ಒತ್ತಡಕ್ಕೆ ಒಳಗಾಗದೇ, ರೆಬೆಲ್ ಆಗಿ ಉತ್ತರಿಸಿದ ಪಾಲಿಕೆ ಆಯುಕ್ತ ಅಶೋಕ್ ದುಡಗುಂಟಿ..
ಸಾಕ್ಷಿ ನೀಡಿದರೆ, 24 ಗಂಟೆಯೊಳಗೆ ಸಿಬ್ಬಂದಿ ಮತ್ತು ಏಜೆಂಟರ ಮೇಲೆ ಕ್ರಮ…
ನಾನು ಬಂದ ನಂತರ ತಪ್ಪು ನಡೆಯಲು ಬಿಟ್ಟಿಲ್ಲ, ಅದೇ ರೀತಿ ಹಿಂದೆ ನಡೆದ ತಪ್ಪುಗಳನ್ನು ಬಿಡುವದಿಲ್ಲ..
ಪಾಲಿಕೆಯ ಪರಿಷತ್ ಸಭೆಯಲ್ಲಿ ಆಯುಕ್ತರ ಪ್ರತಿಕ್ರಿಯೆ..
ಬೆಳಗಾವಿ : ಶನಿವಾರ ನಗರದ ಮಹಾನಗರ ಪಾಲಿಕೆಯ ಸಭಾಭವನದಲ್ಲಿ ಪಾಲಿಕೆಯ ಪರಿಷತ್ ಸಭೆಯು ಜರುಗಿದ್ದು, ಆಡಳಿತ ಪಕ್ಷ, ವಿರೋಧ ಪಕ್ಷ ಹಾಗೂ ಅಧಿಕಾರಿಗಳು ಸಮ್ಮುಖದಲ್ಲಿ ಹಲವಾರು ವಿಷಯಗಳ ಮಂಡನೆಯಾಗಿ ಚರ್ಚೆಗಳು ನಡೆದವು..

ಸಭೆ ಪ್ರಾರಂಭವಾದ ಮೊದಲಿಗೆ ಆಡಳಿತ ಪಕ್ಷದ ನಾಯಕರಾದ ರಾಜಶೇಖರ ದೋಣಿ ಅವರು ಚಂದ್ರಯಾನ ಯಶಸ್ವಿ ಕಾರ್ಯಾಚರಣೆ ಬಗ್ಗೆ ಮಾತನಾಡಿ ಕೇಂದ್ರ ಸರ್ಕಾರದ ಒಳ್ಳೆಯ ಕೆಲಸದಿಂದ ಇಂದು ನಮ್ಮ ದೇಶದ ಹೆಸರು ವಿಶ್ವದೆಲ್ಲೆಡೆ ಪ್ರಖ್ಯಾತಿ ಪಡೆದಿದೆ ಅದಕ್ಕೆ ನಮಗೆಲ್ಲ ಹೆಮ್ಮೆ ಎಂಬ ವಿಷಯ ಪ್ರಸ್ತಾಪಿಸಿದರು..
ನಗರ ಸೇವಕ ಹಣಮಂತ ಕೊಂಗಾಲಿ ಅವರು, ತೆರಿಗೆ ವಿಷಯವನ್ನು ಪ್ರಸ್ತಾಪಿಸಿ, ತೆರಿಗೆ ಹೆಚ್ಚಳದ ಅನಿವಾರ್ಯತೆ ತುಂಬಾ ಇದ್ದು, ಸರ್ಕಾರದ ನಿಬಂದನೆಯಂತೆ ಈ ವರ್ಷದಿಂದ ಜಾರಿಯಾಗುವಂತೆ ಶೇ 3 ರಿಂದ 5 ರಷ್ಟು ತೆರಿಗೆ ಹೆಚ್ಚಳ ಮಾಡಬೇಕು ಎಂಬ ಪ್ರಸ್ತಾವನೆ ಸಲ್ಲಿಸಿದಾಗ, ವಿರೋಧ ಪಕ್ಷದ ನಗರ ಸೇವಕ ಅಜೀಂ ಪಟೆಗಾರ ಅವರು ತೆರಿಗೆಯನ್ನು ಅವೈಜ್ಞಾನಿಕವಾಗಿ ಹೆಚ್ಚು ಮಾಡುವದಕ್ಕೆ ವಿರೋಧ ವ್ಯಕ್ತ ಪಡಿಸಿದರು..

ಅದಕ್ಕೆ ಮಧ್ಯ ಪ್ರವೇಶಿಸಿ ಮಾತನಾಡಿದ ಆಯುಕ್ತರು, 2019 ಮತ್ತು 20 ರಿಂದ ಇಲ್ಲಿವರೆಗೆ ಬೆಳಗಾವಿ ಹೊರತುಪಡಿಸಿ, ರಾಜ್ಯದ ಉಳಿದ ಎಲ್ಲಾ ಪಾಲಿಕೆಗಳಲ್ಲಿ ತೆರಿಗೆ ಪರಿಷ್ಕರಣೆ ಆಗಿದೆ, ಆದರೆ ಈಗ ನಮ್ಮ ಬೆಳಗಾವಿ ಪಾಲಿಕೆಯಲ್ಲಿಯೂ ಸರ್ಕಾರದ ಆದೇಶವನ್ನು ನಾವು ಪಾಲಿಸಬೇಕಿದೆ, ಶೇ 3 ರಿಂದ 5 ರಷ್ಟು ಹೆಚ್ಚು ಮಾಡಬೇಕು ಎಂಬುದು ಸರ್ಕಾರದ ಸುತ್ತೊಲೆಯಿದೆ, ಮುಂದಿನ ಅನುದಾನ ಬರುವಿಕೆಗೂ ಅನುಕೂಲ ಆಗಲು, ತೆರಿಗೆ ಹೆಚ್ಚಳ ಅನಿವಾರ್ಯವಾಗಿದೆ ಎಂದರು..

ಸ್ಲಂ ಪ್ರದೇಶಕ್ಕೆ ಡಬಲ್ ತೆರಿಗೆ ಯಾಕೆ ಎಂದು ನಗರ ಸೇವಕ ಅಜೀಂ ಪಟವೆಗರ ಪ್ರಶ್ನೆ ಮಾಡಿದಾಗ, ಕಂದಾಯ ಅಧಿಕಾರಿಯಾದ ರೇಷ್ಮಾ ತಾಳಿಕೋಟೆ ಅವರು ಮಾತನಾಡಿ, ಅನಧಿಕೃತ ಆಸ್ತಿಗಳಿಗೆ ಡಬಲ್ ತೆರಿಗೆ ಹಾಕುತ್ತೇವೆ ಎಂದಾಗ, ಅನಧಿಕೃತ ಆಸ್ತಿಗೆ ನೀವೇಕೆ ಅನುಮತಿ ನೀಡುತ್ತಿರಿ ಎಂದಾಗ ಅಧಿಕಾರಿಗಳು ಮೌನವಾದರು..
ಮಧ್ಯಪ್ರವೇಶಿಸಿದ ಆಯುಕ್ತರು ಈಗ ಎರಡು ತಿಂಗಳಿಂದ ಸರಿಯಾದ ದಾಖಲೆ ಇದ್ದಲ್ಲಿ ಮಾತ್ರ, ಆಸ್ತಿ ತೆರಿಗೆ ಪಡೆದು, ಪಿಐಡಿ ಸಂಖ್ಯೆ ಹಾಕಿ ಕೊಡುತ್ತಿದ್ದೇವೆ ಎಂದಾಗ, ಶಾಸಕ ರಾಜು ಸೇಠ ಅವರು ಮಾತನಾಡಿ ಜನರಿಗೆ ತೊಂದರೆ ಆಗದಂತೆ, ನಿಮ್ಮ ನಿಯಮವನ್ನೂ ಕೂಡ ಪಾಲಿಸಿಕೊಂಡು ಹೋಗಿ ಎಂಬ ಸಲಹೆ ನೀಡಿದರು..

ನಗರ ಸೇವಕ ದೊತ್ರೆ ಅವರು ಮಾತನಾಡಿ, ಸ್ಥಾಯಿ ಸಮಿತಿಯ ವಿಷಯಗಳ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು, ಮುಗಿದು ಹೋದ ವಿಷಯಗಳನ್ನು ಯಾಕೆ ಸಭೆಯ ಕಾರ್ಯಸೂಚಿಯಲ್ಲಿ ಸೇರಿಸುತ್ತಿರಿ ಎಂದು ಕೇಳಿದರು, ಪಿಡಬ್ಲ್ಯೂಡಿ ವಿಭಾಗದ ಮಾಹಿತಿ ಯಾಕೆ ಸಭೆಗೆ ತರುವುದಿಲ್ಲ ಎಂದು ಅಧಿಕಾರಿಗಳಿಗೆ ರೆಗಿದಾಗ, ಶಾಸಕರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು..
ಅಷ್ಟರಲ್ಲೇ ಆಡಳಿತ ಪಕ್ಷದ ನಗರ ಸೇವಕರಲ್ಲಿ ಒಬ್ಬರಾದ ವಾಣಿ ವಿಲಾಸ ಜೋಶಿ ಅವರು ನನಗೆ ಮಾಹಿತಿ ಒದಗಿಸಿದ್ದಾರೆ ಎಂದಾಗ, ರೇಗಿದ
ಆಡಳಿತ ಪಕ್ಷಕ್ಕೆ ಮತ್ತು ನಗರ ಸೇವಕರಿಗೆ ಮುಜುಗರ ಆಗುವ ಪರಿಸ್ಥಿತಿ ಉಂಟಾಗಬಹುದಿತ್ತೇನೋ, ಎನಿಸಿತ್ತು..
ಆಡಳಿತ ಪಕ್ಷದ ನಗರ ಸೇವಕರು ಚರ್ಚೆಯ ವಿಷಯವನ್ನು ಅನುಮೋದನೆ ಮಾಡಿ, ಮಾಡಿ, ಎಂದು ಮಹಾಪೌರರಿಗೆ ಆದೇಶ ಮಾಡಬಾರದು, ಅವರ ಗೌರವಕ್ಕೆ ದಕ್ಕೆ ತರಬಾರದು ಎಂದು ಅಜೀಂ ಪಟೆಗಾರ ದ್ವನಿ ಎತ್ತಿದಾಗ, ಶಾಸಕ ರಾಜು ಸೇಠ ಅವರೂ ಕೂಡಾ ಧ್ವನಿ ಗುಡಿಸಿದರು..

ಇನ್ನು ನಗರ ಸೇವಕ ಹನುಮಂತ ಕೊಂಗಾಲಿ ಅವರು, ಭೂಮಾಫಿಯಾ ಜೊತೆ ಪಾಲಿಕೆಯ ಅಧಿಕಾರಿಗಳು ಕೈಜೊಡನೆ ಮಾಡುವದು ತುಂಬಾ ಅಪಾಯಕಾರಿ, ಇದರಿಂದ ಬೆಳಗಾವಿ ನಗರವಾಸಿಗಳ ಬದುಕೇ ಅತಂತ್ರವಾಗುತ್ತದೆ, ಇದರ ಬಗ್ಗೆ ಅಧಿಕಾರಿಗಳು ಎಚ್ಚೆತ್ತು, ಯಾರದ್ದೋ ಆಸ್ತಿಯಲ್ಲಿ ಮತ್ತಾರದ್ದೋ ಹೆಸರು ದಾಖಲಿಸುವಾಗ ಸರಿಯಾಗಿ ಪರಿಶೀಲನೆ ಮಾಡಬೇಕು,
ಬಸವನ ಕುಡಚಿಯ ಆಸ್ತಿ ಸಂಖ್ಯೆ 4/6, ಕ್ಕೆ, ಎರಡು ಸಲ ಖರೀದಿ ನೋಂದಣಿ ಆಗಿದ್ದು, ಪಾಲಿಕೆ ಅಧಿಕಾರಿಗಳು ಮಾಡಿದ ಲೋಪದಿಂದ ಇಂದು ಆ ಆಸ್ತಿಯ ಮೊದಲನೆಯ ಮಾಲೀಕನಾದ ಪಾಗದ ಎಂಬುವವರು ಸಂಕಷ್ಟ ಅನುಭವಿಸುತ್ತಿದ್ದು, ಅದರ ಸಮಸ್ಯೆಯನ್ನು ಆಯುಕ್ತರು ಪರಿಹರಿಸಬೇಕು ಎಂದರು..
ಇದಕ್ಕೆ ಉತ್ತರ ನೀಡಿದ ಆಯುಕ್ತರು, ನಗರ ಸೇವಕರು ಹೇಳಿದ ಮಾತು ಸರಿ ಇದ್ದು, ಆಸ್ತಿಯ ಖಾತಾ ಬದಲಾವಣೆ, ಹೆಸರು ನೋಂದಣಿ ಈ ವಿಷಯಗಳ ಅಂತಿಮ ನಿರ್ಧಾರವನ್ನು ಕಂದಾಯ ವಿಭಾಗದ ಡಿಸಿ ಅವರ ಅಧಿನದಲ್ಲಿರುತ್ತದೆ, ತಾವು ತಿಳಿಸಿದ ಮೇಲೆ ಸಮಸ್ಯೆ ಇರುವ ಆಸ್ತಿಯ ವಿಷಯವನ್ನು ನಾನು ಪರಿಶೀಲಿಸಿ, ಆ ಆಸ್ತಿ ಸಂಖ್ಯೆಯಲ್ಲಿ ಬ್ಲಾಕ್ ಮಾಡಿದ್ದೇನೆ ಎಂದರು..

ಬ್ಲಾಕ್ ಮಾಡಿದರೆ ಸಾಲದು, ಮೊದಲು ಇದ್ದ ಹಾಗೆ ಮೊದಲನೇ ಮಾಲೀಕನ ಹೆಸರಿನಲ್ಲೇ ಆಸ್ತಿ ದಾಖಲೆ ನೀಡಬೇಕು ಎಂದು ನಗರ ಸೇವಕ ಕೊಂಗಾಲಿ ಅವರು ಹೇಳಿದಾಗ, ಆಯುಕ್ತರಿಗೆ ನಗರ ಸೇವಕರಿಗೆ ಸ್ವಲ್ಪ ವಾದ ವಿವಾದವೇ ನಡೆಯಿತು, ಕೊನೆಗೆ ಆಯುಕ್ತರು ಒಂದು ಸಲ ನೊಂದಣಿ ಆದ ಆಸ್ತಿಯನ್ನು ನಾನು ಆ ನೊಂದಣಿ ರದ್ದು ಮಾಡಿ, ಮೊದಲಿನ ದಾಖಲೆ ನೀಡಲು ಬರುವದಿಲ್ಲ, ಆಸ್ತಿ ಸಂಖ್ಯೆಯನ್ನು ಬ್ಲಾಕ್ ಮಾಡಲು ಅಷ್ಟೇ ನನ್ನ ಅಧಿಕಾರ ಇರುವದರಿಂದ ಆ ಕೆಲಸ ನಾನು ಮಾಡಿದ್ದೇನೆ, ಯಾರದು ನ್ಯಾಯ, ಯಾರದು ಅನ್ಯಾಯ ಎಂದು, ನ್ಯಾಯಾಲಯದ ಮೂಲಕ ತೀರ್ಮಾನಿಸಿಕೊಳ್ಳಿ ಎಂದು ಈಗಾಗಲೇ ಅವರಿಗೆ ತಿಳಿಸಿದ್ದು ಆಗಿದೆ, ಈ ವಿಷಯದಲ್ಲಿ ಪಾಲಿಕೆಯಿಂದ ಇಷ್ಟೇ ಆಗೋದು ಎಂದರು.
ಇನ್ನು ಬಹುತೇಕ ನಗರಸೇವಕರು ಮಾತನಾಡಿ, ಆಸ್ತಿಗಳ ಪಿಐಡಿ ಸಂಖ್ಯೆ ಹಾಕುವ ವಿಷಯದಲ್ಲಿ ಏಜೆಂಟರು ಹಾಗೂ ಕಂದಾಯ ಸಿಬ್ಬಂದಿಗಳು ಭ್ರಷ್ಟಾಚಾರ ಮಾಡುತ್ತಿದ್ದು, ಬೇರೆ ಸಾಮಾನ್ಯರು ಹಾಗೂ ನಗರ ಸೇವಕರು ಹೋದರೆ ಕೆಲಸ ಆಗದೇ, ಏಜೆಂಟರು ಹೋದಾಗ ಮಾತ್ರ ಕೆಲಸ ಆಗುತ್ತೆ, ಒಂದು ಪಿಐಡಿಗೆ 20 ರಿಂದ 30 ಸಾವಿರ ಹಣ ಪಡೆಯುವ ಸಿಬ್ಬಂದಿ ಪಾಲಿಕೆಯಲ್ಲಿ ಇದೆ, ಇದು ನಿಲ್ಲಬೇಕು ಎಂದಾಗ,
ಅದಕ್ಕೆ ಉತ್ತರಿಸಿದ ಆಯುಕ್ತರು, ನಾನು ಅಧಿಕಾರ ವಹಿಸಿಕೊಂಡ ನಂತರ ಯಾವ ಅನಧಿಕೃತ ಆಸ್ತಿಗಳಿಗೂ ಊತಾರ ನೀಡುತ್ತಿಲ್ಲ, ತಾವು ಹೇಳುವ ಪ್ರಕಾರ ನಮ್ಮ ಸಿಬ್ಬಂದಿ ತಪ್ಪು ಮಾಡಿದರೆ, ತಾವು ಸಾಕ್ಷಿ ನೀಡಿದರೆ, 24 ಗಂಟೆಯಲ್ಲಿ ಅಮಾನತ್ತು ಮಾಡುವೆ, ಯಾವುದಾದರೂ ಮಧ್ಯವರ್ತಿಗಳು (ಏಜೆಂಟ್) ಭಾಗಿಯಾಗಿದ್ದರೆ ಅಂತವರ ಮೇಲೆ ಎಫ್ಐಆರ್ ಹಾಕಲಾಗುವುದು ಎಂದು ಖಡಕ್ಕಾಗಿ ಹೇಳಿದರು..

ಇಲ್ಲಿ ಎಲ್ಲವನ್ನೂ ಓಪನ್ ಆಗಿ ಮಾತನಾಡಲು ಆಗೋಲ್ಲ, ವ್ಯವಸ್ಥೆ ಸುಧಾರಣೆಗೆ ಎಲ್ಲರೂ ಸಹಕರಿಸಬೇಕು, ನನ್ನ ಅವಧಿಯಲ್ಲಿ ಯಾವುದೇ ತಪ್ಪು ನಡೆಯಲು ಅವಕಾಶ ನಿಡುವದಿಲ್ಲ, ಹಿಂದಿನ ಅವಧಿಯಲ್ಲಿ ನಡೆದ ತಪ್ಪುಗಳನ್ನೂ ಕೂಡಾ ಸುಮ್ಮನೆ ಬಿಡುವದಿಲ್ಲ ಎಂದರು..
ಬೆಳಗಾವಿ ಮಹಾನಗರ ಪಾಲಿಕೆಯ ಈ ಪರಿಷತ್ ಸಭೆಯ ಲಕ್ಷಣ ನೋಡಿದರೆ, ನಗರ ಸುಧಾರಣೆ ಹಾಗೂ ಅಭಿವೃದ್ದಿಯ ವಿಷಯಕ್ಕಿಂತ, ಒಬ್ಬರ ತಪ್ಪು ಮತ್ತೊಬ್ಬರು ಹೇಳುವುದೇ ಹೆಚ್ಚಾಗಿದ್ದು, ಬರುವ ದಿನಗಳಲ್ಲಾದರೂ ಕೂಡಾ ಕಟ್ಟುನಿಟ್ಟಾದ ನಿಯಮಗಳ ಕಾರ್ಯಗಳು ಹಾಗೂ ಮಹಾನಗರ ಅಭಿವೃದ್ದಿಯ ಕೆಲಸಗಳು ನಡೆಯಲಿ ಎಂಬುದೇ ಎಲ್ಲರ ಆಶಯ..
ವರದಿ ಪ್ರಕಾಶ ಕುರಗುಂದ..