದ ಘಟಕದ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ..
ತಯಾರಿಕಾ ಪರಿಕರಗಳ ಜಪ್ತಿ ಮಾಡಿದ ಅಬಕಾರಿ ಸಿಬ್ಬಂದಿ..
ಬೆಳಗಾವಿ : ಅಬಕಾರಿ ಅಪರ ಆಯುಕ್ತರು (ಅಪರಾಧ) ಕೇಂದ್ರಸ್ಥಾನ ಬೆಳಗಾವಿಯ ಮಂಜುನಾಥ್ ವೈ ಹಾಗೂ ಎಫ್ ಎಚ್ ಛಲವಾದಿ ಜಂಟಿ ಆಯುಕ್ತರು ಬೆಳಗಾವಿ ವಿಭಾಗ ಇವರ ಮಾರ್ಗದರ್ಶನದಲ್ಲಿ ಅಬಕಾರಿ ಅಧೀಕ್ಷಕರಾದ ವಿಜಯಕುಮಾರ ಹಿರೇಮಠ ಹಾಗೂ ಬಸವರಾಜ ಮುಡಶಿ, ರವಿ ಹೊಸಳ್ಳಿ , ಲಿಂಗರಾಜ ಅಬಕಾರಿ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿಗಳು ಸೇರಿಕೊಂಡು ಬ್ರಹತ್ ಪ್ರಮಾಣದ ನಕಲು ಮಧ್ಯದ ಘಟಕದ ಮೇಲೆ ದಾಳಿ ನಡೆಸಿದ್ದಾರೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದ ತೋಟದ ಮನೆಯಲ್ಲಿ ಸದರಿ ಅಬಕಾರಿ ತಂಡವು ಅನಿರೀಕ್ಷಿತವಾಗಿ ದಾಳಿ ನಡೆಸಿ, ಐದು ಲಕ್ಷ ಮೌಲ್ಯದ ನಕಲಿ ಮಧ್ಯದ ಘಟಕದ ಮೇಲೆ ದಾಳಿ ಮಾಡಿದ್ದಲ್ಲದೇ ನಕಲಿ ಮಧ್ಯ ತಯಾರಿಕೆಗೆ ಬೇಕಾಗಿರುವ ಪರಿಕರಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

ಬೆಳಗಾವಿಯ ಅಬಕಾರಿ ನಿರೀಕ್ಷಕರ ಜೆ ಸಿ ಈ ಕಚೇರಿಯಲ್ಲಿ ಈ ಪ್ರಕರಣವನ್ನು ದಾಖಲಿಸಿದ್ದು ಮುಂದಿನ ಕ್ರಮಕ್ಕಾಗಿ ಸೂಚಿಸಲಾಗಿದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ.