ಒತ್ತಡದ ನಡುವೆ ಹಸನ್ಮುಖಿಯಾಗಿ, ವೃತ್ತಿಪರವಾಗಿ ಕೆಲಸ ಮಾಡಿದ್ದು ಸೊಬರದರ ಸ್ವಭಾವ..
ಅನುಕಂಪದ ಆಧಾರದಲ್ಲಿ ನೇಮಕವಾಗಿ, ಪಿಡಬ್ಲ್ಯೂಡಿಯ ದೊಡ್ಡ ಹುದ್ದೆಯಲ್ಲಿ ಮಾದರಿ ಹಾಗೂ ಸಾರ್ಥಕ ಸೇವೆ..
ಮಹಾಂತೇಶ ಕವಟಗಿಮಠ, ಮಾಜಿ ಮುಖ್ಯ ಸಚೇತಕರು ಕರ್ನಾಟಕ ಸರ್ಕಾರ..
ಬೆಳಗಾವಿ : ಬಸವಣ್ಣನವರು ಹೇಳಿದ ಹಾಗೆ ಲೇಸೀನೆಸಿಕೊಂಡು ಐದು ದಿನ ಬದುಕಿದರೇನು? ನಾಲ್ಕು ದಿನ ಬದಿಕಿದರೇನು? ಮೂರು ದಿನ ಬದುಕಿದರೇನು? ಎರಡು ದಿನ ಬದುಕಿದರೇನು? “ಸಾರ್ವಜನಿಕ ಬದುಕಿನಲ್ಲಿ ಎಲ್ಲರಿಂದಲೂ ಲೇಸೇನಿಸಿಕೊಂಡು ಒಂದು ದಿನ ಬದುಕಿದರೂ ಸಾಕು” ಎನ್ನುವ ರೀತಿಯಲ್ಲಿ ಬದುಕಿದವವರು ನನ್ನ ಆತ್ಮೀಯ ಸ್ನೇಹಿತ ಸಿದ್ದಣ್ಣ ಸೊಬರದ ಅವರು ಎಂದು ರಾಜ್ಯ ಸರ್ಕಾರದ ಮಾಜಿ ಮುಖ್ಯ ಸಚೇತಕರಾದ ಮಹಾಂತೇಶ್ ಕವಟಗಿಮಠ ಹೇಳಿದ್ದಾರೆ..
ಶುಕ್ರವಾರ ದಿನಾಂಕ 02/01/2026ರಂದು ನಗರದ ಖಾಸಗಿ ಸ್ಥಳದಲ್ಲಿ, ಬೆಳಗಾವಿ ಲೋಕೋಪಯೋಗಿ ಇಲಾಖೆ ಸಿಬ್ಬಂದಿಗಳ ವತಿಯಿಂದ ಆಯೋಜನೆಗೊಂಡ, ಶ್ರೀ ಎಸ್ ಎಸ್ ಸೊಬರದ, ಕಾರ್ಯನಿರ್ವಾಹಕ ಇಂಜಿನೀಯರ್, ಲೋಕೋಪಯೋಗಿ ಇಲಾಖೆ ಬೆಳಗಾವಿ ಇವರ ವಯೋನಿವೃತ್ತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಅಥಿತಿಗಳಾಗಿ ಆಗಮಿಸಿದ ಮಹಾಂತೇಶ್ ಕವಟಗಿಮಠ ಅವರು, ತಮ್ಮ ಸ್ನೇಹಿತನ ಆರಂಭಿಕ ಜೀವನದ ಸವಾಲುಗಳು, ವೃತ್ತಿಪರತೆ, ಗುಣಸ್ವಭಾವ, ಸಾಧನೆಯಿಂದ ಕೂಡಿದ ಸಾರ್ಥಕ ಸೇವೆಯ ಬಗ್ಗೆ ಹೃದಯತುಂಬಿ ಮಾತನಾಡಿದರು..

ಸೊಬರದ ಅವರ ತಂದೆಯವರು ಕಾಲವಾದಾಗ ಇವರು ಆಗ ಅತ್ಯಂತ ಯುವಕರು, ಅವರ ತಾಯಿಯವರ ಧೈರ್ಯ ಹಾಗೂ ಮಾರ್ಗದರ್ಶನವು ಅವರನ್ನು ಮೆಕ್ಯಾನಿಕಲ್ ನಿಂದ ಸಿವಿಲ್ ಇಂಜಿನೀಯರ್ ಕಡೆಗೆ ಬರುವಂತೆ ಆಗಿ, ತಮ್ಮ ವಿದ್ಯಾಭ್ಯಾಸವನ್ನೆಲ್ಲ ಮುಗಿಸಿಕೊಂಡು, ಅನುಕಂಪದ ಆಧಾರದ ಮೇಲೆ ನೇಮಕಗೊಂಡು, ಇಂದು ಬೆಳಗಾವಿ ನಗರದ ಲೋಕೋಪಯೋಗಿ ಇಲಾಖೆಯಲ್ಲಿ ಉನ್ನತ ಹುದ್ದೆಯಾದ ಕಾರ್ಯನಿರ್ವಾಹಕ ಇಂಜಿನೀಯರ್ ಹುದ್ದೆಯಲ್ಲಿ ಯಶಸ್ವಿ ಅಧಿಕಾರಿಯಾಗಿ, ತಮ್ಮ ವೃತ್ತಿಜೀವನವನ್ನು ವ್ಯವಸ್ಥಿತವಾಗಿ ಮುಗಿಸಿ, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರಿಗೆ ನಮ್ಮ ಎಲ್ಲಾ ಸ್ನೇಹಿತ ಬಳಗದ ವತಿಯಿಂದ ಅಭಿನಂದನೆಗಳನ್ನು ತಿಳಿಸುತ್ತೇವೆ ಎಂದರು.

ನಗರಗಳ ಅಭಿವೃದ್ಧಿ ಹಾಗೂ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಇಂಜಿನಿಯರ್ ಪದವೀಧರರಿಗೆ ಬಹಳ ಮಹತ್ವ ಇದೆ ಎಂದ ಅವರು, ಸೊಬರದ ಯಾವಾಗಲೂ ಹಸನ್ಮುಖಿ, ಎಂತಹ ಒತ್ತಡಗಳ ಪರಿಸ್ಥಿತಿಯಲ್ಲಿಯೂ ಯಶಸ್ವಿಯಾಗಿ ಕೆಲಸ ಮಾಡುವ ಸ್ವಭಾವ, ಅವರಿಗೆ ಅಪೇಕ್ಷಗಳು ಕೂಡಾ ಕಡಿಮೆಯೇ, ಬಂದದ್ದನ್ನು ಬಂದಂಗೆ ಸ್ವೀಕರಿಸುವ ತಮ್ಮ ಸರಳ ಸ್ವಭಾವದಿಂದ ಇಂದು ತಮ್ನ ವೃತ್ತಿಜೀವನವನ್ನು ಮಾದರಿಯಾಗಿ ಪೂರ್ಣಗೊಳಿಸಿದ್ದಾರೆ ಎಂದರು.

ಸೊಬರದರನ್ನು ಸೇರಿಸಿ ಬಹುಕೇತ ಎಲ್ಲಾ ಇಂಜಿನೀಯರಗಳ ಸಮಸ್ಯೆ ಅಂದರೆ ತಾವು ಸಾರ್ವಜನಿಕ ಬದುಕಿನಲ್ಲಿ ಕೆಳೆಗೆ ಇರುವಂತಹ ಸಾಮಾನ್ಯ ಜನರಿಂದಲೂ ಶಹಬ್ಬಾಶಗಿರಿ ತಗೆದುಕೊಳ್ಳಬೇಕು, ಮೇಲಿರುವ ರಾಜಕಾರಣಿಗಳು, ಮೇಲಾಧಿಕಾರಿಗಳಿಂದಲೂ ಒಳ್ಳೆಯವರೆಂದು ಕರೆಸಿಕೊಳ್ಳಬೇಕಾದ ಸವಾಲು ಇರುತ್ತದೆ, ಆಗ ತಾವು ನಿಜವಾಗಿ ಅತ್ಯಂತ ವೃತ್ತಿಪರವಾಗಿ ಕೆಲಸ ಮಾಡಿದಾಗ ಮಾತ್ರ ಎಲ್ಲರಿಂದ ಹೌದು ಎನಿಸಿಕೊಳ್ಳುತ್ತಿರಿ, ಆ ನಿಟ್ಟಿನಲ್ಲಿ ಸೊಬರದ ಅವರು ತಮ್ಮ ಸೇವೆಯಲ್ಲಿ ಆದರ್ಶಪ್ರಾಯರಾಗಿದ್ದಾರೆ ಎಂದರು..

ಇದೇ ಸಂದರ್ಭದಲ್ಲಿ ಸೊಬರದ ಅವರ ಸಹೋದ್ಯೋಗಿಗಳು, ಹಿತೈಷಿಗಳು ಹಾಗೂ ಗುತ್ತಿಗೆದಾರರು ವೇದಿಕೆ ಮೇಲೆ ಸೊಬರದ ಅವರ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಎಲ್ಲರ ಸಮಸ್ಯೆಗಳಿಗೆ ಅವರು ಸ್ಪಂದಿಸುವ ರೀತಿ, ಎಷ್ಟೇ ದೊಡ್ಡ ಸಮಸ್ಯೆ ಇದ್ದರೂ ನಗುನಗುತ್ತಲೇ ಪರಿಹರಿಸುವ ಚಾಕಚಖ್ಯತೆ, ನ್ಯಾಯಾಲಯದಲ್ಲಿಯ ವಿಷಯಗಳನ್ನು ನಿರ್ವಹಿಸುವ ಜಾಣತನ, ಅದರಿಂದ ಇಲಾಖೆಗೆ ಆದ ಲಾಭಗಳು, ಸಮಯವನ್ನು ಲೆಕ್ಕಿಸದೇ ಕೆಲಸ ಮಾಡುವ ಹಠ, ಬೆಳಗಾವಿಯಲ್ಲಿ ಜರುಗಿದ ನಾಲ್ಕು ಚಳಿಗಾಲ ಅಧಿವೇಶನ, ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ, ಯಡಿಯೂರಪ್ಪ ಮಾರ್ಗದ ಸವಾಲಿನ ನಿರ್ಮಾಣ, ಬೆಳಗಾವಿ ಸುವರ್ಣಸೌಧದ ಎದುರಿನ ಮಹಾರುಷರ ಪ್ರತಿಮೆಗಳು, ಬ್ರಹತ್ತಾದ ಗಾಂಧಿ ಪ್ರತಿಮೆ ನಿರ್ಮಾಣ, ಕಾರಂಜಿಯ ಉದ್ಯಾನವನ, ದೀಪಾಲಂಕಾರದ ಕಾರ್ಯಗಳ ಹಾಗೂ ಪರಿಸ್ಥಿತಿಗಳನ್ನು ಎದುರಿಸಿ ಅವರು ಕೆಲಸ ಮಾಡಿದ ಕ್ಷಣಗಳನ್ನು ಮೆಲುಕುಹಾಕಿ ಸೊಬರದ ಅವರ ಕಾರ್ಯವೈಖರಿಯನ್ನು ಕೊಂಡಾಡಿದರು..

ಇನ್ನು ಅವರ ಅಧಿಕಾರದ ಅವಧಿಯಲ್ಲಿಯೇ ಅನುಮೋದನೆಗೊಂಡಂತ ಬ್ರಹತ್ ಯೋಜನೆಗಳಾದ ಬೆಳಗಾವಿಯ ರಿಂಗ್ ರೋಡ್, ಜಿಲ್ಲಾಧಿಕಾರಿ ಕಟ್ಟಡದ ಸಮುಚ್ಚಯ, ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಯಂತಹ ಮಹಾ ಯೋಜನೆಗಳ ಅನುಮೋದನೆ ಪಡೆದಿದ್ದು ಸೊಬರದ ಅವರ ವೃತ್ತಿನಿಷ್ಠೆಗೆ ನಿದರ್ಶನವಾಗಿದೆ ಎಂದ ಹಿತೈಷಿಗಳು, ಅವರ ನಿವೃತ್ತಿ ಜೀವನ ಸುಖ ಸಮೃದ್ಧಿ ಆರೋಗ್ಯ ನೆಮ್ಮದಿಯಿಂದ ಕೂಡಿರಲಿ, ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ಭಾಗಿಯಾಗಲಿ ಎಂದು ತಮ್ಮ ಶುಭಾಶಯಗಳನ್ನು ತಿಳಿಸಿದರು..

ವರದಿ ಪ್ರಕಾಶ ಬಿ ಕುರಗುಂದ..